ಪ್ರಜಾಕೀಯಕ್ಕೆ ಪ್ರಜೆಗಳೇ ಸಾರ್ವಭೌಮ: ಉಪೇಂದ್ರ

ವಾಹಿನಿ ಸುದ್ದಿ ಸಿನಿಮಾ

ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ ರಿಯಲ್ ಸ್ಟಾರ್ ಉಪೇಂದ್ರ ಇಂದು ಅಧಿಕೃತವಾಗಿ ತಮ್ಮ ಪಕ್ಷ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ’ ಹಾಗೂ ಪಕ್ಷದ ಚಿಹ್ನೆ ಆಟೋ ಎಂದು ಘೋಷಣೆ ಮಾಡಿದ್ದಾರೆ.

ಪಕ್ಷದ ಬೆಂಬಲಿಗರು ಹಾಗೂ ಉಪೇಂದ್ರ ಖಾಕಿ ತೊಟ್ಟು ಗಾಂಧಿ ಭವನಕ್ಕೆ ಆಗಮಿಸಿದರು. ಪತ್ರಕರ್ತಕರನ್ನು ವಿಶೇಷ ಅತಿಥಿಯಾಗಳಾಗಿಸಿದ ಉಪ್ಪಿ ಅವರಿಂದ ದೀಪಾ ಬೆಳಗಿಸುವ ಮೂಲಕ ಚಾಲನೆ ನೀಡಿದರು. ರಾಜಕೀಯ ಬದಲಾವಣೆ ನಮ್ಮ ಕಾನ್ಸೆಫ್ಟ್.ವ್ಯವಸ್ಥೆಯಲ್ಲಿರುವ 80ರಷ್ಟು ಜನ ಮಾತನಾಡಲು ಪ್ರಾರಂಭಿಸಬೇಕು ಹಾಗೂ ವ್ಯವಸ್ಥೆಯನ್ನು ಪ್ರಶ್ನಿಸಬೇಕು. ಇಂತಹ ಬದಲಾವಣೆಗೆ ಜನರು ಮುಂದಾಗಬೇಕು. ಜನರೇ ಬದಲಾವಣೆಯ ಸೃಷ್ಟೀಕರ್ತರು ಎಂದರು.

c

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಸುದ್ದಿಗೋಷ್ಟಿ ನೆಡೆಸಿದ ಉಪೇಂದ್ರ, ಪ್ರಜಾಕೀಯ ಶುರು ಮಾಡಿದಾಗ ಅನೇಕ ಜನ ಎಲ್ಲಾ ಕ್ಷೇತ್ರಗಳ ಸಮಸ್ಯೆ, ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಿ ತಮ್ಮದೇ ಸಲಹೆ ನೀಡಿದ್ದಾರೆ.

 

ಪ್ರತಿಕಾಗೋಷ್ಟಿ 10 ಪ್ರಮುಖ್ಯಾಂಶ:

 

  1. ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ ಪಕ್ಷದ ಹೆಸರು(ಕೆಪಿಜೆಪಿ)
  2. ಪಕ್ಷದ ಗುರುತು ಆಟೋ
  3. ಕಾರ್ಮಿಕರಿಗಾಗಿ ಕಾರ್ಮಿಕರಿಗೋಸ್ಕರ ಕೆಪಿಜೆಪಿ
  4. ಮೊದಲಿಗೆ ನಮ್ಮಿಂದ ಬದಲಾವಣೆ ಆಗಬೇಕು
  5. ಉಚಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ತಪಾಸಣೆ ಸಿಗಬೇಕು
  6. ಕೃಷಿ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬದಲಾವಣೆ ಆಗಬೇಕಿದೆ
  7. ಸ್ಮಾರ್ಟ್ ಸಿಟಿ ಬೇಡ, ಸ್ಮಾರ್ಟ್ ಹಳ್ಳಿ ಬೇಕು
  8. ಗೆದ್ದ ನಂತರವೂ ಪಕ್ಷದ ನಾಯಕರು ಕಾರ್ಮಿಕರಾಗಿ ದುಡಿಯಬೇಕು
  9. ನ.10 ಕೆಪಿಜೆಪಿ ಮೊಬೈಲ್ ಆಪ್ ಹಾಗೂ ವೆಬ್ ಸೈಟ್ ಆರಂಭ
  10. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು