ಶೀಘ್ರದಲ್ಲೇ ಮುಕ್ತಾಯವಾಗುತ್ತಿದೆ ಜೀ ವಾಹಿನಿಯ ನಿಮ್ಮೆಲ್ಲರ ನೆಚ್ಚಿನ ಧಾರಾವಾಹಿ..

ಸಿನಿಮಾ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿಗಳಲ್ಲಿ ನಾಗಿಣಿ ಧಾರವಾಹಿ ಹೆಚ್ಚು ಜನಪ್ರಿಯತೆಗಳಿಸಿದೆ.  ಫ್ಯಾಂಟಸಿ ಸೀರಿಯಲ್ ಎಂದೇ ಹೆಸರು ಮಾಡಿರುವ ನಾಗಿಣಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. 2016ರಲ್ಲಿ ನಿರ್ದೇಶಕ ಹಯವದನ ರವರ ನಿರ್ದೇಶನಲ್ಲಿ ಶುರುವಾದ ಈ ನಾಗಿಣಿ ಧಾರಾವಾಹಿ ಈಗ ಅಂತ್ಯವಾಗುತ್ತಿದೆ.

ಹೌದು, ರಾಜ್ಯಾದ್ಯಂತ ದೊಡ್ಡಮಟ್ಟದ ಜನಪ್ರಿಯತೆಗಳಿಸಿದ‌ ನಾಗಿಣಿ‌ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಇನ್ನೇನೂ ಕೆಲವೇ ದಿನಗಳಲ್ಲಿ 1000 ಸಂಚಿಕೆಗಳನ್ನು ಪೂರೈಸುತ್ತಿದ್ದೂ , ಅದರೊಂದಿಗೆ ಧಾರವಾಹಿಯನ್ನು ಮುಕ್ತಾಯಗೊಳಿಸುತ್ತಿದೆ.

ಒಂದು ಹೆಣ್ಣು ನಾಗಿಣಿಯ ಸೇಡಿಯ ಸುತ್ತಾ ಶುರುವಾದ ಈ ಧಾರವಾಹಿ, ಈಗ ತನ್ನ ಕಥೆಯ ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ತನ್ನ ಕಥೆಗೆ ಶುಭವಿಧಾಯ ಹೇಳುತ್ತಿದೆ. ಮೂಲಗಳ ಪ್ರಕಾರ ನವೆಂಬರ್ ತಿಂಗಳ ವರೆಗೆ ಪ್ರಸಾರವಾಗಲಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಇಷ್ಟು ದಿನಗಳ ವರೆಗೆ ಕಿರುತೆರೆ ವೀಕ್ಷಕರನ್ನು ರಂಜಿಸಿದ ನಾಗಿಣಿ ಧಾರವಾಹಿಯ ಅಭಿಮಾನಿಗಳು, ತಪ್ಪದೇ ಕೊನೆಯ ಸಂಚಿಕೆಗಳು ವೀಕ್ಷಿಸಿ…