ಇಂದು ನಡೆಯಲಿದೆ ಮತ್ತೊಂದು ಎಲಿಮಿನೇಷನ್​! ಈ ಸ್ಪರ್ಧಿಗೆ ಸಿಗುತ್ತಾ ಗೇಟ್ ಪಾಸ್…?

ವಾಹಿನಿ ಸುದ್ದಿ

ಬಿಗ್ ಬಾಸ್ ಆರನೇ ಸೀಸನ್ ಕೊನೆಯ ವಾರಕ್ಕೆ ಕಾಲಿಟ್ಟಿದೆ. ನಿನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ರಾಕೇಶ್‌ ಹೊರ ನಡೆದಿದ್ದಾರೆ. ಭಾನುವಾರ ಅಂದ್ರೆ ಇಂದು ರಾತ್ರಿ ಮತ್ತೊಂದು ಎಲಿಮಿನೇಷನ್​ ನಡೆಯಲಿದೆಯಂತೆ. ಫೈನಲ್‌ ಟಿಕೆಟ್ ಪಡೆದುಕೊಂಡಿರುವ ನವೀನ್ ಹಾಗೂ ಧನರಾಜ್ ಕೂಡ ಎಲಿಮಿನೇಷನ್‌ ಲೀಸ್ಟ್ ಗೆ ಸೇರಲಿದ್ದಾರೆ. 

ಫೈನಲ್‌ ಗೆ ಕೇವಲ ಐದು ಮಂದಿ ಮಾತ್ರ ಅವಕಾಶವಿದ್ದು, ಸದ್ಯ, ನವೀನ್​ ಸಜ್ಜು, ಧನರಾಜ್​, ರಾಪಿಡ್​ ರಶ್ಮಿ, ಕವಿತಾ ಗೌಡ, ಶಶಿಕುಮಾರ್​ ಹಾಗೂ ಆ್ಯಂಡಿ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಇವರಲ್ಲಿ ಒಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ. ಮತ್ತೊಂದೆಡೆ ಆ್ಯಂಡಿ ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹಂತಿಮವಾಗಿ ಯಾರು ಎಲಿಮಿನೆಟ್ ಆಗ್ತಾರೆ ಎನ್ನುವ ಅಧಿಕೃತ ಮಾಹಿತಿ ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ..  ಇನ್ನೂ ಕಿಚ್ಚ ಸುದೀಪ್ ಕೂಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ