ಕಿಚ್ಚ ಸುದೀಪ್ ಪತ್ನಿಗೆ ಬಿಗ್ ಬಾಸ್ ಮನೆಯ ಫೆವರೆಟ್ ಸ್ಪರ್ಧಿ ಯಾರು ಗೊತ್ತಾ.? ನೀವೂ ಊಹಿಸಲು ಸಾಧ್ಯವಿಲ್ಲ.!

ವಾಹಿನಿ ಸುದ್ದಿ ಸಿನಿಮಾ

ಬಿಗ್‌ ಬಾಸ್‌ ಮನೆಯ ‘ಬಾರ್ಬಿ ಡಾಲ್‌’ ಅಂತಲೇ ಫೇಮಸ್‌ ಆಗಿರುವ ನಿವೇದಿತಾ ಗೌಡ ಸದ್ಯ ಶೋ ಮುಗಿಸಿ ಹೊರ ಬಂದಿದ್ದಾರೆ. 105 ದಿನಗಳ ಕಾಲ ಬಿಗ್‌ ಬಾಸ್‌ ಮನೆಯಲ್ಲೇ ಇದ್ದ ನಿವೇದಿತಾ ಫಿನಾಲೆವರೆಗೂ ಹೋಗಿ 4ನೇ ಸ್ಥಾನದೊಂದಿಗೆ ಮರಳಿದ್ದಾರೆ.

ಬಿಗ್ ಬಾಸ್ ವಿನ್ನರ್ ವಿಚಾರದಲ್ಲಿ ಬೇಸರಗೊಂಡ ಕಿಚ್ಚ.. ಇಷ್ಟಕ್ಕೂ ಕಿಚ್ಚ ಮಾಡಿದ್ದು ಸರಿನಾ..?

‘ಕಾಮನ್‌ ಮ್ಯಾನ್‌’ ಆಗಿ ಬಿಗ್‌ಬಾಸ್‌ ಮನೆಗೆ ಹೋದ ನಿವೇದಿತಾ ಗೌಡ ಸಿಲೆಬ್ರಿಟಿ ಆಗಿ ಬದಲಾಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ‌ ನಿವೇದಿತಾ ಗೌಡ ಅವರಿಗೆ ಕೆಲ ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ಅಭಿನಯಿಸುವಂತೆ ಈಗಾಗಲೇ ಆಫರ್‌ಗಳು ಬರುತ್ತಿವೆ.

ಆದರೆ, ಈ ಗೊಂಬೆ ಸದ್ಯಕ್ಕೆ ವಿದ್ಯಾಭ್ಯಾಸ ಮುಗಿಸಿ, ಮಾಸ್ಟರ್‌ ಅಥವಾ ಏರ್‌ಲೈನ್ಸ್‌ ಕೋರ್ಸ್‌ ಮಾಡುವ ಉದ್ದೇಶವಿದೆಯಂತೆ. ಸಾಕಷ್ಟು ಹೆಸರು‌ ಮಾಡಿರುವ ನಿವೇದಿತಾ ಜೀವನದಲ್ಲಿ ತಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ.‌ ಹೀಗಾಗಿ ಸದ್ಯಕ್ಕೆ‌ ಯಾವುದು ನಿರ್ಧಾರ ಕೈಗೊಳ್ಳುತ್ತಿಲ್ಲವಂತೆ..

ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ಇದು.!! ಅತಿ ಹೆಚ್ಚು ಸಂಭಾವನೆ ಪಡೆದು ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?

ಕನ್ನಡಿಗರ ಮನ ಗೆದ್ದಿರುವ ನಿವೇದಿತಾ ಗೌಡ.. ಕಿಚ್ಚನ ಮನೆಯವರ ಹೃದಯ ಕದ್ದಿದ್ದಾರೆ. ಹೌದು, ಸುದೀಪ್‌ ಪತ್ನಿ ಪ್ರಿಯ ಹಾಗೂ ಮಗಳಿಗೆ ಗೊಂಬೆ ಕಂಡರೆ ತುಂಬಾ ಇಷ್ಟವಂತೆ. ನಿವೇದಿತಾ ಫಿನಾಲೆಯಲ್ಲಿ ಎಲಿಮಿನೇಟ್ ಆಗಿದ್ದು ಕಿಚ್ಚನ ಕುಟುಂಬಕ್ಕೆ ಬೇಸರವಾಯಿತ್ತಂತೆ..

ಹೌದು, ನಿವೇದಿತಾ ಗೌಡ ಬಹಳ ಮಂದಿಗೆ ಫೆವರೆಟ್ ಅದರಲ್ಲೂ ಮಹಿಳೆಯರಿಗೆ ಗೊಂಬೆ ಅಂದರೆ ಬಹಳ ಇಷ್ಟ ಎನ್ನಬಹುದು. ಇದು ನಿವೇದಿತಾ ಬಿಗ್ ಬಾಸ್ ಶೋನಿಂದ ಸಂಪಾದಿಸಿರುವ ಗೌರವ ಹಾಗೂ ಪ್ರೀತಿ ಎನ್ನಬಹುದು.

Pic courtesy: Colors Super