ನೂತನ ವರ್ಷಾರಂಭಕ್ಕೆ ಸೆವೆನ್ ಕಪ್ ಸ್ವೀಟ್ ಮಾಡಿ ಸವಿಯಿರಿ..

ವಾಹಿನಿ ಸುದ್ದಿ ಸವಿರುಚಿ

ಇದು ಎಲ್ಲಾ ಹಬ್ಬಕ್ಕೆ ಮಾಡಬಹುದಾದರೂ ಹೊಸ ವರ್ಷಾಚರಣೆಗೆ ಮನೆಯಲ್ಲಿ ಮಾಡಿ ಮನೆಮಂದಿಯೆಲ್ಲಾ ಸವಿಯಬಹುದಾದ ತುಂಬಾ ಸರಳವಾದ ಸಿಹಿ ಬರ್ಫಿ.. ಮಕ್ಕಳಿಂದ ಎಲ್ಲಾ ವಯಸ್ಸಿನವರೂ ಇಷ್ಟ ಪಡುವ ಸಿಹಿ ತಿಂಡಿಯಿದು.

ಸೆವೆನ್ ಕಪ್ ಸ್ವೀಟ್ ಮಾಡುವ ವಿಧಾನ:

ಬೇಕಾದ ಸಾಮಗ್ರಿಗಳು:

  1. ಒಂದು ಕಪ್ ತುರಿದ ತೆಂಗಿನಕಾಯಿ
  2. ಅರ್ಧ ಕಪ್ ತುಪ್ಪ
  3. ಒಂದು ಕಪ್ ಕಡಲೆ ಹಿಟ್ಟು
  4. ಎರಡು ಕಪ್ ಸಕ್ಕರೆ
  5. ಒಂದು ಕಪ್ ಹಾಲು
  6. ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ:

ದಪ್ಪ ತಳದ ಬಾಣಲೆಯಲ್ಲಿ ಕಡಲೆ ಹಿಟ್ಟನ್ನು ಸುವಾಸನೆ ಬರುವವರೆಗೆ ಹುರಿಯಿರಿ. ಅದನ್ನು ತೆಗೆದು ತಣ್ಣಗಾದ ಮೇಲೆ ಹಾಲಿನೊಂದಿಗೆ ಗಂಟು ಬರದ ಹಾಗೆ ಕದಡಿ. ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಹಾಲಿನಲ್ಲಿ ಕದಡಿದ ಕಡಲೆ ಹಿಟ್ಟನ್ನು ಹಾಕಿ ಕುದಿಸುತ್ತಾ ಬನ್ನಿ.

ನೂತನ ವರ್ಷಾರಂಭಕ್ಕೆ ಸೆವೆನ್ ಕಪ್ ಸ್ವೀಟ್ ಮಾಡಿ ಸವಿಯಿರಿ..

 ಇದಕ್ಕೆ ತುರಿದ ತೆಂಗಿನಕಾಯಿ ಹಾಕಿ. ಮಿಶ್ರಣ ಸ್ವಲ್ಪ ಗಟ್ಟಿಯಾದಾಗ ಸಕ್ಕರೆ ಸೇರಿಸಿ ಹಾಗೆ ಏಲಕ್ಕಿ ಪುಡಿಯನ್ನೂ ಸೇರಿಸಿ. ಮಿಶ್ರಣ ಕದಡುತ್ತಲೇ ಇರಬೇಕು. ಹೀಗೆ ಗಟ್ಟಿಯಾಗುತ್ತಾ ಬಂದ ಮಿಶ್ರಣಕ್ಕೆ ತುಪ್ಪ ಸೇರಿಸಿ.

ತಿರುಪತಿಯಲ್ಲಿ ನೀವು ಕೊಡುವ ಮುಡಿ ಹರಕೆ ವೆಂಕಟೇಶ್ವರ ಸ್ವಾಮಿಗಲ್ಲ..! ಅದು ಸಲ್ಲುವುದು ಈ ತಾಯಿಗೆ

ಇದು ಬರ್ಫಿಯ ಹದಕ್ಕೆ ಬಂದಾಗ ಅಂದರೆ ಮಿಶ್ರಣ ಬಾಣಲೆಯಿಂದ ಬೇರ್ಪದುತ್ತಾ ಬಂದಾಗ ಅದನ್ನು ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ.

ತಣ್ಣಗಾದ ಮೇಲೆ ಸೆವೆನ್ ಕಪ್ ಸ್ವೀಟ್ ತೆಗೆದು ಸವಿಯಿರಿ.

ಈ ದೇವರ ಭುಜಗಳಿಂದ ಬ್ರಹ್ಮ, ಹೃದಯದಿಂದ ವಿಷ್ಣು, ಹುಬ್ಬುಗಳಿಂದ ಶಿವ ಹಾಗೂ ಹಲ್ಲುಗಳಿಂದ ಸರಸ್ವತಿ ಹುಟ್ಟಿದ್ದಂತೆ..! ಯಾರು ಗೊತ್ತ ಆ ದೇವರು?