ಇಲ್ಲಿದೆ ವಾಲಿದ ಶಿವಲಿಂಗ.. ಇದರ ಹಿಂದಿದೆ ಶಿವಲೀಲೆಯ ಅದ್ಭುತ ಕಥೆ..

ಧಾರ್ಮಿಕ ವಾಹಿನಿ ಸುದ್ದಿ

ಎಲ್ಲಾದ್ರೂ ವಾಲಿರೋ ಶಿವಲಿಂಗ ನೋಡಿದ್ದೀರಾ.. ಹಾಗಾದ್ರೆ ಇಲ್ಲಿ ಕೇಳಿ..

ಇದು ಎಲ್ಲೂ ಕೇಳಿರದ ಒಂದು ವಿಷಯ.. ಎಲ್ಲಾದ್ರೂ ಪೂಜೆ ಮಾಡೋ ವಿಗ್ರಹಕ್ಕೆ ಊನ ಆಗಿದ್ರೆ ಅಥವಾ ವಿಗ್ರಹದ ರೂಪ ಕೆತ್ತನೆ ಸರಿಯಿಲ್ಲದಿದ್ದರೆ ಅದನ್ನ ಪೂಜೆ ಮಾಡಲೇ ಬಾರದು ಅನ್ನೋ ವಾದ ಎಲ್ಲೆಡೆ ಇದೆ.. ಆದರೆ ಈ ವಾದಕ್ಕೆ ಸೆಡ್ಡು ಹೊಡೆದು ನಿಂತಿದೆ ಇಲ್ಲೊಂದು ವಿಗ್ರಹ ಹಾಗೂ ಅದರ ದೇವಾಲಯ..

ಈ ದೇವಾಲಯ ಇರೋದು ತಮಿಳುನಾಡಿನ ವೆಲ್ಲೂರಿನಲ್ಲಿರುವ ವಿರಿಂಚೀಪುರದಲ್ಲಿ.. 1300ವರ್ಷ ಹಳೆಯ ಮಾರ್ಗಬಾಂಡೇಶ್ವರ ಹಾಗೂ ಮರಗತಮ್ಮ ದೇವಾಲಯ..ನಾವೇಕೆ ವಾನರ ರೂಪದಲ್ಲಿರುವ ಹನುಮನನ್ನು ಪೂಜಿಸುತ್ತೇವೆ?.

ಶಿವನ ತಲೆಯನ್ನು ಕಂಡವರ್ಯಾರು??
ಶಿವನ ತಲೆಯನ್ನು ಕಂಡವರ್ಯಾರು ಎಂಬ ವಾದಕ್ಕೆ, ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಜಗಳ ಉಂಟಾಗಿ, ಬ್ರಹ್ಮನು ತಾನು ತಾಳೆ ಹೂವ ಮುಡಿದಿರೋ ಶಿವನನ್ನು ಕಂಡೆ ಎಂದು ಸುಳ್ಳು ಹೇಳುತ್ತಾನೆ.. ಇದಕ್ಕೆ ಶಿವನು ತಾನು ಲಿಂಗ ಸ್ವರೂಪಿ ಬ್ರಹ್ಮನು ಸುಳ್ಳು ಹೇಳಿದ್ದಾನೆಂದು ಅವನಿಗೆ ಶಾಪ ನೀಡುತ್ತಾನೆ.. ಆ ಶಾಪ ವಿಮುಕ್ತಿಗಾಗಿ ಬ್ರಹ್ಮ ಶಿವನನ್ನು ಪೂಜಿಸುತ್ತಾನೆ.. ಅವನ ಶಾಪ ವಿಮೋಚನೆಗಾಗಿ ಬ್ರಹ್ಮನು ನೀಡಿದ ಹೂಮಾಲೆಗಾಗಿ ಶಿವನು ತಾನೇ ಬಾಗುತ್ತಾನೆ.. ಇದೆ ವಾಲಿದ ಭಂಗಿಯಲ್ಲಿ ನಾವು ಶಿವನನ್ನು ಈ ದೇವಾಲಯದಲ್ಲಿ ಕಾಣಬಹುದು.. ಇದು ಕೇವಲ ಈ ದೇವಳದಲ್ಲಿ ಮಾತ್ರ!!

1008ಲಿಂಗದ ಲಿಂಗ:
ಅತೀ ಸುಂದರ ಕೆತ್ತನೆಗಳುಳ್ಳ ಈ ದೇವಾಲಯದಲ್ಲಿ ಇದೂ ಒಂದು ವಿಶೇಷ.. ಇಲ್ಲಿ ಒಂದು ಶಿವಲಿಂಗದಲ್ಲಿ 1008 ಸಣ್ಣ ಲಿಂಗಗಳ ಕೆತ್ತನೆಯಿದೆ.. ಹಾಗೆ ಮತ್ತೊಂದು ಶಿವಲಿಂಗದಲ್ಲಿ 108 ಲಿಂಗಗಳ ಕೆತ್ತನೆಯಿದೆ.ಇದು ದೀಪಾವಳಿ ಆಚರಿಸದ ಕರ್ನಾಟಕದ ಏಕೈಕ ಹಳ್ಳಿ…ಇದರ ಹಿಂದಿದೆ ಒಂದು ರೋಚಕ ಕಥೆ.

ಅತೀ ದೊಡ್ಡ ದೇವಾಲಯ..!
ಹೌದು ವೆಲ್ಲೂರಿನಲ್ಲಿ ಇರುವ ದೇವಾಲಯಗಳಲ್ಲೇ ಮಾರ್ಗಬಾಂಡೇಶ್ವರ ಅತೀ ದೊಡ್ಡ ದೇವಾಲಯ.. ಧನಬಾಲನ್ ಎಂಬ ಮೆಣಸು ವರ್ತಕನನ್ನು ಕಳ್ಳರು ಲೂಟಿ ಮಾಡಿದಾಗ, ಈ ದೇವರನ್ನು ಆ ವರ್ತಕನು ಬೇಡಿಕೊಂಡಾಗ, ಶಿವ ಸ್ವತಃ ಗೆಳೆಯನಾಗಿ ಬಂದು ಅವನಿಗೆ ಅವನ ಸರಕು ಪುನಃ ಸಿಗುವಂತೆ ಮಾಡಿ ಕಂಚೀಪುರಕ್ಕೆ ಮಾರ್ಗದರ್ಶನವನ್ನು ನೀಡಿದ್ದರು. ಅದಕ್ಕಾಗಿಯೇ ಈ ದೇವರನ್ನು ಮಾರ್ಗಬಂಧು ಎಂದು ಮಾರ್ಗಬಾಂಡೇಶ್ವರ ಎಂದು ಕರೆಯಲಾಗಿದೆ.

ತಿರುವಾನೂರಿನ ತೇರು ಚಂದ.. ವಿರಿಂಚೀಪುರದ ಗೋಡೆ ಚಂದ..
ಇದು ಈ ದೇವಾಲಯದ ಬಗ್ಗೆ ಜನಪದದಲ್ಲಿರುವ ನಾಣ್ಣುಡಿ… ಹೌದು 5 ಸುತ್ತು ಪ್ರದಕ್ಷಿಣೆ ಮಾಡಬಹುದಾದ ಅತೀ ಸುಂದರವಾದ ದೇಗುಲವಿದು. ಹಾಗೆ 100ಅಡಿಯ ರಾಜಗೋಪುರ ಈ ದೇವಾಲಯಕ್ಕಿದೆ!!

ದೇವಾಲಯದ ಬಗ್ಗೆ ಪುರಾಣಗಳಲ್ಲಿ..
ಕಂಚಿ ಪುರಾಣ, ಶಿವ ರಹಸ್ಯಮ್, ಅರುಣಾಚಲ ಪುರಾಣಗಳಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖವಿದೆ.. ವಿರಿಂಚೀಪುರ ಎಂದರೆ.. ವಿರಿಂಚೀ ಎಂದರೆ ಬ್ರಹ್ಮ ಎಂದರ್ಥ.. ಬ್ರಹ್ಮನಿಂದ ಅರ್ಚಿಸಲ್ಪಟ್ಟ ದೇವರಾದ್ದರಿಂದ ಈ ಊರಿಗೆ ಈ ಹೆಸರು.. ಆದಿ ಶಂಕರಾಚಾರ್ಯರಿಂದ ಈ ದೇವಾಲಯದ ಪುಷ್ಕರಣಿಯಲ್ಲಿ ಬೀಜಾಕ್ಷರ ಪ್ರತಿಷ್ಠಾನವಾಗಿದೆ. ಚೋಳರ ಕಾಲದಲ್ಲಿ ಈ ದೇವಾಲಯದ ಗೋಪುರ ನಿರ್ಮಾಣವಾಗಿದೆ.ಈ ದೇವರ ಭುಜಗಳಿಂದ ಬ್ರಹ್ಮ, ಹೃದಯದಿಂದ ವಿಷ್ಣು, ಹುಬ್ಬುಗಳಿಂದ ಶಿವ ಹಾಗೂ ಹಲ್ಲುಗಳಿಂದ ಸರಸ್ವತಿ ಹುಟ್ಟಿದ್ದಂತೆ..! ಯಾರು ಗೊತ್ತ ಆ ದೇವರು?

ಮತ್ತೊಂದು ತುಂಬಾ ಕುತೂಹಲಕಾರಿ ಕಥೆ..
ಸ್ವತಃ ಬ್ರಹ್ಮನು ಶಿವಶರ್ಮ ಎಂಬ ಬ್ರಾಹ್ಮಣನಾಗಿ ಹುಟ್ಟಿದ. ಎಳೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಾಗ ತಂದೆಯ ಪುರೋಹಿತ ಹುದ್ದೆ ಕಂಡನಾದ ಶಿವಶರ್ಮನ ಪಾಲಿಗೆ ಬಂತು.. ಅದನ್ನು ಕಸಿಯಲು ಅವನ ಬಂಧುಗಳು ಅವನಿಗೆ ಬೆದರಿಕೆ ಹಾಕಿ ಅವನ ಕೆಲಸ ಹಾಗೂ ಅವನ ಪಾಲಿನ ಭೂಮಿಯನ್ನು ಕಸಿದುಕೊಳ್ಳಲು ಹವಣಿಸಿದರು.. ಅವನ ತಾಯಿ ದೇವರನ್ನು ಬೇಡಿಕೊಂಡಾಗ ಶಿವ ಕನಸಿನಲ್ಲಿ ಬಂದು ಅಭಯ ನೀಡಿದರಂತೆ..

ಕಾರ್ತಿಕ ಮಾಸದ ಕೊನೆಯ ಶನಿವಾರದ ರಾತ್ರಿ ಶಿವಶರ್ಮನು ಇಲ್ಲಿನ ಬ್ರಹ್ಮತೀರ್ಥದಲ್ಲಿ ಸ್ನಾನ ಮಾಡಿ ಬಂದಾಗ ಸ್ವತಃ ಶಿವನೇ ಬಂದು ಅವನಿಗೆ ಉಪನಯನ ಮಾಡಿ ಬ್ರಹ್ಮೋಪದೇಶ ಹಾಗೂ ಶಿವದೀಕ್ಷೆ ನೀಡಿ ಲಿಂಗದಲ್ಲಿ ಐಕ್ಯನಾದನಂತೆ..

ಕಮಂಡಲ ಹಿಡಿದ ಶಿವಶರ್ಮನು ಬಾಗಿಲು ಹಾಕಿರುವ ದೇವಾಲಯದ ಸುತ್ತ ಆನೆ ಮೇಲೆ ಪ್ರದಕ್ಷಿಣೆ ಮಾಡಿದನಂತೆ. ದೇವಾಲಯದ ಬಾಗಿಲು ತಂತಾನೆ ತೆರೆಯಿತಂತೆ.. ಹಿರಿಯ ಅನುಭವಿ ಪುರೋಹಿತನಂತೆ ದೇವರ ಪೂಜೆ ಮಾಡಿದನಂತೆ.. ಶಿವಲಿಂಗದ ತಲೆಗೆ ಹೂ ಮುಡಿಸಲು ಎಟಕದಾದಾಗ ಶಿವನನ್ನು ಬೇಡಿಕೊಂಡಾಗ ಶಿವನೇ ತಲೆಬಾಗಿ ಹೂ ಸಮರ್ಪಿಸಿಕೊಂಡನಂತೆ.. ಅದಕ್ಕೆ ಲಿಂಗವು ವಾಲಿದ ಹಾಗಿದೆ ಎಂದು ಪುರಾಣಗಳು ಹೇಳುತ್ತವೆ..This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.