ಈ ಬಾರಿ ಬಿಗ್ ಬಾಸ್ ಸೀಸನ್ 7ರಲ್ಲಿ ಬರಲಿದ್ದಾರೆ ಈ ಎಲ್ಲಾ ಸೆಲೆಬ್ರಿಟಿಗಳು…!!!?

ಸಿನಿಮಾ

ಬಿಗ್ ಬಾಸ್ ಪ್ರಾರಂಭವಾಗಲು ಕೆಲವೇ ದಿನಗಳು ಉಳಿದಿವೆ. ಹೀಗಿರಬೇಕಾದ್ರೆ ಯಾರೆಲ್ಲಾ ಬಿಗ್ ಬಾಸ್ ಹೋಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಅಲ್ಲದೆ‌ ಈ ಬಾರಿ ಕಾಮನ್ ಮ್ಯಾನ್ ಗಳಿಗೆ ಎಂಟ್ರಿ ಇಲ್ಲ.. ಹೀಗಿರಬೇಕಾದ್ರೆ  ಬಿಗ್ ಬಾಸ್ 7ನೇ ಆವೃತ್ತಿಗೆ ಯಾರು ಹೋಗುತ್ತಾರೆ ಎಂಬ ಸ್ಪೋಟಕ ಮಾಹಿತಿಯೊಂದು ಹೊರಬಂದಿದೆ.

ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ನೇಹಾ  ಈ ಬಾರಿ ಬಿಗ್ ಬಾಸ್ ಗೆ ಪ್ರವೇಶಿಸಲಿದ್ದಾರೆ. ಸಂಯುಕ್ತ2, ವರ್ಧನ, ಸಿತಾರಾ, ತಿಪ್ಪಾಜಿ ಸರ್ಕಲ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಜನುಮದ ಜೋಡಿ ಧಾರಾವಾಹಿಯಲ್ಲೂ ಕೂಡ ನೇಹಾ ನಟಿಸಿದ್ದರು. ಖಾಸಗಿ ವಾಹಿನಿಯ ಡಾನ್ಸ್ ರಿಯಾಲಿಟಿ ಶೋನಲ್ಲೂ ಕೂಡ ಅದ್ಭುತ ಪ್ರದರ್ಶನ ನೀಡಿದ್ದರು. ಈಗ ಬಿಗ್ ಬಾಸ್ ಹೋಗುವ ಸುದ್ದಿ ಹೊರ ಬಂದಿದೆ.

ಬಿಗ್ ಬಾಸ್ ಗೆ ಎಂಟ್ರಿ ಆಗ್ತಾರಾ ಅಗ್ನಿ? ಯಾರು ಈ ಅಗ್ನಿ ?  ಇವರು ನಿರೂಪಕರಾಗಿ ಶುರು ಮಾಡಿ, 2016 ರಲ್ಲಿ ಮಾಡೆಲ್ ಕೂಡ ಹೌದು, ಮಿಸ್ಟರ್ ಬೆಂಗಳೂರು ಪ್ರಶಸ್ತಿ ಕೂಡ ಗೆದ್ದಿದರು.. ಅಲ್ಲದೆ ಇವಳೇ ವೀಣಾ ಪಾಣಿ ಕೃಷ್ಣ ತುಳಸಿ, ರಂಗನಾಯಕಿ ಧಾರಾವಾಹಿಯಲ್ಲಿ ನಿರ್ಮಾಣ ನಿರ್ವಹಣೆಯ ಜವಬ್ದಾರಿಯನ್ನು ಒತ್ತು ಸಾಗಿಸಿದ ಮನ್ನಣೆ ಇವರದು.

ಇನ್ನು ಈಗ ತಾನೆ ಹೆಸರು ಮಾಡುತ್ತಿರುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಸುಪ್ರೀತ್ ಗಂಗಾಧರ್ ಅವರು ಬಿಗ್ ಬಾಸ್ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ದರ್ಶನ್ ಅವರ ಹಾಡು ಮಾಡಿ ಈ ಹಿಂದೆ ಜನಪ್ರಿಯತೆ ಗಳಿಸಿದರು, ಈಗ ಸುಪ್ರೀತ್ ಅವರು ಬಿಗ್ ಬಾಸ್ ಸೀಸನ್ 7ಕ್ಕೆ ಹೋಗುವ ಸಾಧ್ಯತೆ ಇದೆ..

ಕಲರ್ಸ್ ಕನ್ನಡ ವಾಹಿನಿಯ ನಿಯಮದ ಪ್ರಕಾರ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಹೋಗುವುದರ ಬಗ್ಗೆ ಸಾರ್ವಜನಿಕವಾಗಿ ಹೇಳುವಂತಿಲ್ಲ.‌ ಹೀಗಾಗಿ ಈ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಗೆ ಹೋಗ್ತಾರಾ ಇಲ್ವಾ ಅನ್ನೋದು ಅಕ್ಟೋಬರ್ 20ರವರೆಗೆ ಕಾಯಬೇಕು. ಇನ್ನುಳಿದ ಸ್ಪರ್ಧಿಗಳ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ…