ಕನ್ನಡಿಗರಿಂದ ನೂತನ ಪ್ರಯತ್ನ.. ನಾಲ್ಕು ಭಾಷೆಯಲ್ಲಿ ಬಿಡುಗಡೆಗೆ ಸಿದ್ದವಾದ ‘ವಿನಿಮಯ’ ಕಿರುಚಿತ್ರ..

ವಾಹಿನಿ ಸುದ್ದಿ

ಹೊಸ ಹುರುಪಿನೊಂದಿಗೆ ಹೊಸದೊಂದು ಕಥೆಯನ್ನ ಹೆಣೆದು ಅದಕ್ಕೆ ಚಿತ್ರದ ರೂಪ ಕೊಟ್ಟು, ಕನ್ನಡ ಭಾಷೆಗೆ ಮಾತ್ರ ಸೀಮಿತವಾಗಿರದೆ ನಮ್ಮ ನೆಲದ, ನಮ್ಮ ಸೊಗಡಿನ ಚಿತ್ರವನ್ನ ಇತರ ಭಾಷೆಯ ಚಿತ್ರ ರಸಿಕರಿಗೆ ಸವಿಯುವ ಹಾಗೆ ನೀಡಬಯಸಿದ ಮನಗಳು ಈಗ ತಮ್ಮ ‘ವಿನಿಮಯ’ ಎಂಬ ಫ್ಯಾಂಟಸಿ ಕಿರುಚಿತ್ರವನ್ನ ಇದೇ 20ನೇ ತಾರೀಖು ಬಿಡುಗಡೆಗೊಳಿಸಲಿದ್ದಾರೆ…

ಫ್ಯಾಂಟಸಿ ಆಧಾರಿತ ಕಿರುಚಿತ್ರದ ನಿರ್ಮಾಣ ಎಂದಿಗೂ ಸವಾಲಿನ ಕೆಲಸ.. ಇಂತಹ ರಿಸ್ಕ್ ಅನ್ನ ತೆಗೆದುಕೊಂಡಿರುವ ‘ವಿನಿಮಯ’ ತಂಡ ಇದೇ ವಾರ ತಮ್ಮ ಕಿರುಚಿತ್ರವನ್ನ ಕನ್ನಡ ಚಿತ್ರ ರಸಿಕರ ಮುಂದೆ ಇಡಲಿದೆ.. ಅರ್ಜುನ್ ಕಾಮತ್ ನಿರ್ದೇಶನ ಮಾಡಿರುವ ಈ ಕಿರುಚಿತ್ರಕ್ಕೆ ನಾಗೇಶ್ ಎಂ ಹಾಗು ಸಂತೋಷ್ ಜಿ ನಿರ್ಮಾಣ ಮಾಡಿದ್ದಾರೆ..

ಸದ್ಯಕ್ಕೆ ಈ ಕಿರುಚಿತ್ರದಲ್ಲಿರುವ ಹಾಡೊಂದನ್ನ ಮೊದಲಿಗೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ‘Humanity Anthem’ ಇಷ್ಟವಾಗ್ತಿದೆ.. ಇದೇ 20ಕ್ಕೆ ಕನ್ನಡದ ಅವತರಣಿಕೆಯ ‘ವಿನಿಮಯ’ ಬಿಡುಗಡೆಯಾಗಲ್ಲಿದ್ದು, ಇನ್ನೊಂದು ವಾರದಲ್ಲಿ ತಮಿಳು ತೆಲುಗು ಹಾಗು ಹಿಂದಿಯಲ್ಲಿ ಬಿಡುಗಡೆಯಾಲಿದೆ..