ಕೆಜಿಎಫ್ ಸಕ್ಸಸ್ ನಲ್ಲಿ ಯಶ್ ಅವರನ್ನ ಕಾಡುತ್ತಿದೆ ಇದೊಂದು ನೋವು..!!

ಸಿನಿಮಾ

ಕೆಜಿಎಫ್ ಸಕ್ಸಸ್ ನಲ್ಲಿ ಯಶ್ ಅವರನ್ನ ಕಾಡುತ್ತಿದೆ ಇದೊಂದು ನೋವು..!!

ಕೆಜಿಎಫ್ಸಿನಿಮಾಇಂದುತೆರೆಕಂಡುಎಲ್ಲೆಡೆಉತ್ತಮಪ್ರತಿಕ್ರಿಯೆಗಿಟ್ಟಿಸಿಕೊಳ್ತಿದೆ.. ವರ್ಷದ ಕೊನೆಯಲ್ಲಿ ದೊಡ್ಡ ಸಕ್ಸಸ್ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.. ಎಲ್ಲೆಡೆ ರಾಕಿಂಗ್ ಸ್ಟಾರ್ ಅಭಿನಯನಕ್ಕೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.. ಕನ್ನಡ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸಿದ್ದವಾಗುತ್ತಿದೆ

ಇಡೀ ಚಿತ್ರತಂಡ ಸಿನಿಮಾ ಗೆದ್ದ ಖುಷಿಯಲ್ಲಿದೆ.. ಆದರೆ ಈ ಸಂದರ್ಭದಲ್ಲಿ ಅವರ ನೆನಪು ಕಾಡದೆ ಇರದು.. ಅದು ರೆಬಲ್ ಸ್ಟಾರ್ ಅಂಬರೀಶ್ ಅವರದ್ದು.. ಇಂದು ಅಂಬಿ ಅವರ ಮೊದಲ ತಿಂಗಳ ಪುಣ್ಯ ತಿಥಿಯನ್ನ ಕುಟುಂಬ ಸದಸ್ಯರು ಕಂಠೀರವ ಸ್ಟೂಡಿಯೋದಲ್ಲಿ ನೆರವೇರಿಸಿದ್ದಾರೆ..

ಇನ್ನು ಕೆಜಿಎಫ್ ನ ಮೊದಲ ಪ್ರೆಸ್ ಮೀಟ್ ಸಂದರ್ಭದಲ್ಲಿ ಯಶ್ ಗೆ ಸಾಥ್ ನೀಡಿದ್ರು ರೆಬಲ್ ಸ್ಟಾರ್ ಅಂಬರೀಶ್ ಅವರು.. ಅಂದು ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಡೀ ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯವನ್ನ ಕೋರಿದ್ರು.. ಆದರೆ ಇಂದು ಸಿನಿಮಾ ರಿಲೀಸ್ ಆಗಿದೆ.. ಇದನ್ನ ನೋಡಲು ಅಂಬಿ ಅವರು ನಮ್ಮೊಂದಿಗಿಲ್ಲ..

ಹೀಗಾಗೆ ಯಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಿಸ್ ಯು ಅಣ್ಣ ಅಂತ ಬರೆದಿದ್ದಾರೆ.. ಚಿರನಿದ್ರೆಗೆ ಜಾರಿರುವ ಅಂಬಿ ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದ್ರು ಅವರು ಎಂದೆಂದಿಗು ಕನ್ನಡ ನಾಡಿನಲ್ಲಿ ಅಮರ..