ತರುಣ್ ಸುಧೀರ್ ಮಾಡಿದ ಈ ಒಂದು ಟ್ವೀಟ್ ರಕ್ಷಿತ್-ಸುದೀಪ್ ಅಭಿಮಾನಿಗಳನ್ನ ಕೆರಳಿಸಿದ್ದೇಕೆ..?

ಸಿನಿಮಾ

ಕಳೆದ ಕೆಲ ದಿನಗಳಿಂದ ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ಸಿನಿಮಾ ಪೋಸ್ಟರ್ ಗಳ ಜಾದು ಶುರುವಾಗಿದೆ.. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್, ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಹಾಗು ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಪೋಸ್ಟರ್ ಗಳು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡುತ್ತಿವೆ.. ಹೀಗಿರೋವಾಗಲೆ ನವ ನಿರ್ದೇಶಕ ತರುಣ್ ಸುಧೀರ್ ಮಾಡಿರುವ ಒಂದೇ ಒಂದು ಟ್ವಿಟ್ ರಕ್ಷಿತ್ ಅಭಿಮಾನಿಗಳನ್ನ ಕೆರಳಿಸಿದೆ

ಅವನೇ ಶ್ರೀಮನ್ನಾರಾಯಣ ಪೋಸ್ಟರ್ ಬಿಡುಗಡೆಗೊಂಡ ಬಳಿಕ ಹಲವರು ಇದು ಹಿಂದಿಯ ಭಾಷೆಯ  ಫಟಾ ಪೋಸ್ಟರ್ನಿಕ್ಲಾ ಹೀರೋಚಿತ್ರದ ಪೋಸ್ಟರ್ ನ ಹಾಗಿದೆ ಎಂದಿದ್ರು.. ಇನ್ನು ರಕ್ಷಿತ್ ಗೆ ಶುಭಾಶಯ ತಿಳಿಸುವ ಸಲುವಾಗಿ ಟ್ವೀಟ್ ಮಾಡಿರುವ ತರುಣ್, ‘ಫಟಾ ಪೋಸ್ಟರ್ನಿಕ್ಲಾ ಹೀರೋಲವ್ಲಿ ಪೋಸ್ಟರ್ ಅಂತ ಕಾಲೆಳೆಯುವ ರೀತಿ ಸಂದೇಶ ಹಾಕಿದ್ದಾರೆ

ಹೀಗಾಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು ತರುಣ್ ಸುಧೀರ್ ವಿರುದ್ದ ಕೆಂಡಕಾರಿದ್ದು, ನಿಮಗೆ ಒಂದು ಪೋಸ್ಟರ್ ಡಿಸೈನ್ ಮಾಡಲು ಬರುವುದಿಲ್ಲ, ಬೇರೆಯವರ ಪೋಸ್ಟರ್ ಬಗ್ಗೆ ಮಾತನಾಡುತ್ತೀರಿ ಎಂದಿದ್ದಾರೆ.. ಇಷ್ಟೆ ಅಲ್ಲದೇ ತರುಣ್ ಸುಧೀರ್ ಪೋಸ್ಟ್ ಗೆ ಕಿಚ್ಚ ಸುದೀಪ್ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವು ಇದೆ‌‌‌‌.‌‌‌.

ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬದಂದು ಬಿಡುಗಡೆಗೊಂಡ ಈ ಸಿನಿಮಾ ಪೋಸ್ಟರ್ ಗೂ ಮುಂಚಿತವಾಗಿ, ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು.. ಈ ಬಗ್ಗೆ ಒಂದು ಒಂದು ಮಾತನಾಡದ ತರುಣ್ ರಕ್ಷಿತ್ ಚಿತ್ರದ ಪೋಸ್ಟರ್ ಬಗ್ಗೆ ಹಾಕಿದ ಟ್ವೀಟ್ ಕಿಚ್ಚನ ಅಭಿಮಾನಿಗಳಿಗೆ ಬೇಸರವನ್ನ ಉಂಟು ಮಾಡಿದೆ..