ಹುತಾತ್ಮ ಯೋಧರ ಪೋಷಕರಿಂದ ವಿರಾಟಪರ್ವ ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆ..‌‌

ಸಿನಿಮಾ

ಮುದ್ದು ಮನಸೇ ಖ್ಯಾತಿ ನಿರ್ದೇಶಕ ಆನಂತ್ ಶೈನ್ ನಿರ್ದೇಶನದ ವಿರಾಟಪರ್ವ ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಯಾಗಿದೆ. ಮೈಸೂರಿನ‌ ಹುತಾತ್ಮ ಯೋಧ ಹೇಮಚಂದ್ರ ತಂದೆತಾಯಿ ಅವರಿಂದ ನಟ ಯಶ್ ಶೆಟ್ಟಿಯ ಸೈನಿಕ ಲುಕ್ನ ಪೋಸ್ಟರ್ ಬಿಡುಗಡೆಗೊಳಿಸಿದರು. ಈ ಹಿಂದೆ ವಿರಾಟ ಪರ್ವ ಚಿತ್ರದ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿದ್ರು..

ಈ ಚಿತ್ರದ ಪೋಸ್ಟರ್ ಯಾರಿಂದ ಬಿಡುಗಡೆ ಮಾಡಬೇಕು ಎಂಬ ಆಲೋಚನೆ ಮಾಡುತ್ತಿದ್ದ ಸಂದರ್ಭದಲ್ಲಿ ದೇವರ ಪ್ರತಿರೂಪರಾದ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾರೆ. ಇಂತಹ ಹುತಾತ್ಮ ಸೈನಿಕನ ಕುಟುಂಬದ ಕಡೆಯಿಂದವಿರಾಟ ಪರ್ವಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಬೇಕು ಎಂದು ಎಸ್.ಆರ್. ಮೀಡಿಯಾ ಪ್ರೊಡಕ್ಷನ್ ತಿರ್ಮಾನಿಸಿ ತನ್ನ ಚಿತ್ರದ ವಿಭಿನ್ನತೆಗೆ ಸಾಕ್ಷಿಯಾಗಿದೆ.

ಸುನೀಲ್ ರಾಜ್ ನಿರ್ಮಾಣ ಮಾಡ್ತಿರೋ ಈ ಸಿನಿಮಾಕ್ಕೆ ವಿನೀತ್ ರಾಜ್  ಮೆನನ್ ಸಂಗೀತವಿದೆ. ಶಿವು ಬಿಕೆ ಶಿವಸೇನಾ ಛಾಯಾಗ್ರಹಣ ಇದೆ. ಮೂರು ವಿಭಿನ್ನ ಕಥೆಗಳ ಸಂಗಮವಾಗಿರಲಿರೋ ವಿರಾಟಪರ್ವ ಚಿತ್ರದಲ್ಲಿ ಅರುಗೌಡ, ಯಶ್ ಶೆಟ್ಟಿಯ ಜೊತೆಗೆ ನಾತಿಚರಾಮಿ ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆಗಳಿಸಿದ್ದ ನಿರ್ದೇಶಕ ಮಂಸೋರೆ ಬಣ್ಣ ಹಚ್ಚುತ್ತಿದ್ದಾರೆ. ವಿರಾಟ ಪರ್ವ ಸಿನಿಮಾ ಸದ್ಯದಲ್ಲೇ ಟೀಸರ್ ರಿಲೀಸ್ ಮಾಡೋ ಪ್ಲಾನ್‌ನಲ್ಲಿದ್ದು, ಫೆಬ್ರವರಿಯಲ್ಲಿ ವಿರಾಟಪರ್ವನ ದರ್ಶನವಾಗಲಿದೆ.