ಮನೆಯ ಹೊರಗೆ ಆಡುವ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ, ಕೆಲವೇ ನಿಮಿಷದಲ್ಲಿ ಬರಬಹುದು ಜವರಾಯ.

ವಾಹಿನಿ ಸುದ್ದಿ

ಕೊರೋನಾ ಸಂಕಷ್ಟದಿಂದಾಗಿ ಈ ವರ್ಷ ಇನ್ನೂ ಶಾಲೆಗಳು ಆರಂಭವಾಗಿಲ್ಲ. ಮಕ್ಕಳು ಮನೆಯಲ್ಲಿ ಉಳಿದಿದ್ದಾರೆ. ಆಟ ಆಡುವ ಸಲುವಾಗಿ ಮನೆಯ ಹೊರಗೂ ಮಕ್ಕಳು ಹೋಗ್ತಾರೆ. ಈ ಸಂದರ್ಭದಲ್ಲಿ ಮಕ್ಕಳು ಆಟಾಡ್ತಾ ನಿಂತಿರುವ ಕಾರಿನೊಳಗೆ ಹೋದರೆ ಅವರಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಿಂತಿದ್ದ ಕಾರಿನೊಳಕ್ಕೆ 6 ವರ್ಷ ಪ್ರಾಯದ ಮೂವರು ಹೆಣ್ಣುಮಕ್ಕಳು ಹೋಗಿದ್ದಾರೆ. ಆಟವಾಡ್ತಾ ಅಲ್ಲೇ ನಿಂತಿದ್ದ ಕಾರಿನೊಳಗೆ ಹೋಗಿದ್ದಾರೆ. ಕಾರು ಆಟೊಮ್ಯಾಟಿಕ್ ಆಗಿ ಲಾಕ್ ಆಗಿದೆ ಅಲ್ಲೇ ಸಿಲುಕಿಕೊಂಡ ಮಕ್ಕಳು ಕೆಲವೇ ನಿಮಿಷಗಳಲ್ಲಿ ಅಸು ನೀಗಿದ್ದಾರೆ. ಮಕ್ಕಳು ಕಾಣದಾಗಿ ತುಂಬಾ ಹೊತ್ತು ಹುಡುಕಾಡಿದ ಪೋಷಕರು, ನಂತರ ಕಾರು ಬಳಿ ಬಂದಾಗ ಕಾರಿನಲ್ಲಿ ಉಸಿರುಗಟ್ಟಿ ಸತ್ತಂತಹ ಮಕ್ಕಳನ್ನು ನೋಡಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.