ಕೊಹ್ಲಿ ಬದಲಿಗೆ ಹೊಸ ನಾಯಕನ ಹುಡುಕಾಟದಲ್ಲಿ ಬಿಸಿಸಿಐ..!! ಕಾರಣವೇನು ಗೊತ್ತಾ..?

ವಾಹಿನಿ ಸುದ್ದಿ ಸ್ಪೋರ್ಟ್ಸ್

ಕೊಹ್ಲಿಯ ನಾಯಕತ್ವಕ್ಕೆ ಬದಲಿ ನಾಯಕನ ಹುಡುಕಾಟದಲ್ಲಿ ಬಿಸಿಸಿಐ…!! ಕಾರಣವೇನು ಗೊತ್ತಾ..?

ಅದ್ಯಾಕೋ ಏನೋ ಆರ್ ಸಿಬಿ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಐಪಿಎಲ್ ಕಪ್ ಮಾತ್ರ ಮರೀಚಿಕೆಯಾಗೆ ಉಳಿದು ಬಿಟ್ಟಿದೆ.. ನಿನ್ನೆ ನಡೆದ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ದ ಪಂದ್ಯದಲ್ಲಿ ಗೆಲ್ಲುವ ಮ್ಯಾಚ್ ಅನ್ನ ಕೈ ಬಿಟ್ಟು ಪ್ಲೇ‌ ಆಫ್ ಕನಸಿನಿಂದ ತುಂಬಾ ದೂರ ಬಂದು ನಿಂತಿದೆಇದು ಬೆಂಗಳೂರು ತಂಡದ ಅಭಿಮಾನಿಗಳಿಗೆ ಮಾತ್ರವಲ್ಲ ಸ್ವತಃ ಕೊಹ್ಲಿಗೆ ಬೇಸರದ ಸಂಗತಿ..

RCB ಬೌಲರ್ ಸಿರಾಜ್ ಆಸೆಯನ್ನ ಈಡೇರಿಸಿದ ಕೊಹ್ಲಿ & ಟೀಮ್.. ಇದನ್ನ ನೋಡಿದ್ರೆ ನಿಮಗೂ ಖುಷಿಯಾಗುತ್ತೆ..

ಇನ್ನೂ ಈ ಟೂರ್ನಿ ಮುಗಿತಿದ್ದ ಹಾಗೆ ಕೊಹ್ಲಿ ಅಫ್ಘಾನಿಸ್ತಾನ ವಿರುದ್ದ ನಡೆಯಲಿರು ಟೆಸ್ಟ್ ಸರಣಿಯಿಂದ ದೂರವೇ ಉಳಿಯಲ್ಲಿದ್ದಾರೆ.. ಇದಕ್ಕೆ ಕಾರಣ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ ನಲ್ಲಿ ಆಡಲು ಸಮ್ಮತಿಯನ್ನ ಸೂಚಿಸಿದ್ದು ಸರ್ರೆ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ..

ಹೀಗಾಗೆ ಇದೇ ಸಮಯಕ್ಕೆ ಭಾರತಕ್ಕೆ ಬರಲಿರುವ ಆಫ್ಘಾನಿಸ್ತಾನ ತಂಡ, ಟೆಸ್ಟ್ ನ ಮೂಲಕವೂ ತಮ್ಮ ದೇಶವನ್ನ ಗುರುತಿಸಿಕೊಳ್ಳಲು ಮುಂದಾಗಿದೆಆದರೆ ಇದಕ್ಕೆ ಭಾರತ ತಂಡದ ಟೆಸ್ಟ್ ಟೀಮ್ ನ ಕ್ಯಾಪ್ಟನ್ ಆಗಿರುವ ವಿರಾಟ್ ಇಲ್ಲದೆ ಇರುವುದಕ್ಕೆ ಬಿಸಿಸಿಐ ಬೇರೊಬ್ಬ ನಾಯಕ ಹುಡುಕಾಟದಲ್ಲಿದೆಮೂಲಗಳ ಪ್ರಕಾರ ಟೆಸ್ಟ್ ತಂಡವನ್ನ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಅಜಿಂಕ್ಯಾ ರಹಾನೆ ಮುನ್ನಡೆಸುವ ಸಾಧ್ಯತೆಗಳಿವೆ

ಅದ್ಭುತ ಕ್ಯಾಚ್ ಹಿಡಿದ ಮಯಾಂಕ್-ಮನೋಜ್ ಜೋಡಿ..ವಿಡಿಯೋ

ಇನ್ನೂ ವಿರಾಟ್ ಇದಾದ ಬಳಿಕ ಇಂಗ್ಲೆಂಡ್ ಸರಣಿಗೆ ತಂಡವನ್ನ ಕೂಡಿಕೊಳ್ಳಲ್ಲಿದ್ದು, ಅದಕ್ಕೂ ಮೊದಲೇ ಕೌಂಟಿ ಕ್ರಿಕೆಟ್  ಮೂಲಕ ತನ್ನ ಬ್ಯಾಟಿಂಗ್ ಅನ್ನ ಮತ್ತಷ್ಟು ಪರಿಪಕ್ವ ಮಾಡಿಕೊಂಡು ಬರುವ ಉತ್ಸಾಹದಲ್ಲಿದ್ದಾರೆ

RCB ಪ್ಲೇ ಆಫ್ ನಿಂದ ಔಟಾ..? ಇನ್ನೂ ಚಾನ್ಸ್ ಇದ್ಯಾ..? ಇಲ್ಲಿದೆ ನೋಡಿ ಡಿಟೇಲ್ಸ್..!

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.