ಮನಸೂರೆಗೊಳಿಸುವ ಚಿನ್ನಾರಿ ಮುತ್ತನ ಮಾಲ್ಗುಡಿ ಡೇಸ್ ಯಾನ..!!

ಸಿನಿಮಾ

ವಿಜಯ್ ರಾಘವೇಂದ್ರ ಈ ಬಾರಿ ತಮ್ಮ ಸಿನಿ ಕೆರಿಯರ್ ಗೆ ಮತ್ತೊಂದು ಆಯಾಮವನ್ನ ಕಲ್ಪಿಸುವ ಭರವಸೆಯನ್ನ ನೀಡ್ತಿದ್ದಾರೆ.. ಕಾಲಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಅನ್ನೋ‌ ಹಾಗೆ ಸಿನಿ ಪ್ರೇಮಿಗಳ ಅಭಿರುಚಿಗೆ ತಕ್ಕಹಾಗೆ ಹೊಸಬಗೆಯ ನಿರೂಪಣೆ ಇರುವ ಸಿನಿಮಾದಲ್ಲಿ, ತಾನು ಕೂಡ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡು ಮೋಡಿ ಮಾಡ್ತಿದ್ದಾರೆ.. ಅದು ಈ ಮಾಲ್ಗುಡಿ ಡೇಸ್ ಚಿತ್ರದ ಮೂಲಕ..

ಸದ್ಯ ಬಿಡುಗಡೆಗೊಂಡಿರೋ ಮೋಷನ್ ಪೋಸ್ಟರ್ ಹಳ್ಳಿ ಸೊಗಡಿನ, ಸಂಭ್ರಮದ ಜೀವನದ ರಿವೈಡ್ ಲೋಕಕ್ಕೆ ಕರೆದುಕೊಂಡು ಹೋಗುವ ನೆನೆಪಿನ ಬುತ್ತಿಯ ಪಯಣದಂತಿದೆ.. ಹೆಸರಿಗೆ ತಕ್ಕಹಾಗೆ ಸುಮಧುರ ಸಂಬಂಧಗಳ ಭಾವವನ್ನ ಮೂಡಿಸುತ್ತಿದೆ.. ಕಿಶೋರ್ ಮೂಡಬಿದ್ರೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನವನ್ನ ಮಾಡ್ತಿದ್ದಾರೆ.. ಕೆ.ರತ್ನಾಕರ್ ಕಾಮತ್ ನಿರ್ಮಾಣದಲ್ಲಿ, ಉದಯ್ ಲೀಲಾ ಕ್ಯಾಮರ ವರ್ಕ್ ನಲ್ಲಿ, ಗಗನ್ ಬಡೇರಿಯಾ ಸಂಗೀತದಲ್ಲಿ ಮಾಲ್ಗುಡಿ ಡೇಸ್ ಚಿತ್ರ ಸಿದ್ದವಾಗಲಿದೆ..

ಈಗಾಗ್ಲೇ ಚಿತ್ರದ ಬಗ್ಗೆ ಒಳ್ಳೆ ಟಾಕ್ ಕ್ರಿಯೇಟ್ ಆಗಿದೆ.. ಹೊಡಿ ಬಡಿ, ಆಡಂಬರದ ಸಿನಿಮಾಗಳ ನಡುವೆ ಮಾಲ್ಗುಡಿ ಡೇಸ್ ಹೊಸತನದ ಸದಭಿರುಚಿಯ ಚಿತ್ರ ಎಂಬ ನಿರೀಕ್ಷೆಯನ್ನ ಹುಟ್ಟಿಹಾಕ್ತಿದ್ದು, ಆದಷ್ಟು ಬೇಗ ತೆರೆಗೆ ಬರಲಿದೆ..