ಮಾರ್ಚ್ 22 ಕ್ಕೆ ತೆರೆಗೆ ಬರ್ತಿದೆ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ಅವರ ಉದ್ಘರ್ಷ

ಸಿನಿಮಾ

ಉದ್ಘರ್ಷ.. ಕನ್ನಡದಲ್ಲಿ ಸದ್ಯ ತೆರೆಗೆ ಬರೋಕೆ ಸಿದ್ದವಾಗಿರುವ ಚಿತ್ರ.. ಕೆಜಿಎಫ್ ಬಳಿಕ ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೆ ರಿಲೀಸ್ ಆಗ್ತಿರುವ ಎರಡನೇ ಸಿನಿಮಾ.. ಸಸ್ಪೆನ್ಸ್ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಮೈಂಡ್ ಸುನೀಲ್ ಕುಮಾರ್ ದೇಸಾಯಿ ಅವರು ವರ್ಷಗಳ ಗ್ಯಾಂಪ್ ನ ಬಳಿಕ ರೆಡಿ ಮಾಡಿರೋ ಪ್ರೇಕ್ಷಕರನ್ನ ರಂಜಿಸುವ ಸಿನಿಮಾ ಇದೇ ಉದ್ಘರ್ಷ..

ಕಿಚ್ಚ ಸುದೀಪ್ ವಾಯ್ಸ್ ನಲ್ಲಿ ಟ್ರೇಲರ್ ಎಲ್ಲ ಭಾಷೆಗಳಲ್ಲು ಹಿಟ್ ಆಗಿದೆ.. ಟ್ರೇಲರ್ ನೋಡಿದವರು ಸಿನಿಮಾ ನೋಡೋಕೆ ಕಾತುರರಾಗಿದ್ದಾರೆ.. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗು ಮಲೆಯಾಳಂನಲ್ಲಿ ಬಿಡುಗಡೆಗೊಳ್ಳುತ್ತಿರುವ ಉದ್ಘರ್ಷದಲ್ಲಿ ನಾಲ್ಕು ಭಾಷೆಯ ಚಿತ್ರರಂಗಕ್ಕೆ ಪರಿಚಯವಿರುವ ಕಲಾವಿದರೆ ಇದ್ದಾರೆ.. ನಾಯಕನಾಗಿ ಬಾಲಿವುಡ್ ನಟ ಠಾಕೂರ್ ಅನೂಪ್ ಸಿಂಗ್ ಇದ್ರೆ, ನಾಯಕಿಯಾಗಿ ತಾನ್ಯಾ ಹೋಪ್, ಕಬಾಲಿ ಚೆಲುವೆ ಧನ್ಸಿಕಾ ಇದ್ದಾರೆ.. ವಿಲನ್ ಕ್ಯಾಟಗರಿಯಲ್ಲಿ ಹೆಬ್ಬುಲಿ ಖ್ಯಾತಿಯ ಕಬೀರ್ ದುಹಾನ್, ಬಾಹುಬಲಿಯ ಪ್ರಭಾಕರ್ ಇದ್ದಾರೆ.. ಇವರೊಂದಿಗೆ ನಟ ಕಿಶೋರ್, ವಂಶಿ ಕೃಷ್ಣ, ಶ್ರವಣ್ ರಾಘವೇಂದ್ರ ಸೇರಿದಂತೆ ಹಲವು ಸ್ಟಾರ್ ನಟರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

ದೇವರಾಜ್. ಆರ್ ನಿರ್ಮಾಣದ ಉದ್ಘರ್ಷ ಚಿತ್ರಕ್ಕೆ ಬಾಲಿವುಡ್ನ ಹಿಟ್ ಚಿತ್ರಗಳ ಹಿನ್ನೆಲೆ ಸಂಗೀತಕಾರ ಸಂಜೋಯ್ ಚೌಧುರಿ ಸಂಗೀತ ನೀಡಿದ್ರೆ, ದಿವಂಗತ ವಿಷ್ಣುವರ್ಧನ್ ಹಾಗೂ ಖ್ಯಾತ ಛಾಯಾಗ್ರಹಕ ಪಿ.ರಾಜನ್ ಸಿನಿಮಾಟೊಗ್ರಫಿ ಮಾಡಿದ್ದಾರೆ.. ಸದ್ಯ ಇದೇ 22 ಕ್ಕೆ ಬಿಡುಗಡೆಗೊಳ್ಳಲ್ಲಿರುವ ಉದ್ಘರ್ಷ ಸಿನಿಮಾಗೆ ಯೋಗರಾಜ್ ಭಟ್, ರಮೇಶ್ ಅರವಿಂದ್ ಸೇರಿದಂತೆ, ಸಂತೋಷ್ ಆನಂದ್ ರಾಮ್, ನಟಿ ಪ್ರೇಮ ಶುಭ ಹಾರೈಸಿದ್ದಾರೆ..