ಯಲ್ಲೋ ಬೋರ್ಡ್ ಪೋಸ್ಟರ್ ಗೆ ಪೈಲ್ವಾನ್ ಕಿಚ್ಚನ ವಿಶ್..

ಸಿನಿಮಾ

ನಟ ಪ್ರದೀಪ್ ಹುಟ್ಟುಹಬ್ಬದ ಪ್ರಯುಕ್ತಯಲ್ಲೋ ಬೋರ್ಡ್ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯ್ತು.. ಅಂದಹಾಗೆ ಈ ಪೋಸ್ಟರ್ ಅನ್ನ ರಿವೀಲ್ ಮಾಡಿದ್ದು, ಕಿಚ್ಚ ಸುದೀಪ್ ಅವರು.. ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಬಿಡುಗಡೆಗೊಳಲಿ, ನಟ ಪ್ರದೀಪ್ ಹಾಗು ಇಡೀ ಚಿತ್ರತಂಡಕ್ಕೆ ಶುಭಾಯಶ ತಿಳಿಸಿದ್ರು.. ಪೋಸ್ಟರ್ ಬಿಡುಗಡೆಗೊಳ್ಳುತ್ತಿದ್ದ ಹಾಗೆ ಸಿನಿ ಮಂದಿಯ ವಲಯದಲ್ಲಿ ಈ ಬಗ್ಗೆ ಚರ್ಚೆ ಕೂಡ ಶುರುವಾಗಿದೆ..

ಇದಕ್ಕೆ ಕಾರಣ ಪೋಸ್ಟರ್ ಡಿಸೈನ್ ಮಾಡಿರೋದು ಹಾಗೆ ಸಿನಿಮಾದ ಟೈಟಲ್.. ಗೂಗಲ್ ಮ್ಯಾಪ್, ಯುಬಿ ಸಿಟಿ, ವಿಧಾನಸೌದ, ರಕ್ತಸಿಕ್ತ ನಾಯಕ ಮುಖ, ಈ ಎಲ್ಲವು ಯಲ್ಲೋ ಬೋರ್ಡ್ ನಲ್ಲಿ ಇಂಟ್ರಸ್ಟಿಂಗ್ ಏನೋ ಇದೆ ಅನ್ನೊಸೋಕೆ ಶುರು ಮಾಡಿದೆ..

ವಿಂಟೇಜ್ ಫಿಲಂಸ್ ಬ್ಯಾನರ್ ನಡಿಯಲ್ಲಿ ಗೌತಮ್ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ‌ ಮಾಡಿದ್ದ ತ್ರಿಲೋಕ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ..