ತುಂಬಾ ಸಿಂಪಲ್ ಮತ್ತು ಟೇಸ್ಟಿ “ಶಾಹಿ ತುಕಡ” ಸವಿಯಿರಿ..

ವಾಹಿನಿ ಸುದ್ದಿ ಸವಿರುಚಿ

ಇದು ಅತೀ ಸುಲಭ ಹಾಗು ತುಂಬಾ ಟೇಸ್ಟಿ ಸಿಹಿ ತಿಂಡಿ.. ಮಕ್ಕಳಿಗೆ ತುಂಬಾ ಇಷ್ಟವಾದ ತಿನಿಸು..

ಶಾಹಿ ತುಕಡ ಮಾಡುವ ವಿಧಾನ:

ಬೇಕಾದ ಸಾಮಗ್ರಿಗಳು:

  1. ಬ್ರೆಡ್
  2. ತುಪ್ಪ ಕರಿಯಲು
  3. ಹಾಲು 4 ಕಪ್ ನಷ್ಟು
  4. ಕೇಸರಿ ದಳ ಸ್ವಲ್ಪ
  5. ಸಕ್ಕರೆ ಅರ್ಧ ಕಪ್
  6. ಕಂಡೆನ್ಸ್ಡ್ milkmaid ಹಾಲು 1 ಕಪ್
  7. ಏಲಕ್ಕಿ ಪುಡಿ

ಇಲ್ಲಿದೆ ವಾಲಿದ ಶಿವಲಿಂಗ.. ಇದರ ಹಿಂದಿದೆ ಶಿವಲೀಲೆಯ ಅದ್ಭುತ ಕಥೆ..

ಮಾಡುವ ವಿಧಾನ:

ಸಕ್ಕರೆ ಪಾಕ ತಯಾರಿಸಲು:

ಬಾಣಲೆಯಲ್ಲಿ ಅರ್ಧ ಕಪ್ ಸಕ್ಕರೆ ಹಾಕಿ ಅರ್ಧ ಕಪ್ ನೀರು ಹಾಕಿ ಸ್ವಲ್ಪ ಕೇಸರಿ ದಳ ಸೇರಿಸಿ ಕುದಿಸಿ.

ಭಾರತದ ಇತಿಹಾಸ ಕಂಡ ಘೋರ ದುರಂತ! ಹೊಟ್ಟೆಯ ಕಿಚ್ಚಿಗೆ ಬರೋಬ್ಬರಿ 3 ತಿಂಗಳು ಹತ್ತಿ ಉರಿದ ಗ್ರಂಥಾಲಯ!!

ಶಾಹಿ ತುಕಡ ಮಾಡಲು ಮೊದಲು ಬ್ರೆಡ್ಡನ್ನು ಅಂಚು ಕತ್ತರಿಸಿ ತ್ರಿಕೋನಾಕಾರದಲ್ಲಿ ಕತ್ತರಿಸಿ. ಅದನ್ನು ಸಣ್ಣ ಉರಿಯಲ್ಲಿ ತುಪ್ಪದಲ್ಲಿ ಚಿನ್ನದ ಕಂದು ಬಣ್ಣ ಬರುವವರೆಗೆ ಕರಿಯಿರಿ.

ಕರಿದ ಬ್ರೆಡ್ ತುಂಡುಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಿರಿ..

ಹಾಲಿನ ರಬಡಿ ಮಾಡುವ ವಿಧಾನ:

ಮೊದಲು ಚೂರು ಹಾಲಿಗೆ ಕೇಸರಿ ದಳಗಳನ್ನು ಹಾಕಿ ನೆನೆಯಲು ಬಿಡಿ.

ಒಂದು ಬಾಣಲೆಯಲ್ಲಿ ಮೊದಲು ಹೇಳಿದ 4 ಕಪ್ ಹಾಲನ್ನು ಹಾಕಿ ಬಿಸಿ ಮಾಡಿ. ಕುಡಿಯುವಾಗ 1 ಕಪ್ ಕಂಡೆನ್ಸ್ಡ್ milkmaid ಹಾಲು ಹಾಕಿ ಕೈಯಾಡುತ್ತಾ ಕುದಿಸಿ.. ಹಾಲು ಗಟ್ಟಿಯಾಗುತ್ತಾ ಬರುತ್ತದೆ. ಈಗ ಕೇಸರಿ ನೆನಸಿದ ಹಾಲನ್ನು ಹಾಕಿ ಏಲಕ್ಕಿ ಪುಡಿ ಕದಡಿ ಕುದಿಸಿ. ಹಾಲು ಗಟ್ಟಿಯಾಗಿ ಮೊಸರಿನ ಹದಕ್ಕೆ ಬಂದಾಗ 2 ನಿಮಿಷ ಸಿಮ್ಮರ್ ನಲ್ಲಿಟ್ಟು ತೆಗೆಡಿದಿ.

ನೀವೂ ಪ್ರತಿದಿನ ಸ್ನಾನ ಮಾಡುತ್ತೀರಾ..? ಹಾಗಿದ್ರೆ ಮಿಸ್ ಮಾಡದೆ ಈ ಸ್ಟೋರಿ ಓದಿ..

ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದ ಬ್ರೆಡ್ ತುಂಡುಗಳನ್ನು ಹಾಲಿನಿಂದ ತಯಾರಿಸಿದ ರಬಡಿ ಜೊತೆಗೆ ಸರ್ವ್ ಮಾಡಿ.. ಬೇಕಿದ್ದರೆ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿ..

ಶಾಹಿ ತುಕಡ ಮಾಡಿ ಸವಿದು ನಮ್ಮೊಂದಿಗೆ ಅಭಿಪ್ರಾಯ ಹಂಚಿಕೊಳ್ಳಿ..