ವರಮಹಾಲಕ್ಷ್ಮಿ ದೇವಿ ಪೂಜೆಗೆ ಯಾವ ಹೂವುಗಳನ್ನೂ ಬಳಸಬೇಕು ಬಳಸಲೇ ಬಾರದು..!

ಲೈಫ್‍ಸ್ಟೈಲ್

ಶ್ರೀ ವರಮಹಾಲಕ್ಷ್ಮೀ ಪ್ರೀತ್ಯರ್ಥ ಸರ್ವಸಿದ್ದಿ ಇಷ್ಟಾರ್ಥ ಪ್ರಾಪ್ತಿರಸ್ತು. ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳಲ್ಲಿ ನಾಗರ ಪಂಚಮಿ ಹಾಗೂ ಶ್ರೀದೇವಿ ಮಹಾಲಕ್ಷ್ಮಿ ಹಬ್ಬ ಮುಖ್ಯವಾದುದು. ಶ್ರೀವರಮಹಾಲಕ್ಷ್ಮೀ ದೇವಿಯ ಪೂಜೆಗೆ ವ್ರತ, ನಿಯಮ, ಮಡಿ ಪೂಜೆ ಬಹಳ ಮುಖ್ಯ. ದೇವಿಯ ಅನುಗ್ರಹ ಬೇಕೆಂದರೆ ಇವೆಲ್ಲವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದಕ್ಕೆಂದೇ ಈ ಹಬ್ಬವನ್ನು ಹಬ್ಬ ಎನ್ನುವುದಕ್ಕಿಂತ ವ್ರತ ಎನ್ನುವುದೇ ಸೂಕ್ತ.

ಇನ್ನು ದೇವಿಗೆ ಪ್ರಿಯವಾದ ವಸ್ತುಗಳಿಂದ ಪೂಜಿಸಿದರೆ ದೇವಿ ಒಲಿಯುವಳು ಎನ್ನುವ ನಂಬಿಕೆ ಮೊದಲಿಂದಲೂ ಇದೆ. ಹಾಗಾಗಿ, ದೇವಿಗೆ ಅಲಂಕಾರ ಮಾಡುವಾಗ ಈ ವಿಷಯವನ್ನು ನೆನಪಿಡಿ. ಎಲ್ಲಕ್ಕಿಂತ ಮುಖ್ಯವಾಗಿ ಹತ್ತಿಯಿಂದ ಮಾಡಿದ ಗೆಜ್ಜೆವಸ್ತ್ರ ಇಡುವುದು ಒಳ್ಳೆಯದು. ಹೂವಿನ ಸ್ಥಾನ ನಂತರದ್ದು ಆಮೇಲೆ ಒಡವೆಗಳು ಹಾಗೂ ಅಲಂಕಾರಿಕ ವಸ್ತುಗಳು.

ಇನ್ನು ಹೂವಿನ ವಿಷಯಕ್ಕೆ ಬಂದರೆ, ಲಕ್ಷ್ಮಿಗೆ ಮಾಣಿಕದ ಹಾಗೂ ಶ್ವೇತ ವರ್ಣದ ಪುಷ್ಪಗಳು ಪ್ರಿಯ. ಇನ್ನು ವಿಧಕ್ಕೆ ಬಂದರೆ ಈ ವಿಧದ ಹೂವನ್ನು ಬಳಸಿ. ತುಳಸೀ ಪತ್ರೆಗಳು ಶಾಂತಿ ಸಮಾಧಾನ ಪ್ರತಿನಿಧಿಸುತ್ತದೆ. ಎಲ್ಲೆಡೆ ಆರೋಗ್ಯ ಪಸರಿಸುತ್ತದೆ. ಹಾಗಾಗಿ ತುಳಸಿಹಾರ ಉಪಯೋಗಿಸುವುದು ಒಳ್ಳೆಯದು. ಇದರಿಂದ ಸಂತೃಪ್ತಿ ದೊರೆಯುವುದಲ್ಲದೆ, ಮನೆಯ ಮುಖ್ಯಸ್ಥನ ಗ್ರಹದೋಷ ನಿವಾರಣೆಯಾಗುತ್ತದೆ. ಇನ್ನು ಕಮಲ ಹೂವು. ಕೆಂಪುಬಣ್ಣದ ಕಮಲದ ಹೂವಿನಲ್ಲಿ ದೇವಿ ಆಸೀನಳಾಗಿರುವುದರಿಂದ ಇದನ್ನು ಬಳಸುವುದು ಸೂಕ್ತ.

ಇನ್ನು ಸುಗಂಧಭರಿತ ಮಲ್ಲಿಗೆ. ಇದನ್ನು ಬಳಸುವುದರಿಂದ ಗೃಹದೋಷ, ವಾಮದೋಷ ನಿವಾರಣೆಯಾಗುತ್ತದೆ. ಹಳದಿ ಅಥವಾ ಶ್ವೇತವರ್ಣದ ಸೇವಂತಿಗೆ ಬಳಸುವುದರಿಂದ ಗುರು ಅನುಗ್ರಹ ದೊರೆಯುತ್ತದೆ. ಇದನ್ನು ಬಳಸಬಹುದು. ಇನ್ನು ಕಣಿಗಿಲೆ ಚೆಂಡುಹೂ ತುಂಬೆಹೂ ಎಕ್ಕ ಬಳಸಬೇಡಿ! ತುಂಬೆ,ಎಕ್ಕ,ಗರಿಕೆ ಗಣೇಶನಿಗೆ ಬಳಸಬಹುದು. ವ್ರತದ ಕೊನೆಯಲ್ಲಿ ಮುತ್ತೈದೆಯರಿಗೆ ಹೂವು ನೀಡುವಾಗ ಗುಲಾಬಿ ಬಳಸಬಹುದು.