ವಿಲನ್ ಚಿತ್ರ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ-ಶಿವಣ್ಣ

ಸಿನಿಮಾ

ವಿಲನ್ ಚಿತ್ರ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ-ಶಿವಣ್ಣ

ದಿ ವಿಲನ್ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ, ಈ ಸಂದರ್ಭದಲ್ಲಿ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಚಿತ್ರವನ್ನು ಫೇಸ್‌ಬುಕ್‌ ಲೈವ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಚಿತ್ರದ ತುಣುಕುಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿರುವ ದಿ ವಿಲನ್ ಸಿನಿಮಾ ಸೀನ್ ಗಳನ್ನು ನೋಡಿ ಚಿತ್ರತಂಡ ಬೇಸರಗೊಂಡಿದೆ.

ಲೀಕ್ ಆಯಿತು ದಿ ವಿಲನ್ ಚಿತ್ರದ ದೃಶ್ಯಗಳು.. ಅಭಿಮಾನಿಗಳ ಈ ಹುಚ್ಚಾಟ್ಟಕ್ಕೆ ಬೇಸರಗೊಂಡ ಪ್ರೇಮ್ ಹೇಳಿದ್ದೇನು

ಇನ್ನೂ ಇಂದು ದಿ ಮಿಲನ್ ಚಿತ್ರ ನೋಡಲು ನರ್ತಕಿ  ಥಿಯೇಟರ್ ಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಕಿಚ್ಚ ಸುದೀಪ್, ಸಿನಿಮಾದ ರೆಸ್ಪಾನ್ಸ್ ಬಗ್ಗೆ ಖುಷಿಯಾಗುತ್ತಿದೆ. ನನ್ನ ಮತ್ತು ಸುದೀಪ್ ಪಾತ್ರಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಇದಕ್ಕೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದಗಳು. ವಿಲನ್ ಯಶಸ್ಸಿಗೆ ನೀವೆಲ್ಲ ಕಾರಣ ಎಂದು ಶಿವಣ್ಣ ತಿಳಿಸಿದರು. ಇದೇ ವೇಳೆ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕಿಚ್ಚ- ಶಿವಣ್ಣ ಹೇಳಿದ್ದೇನು…? ಮುಂದೆ ಓದಿ…

ದಿ ವಿಲನ್ ಫಸ್ಟ್ ಷೋ ಪ್ರೇಕ್ಷಕ‌ ಸಿನಿಮಾದ ಬಗ್ಗೆ ಹೇಳಿದ್ದೇನು..? ವರ್ಕ್ಔಟ್ ಆಯ್ತ ಪ್ರೇಮ್ ಸೂತ್ರ..?

ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಲೈವ್ ಮಾಡುತ್ತಿದ್ದಾರೆ. ಯಾರೇ ವಿಡಿಯೋ ಮಾಡಿದರು ಅವರಿಗೆ ತೊಂದರೆ ಉಂಟು ಮಾಡುತ್ತೆ.. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಲೀಗಲ್ ಟೀಂ ಇದೆ. ಈಗಾಗಲೇ ಇಬ್ಬರನ್ನು ಅವರ ವಶಕ್ಕೆ ತೆಗೆದುಕೊಂಡಿದ್ದಾರೆ. ಇವೆಲ್ಲವೂ ಬೇಡ ಸುಮ್ಮನೆ ನೀವೆ ತೊಂದರೆಗಳನ್ನು ಅನುಭವಿಸಬೇಕಾಗುತ್ತೆ. ಯಾವುದೇ ಸಿನಿಮಾವಾಗಲಿ ಪೈರಸಿ ಮಾಡ್ಬೇಡಿ ಎಂದರು ಕಿಚ್ಚ ..

ಲೀಕ್ ಆಯ್ತು ಪುಟ್ಟಗೌರಿ ಸಿಗರೇಟ್ ಸೇದುತ್ತಿರುವ ವಿಡಿಯೋ..!!

ಇನ್ನೂ ಶಿವಣ್ಣ ಮಾತನಾಡಿ ದಯವಿಟ್ಟು ಎಲ್ಲ ಕನ್ನಡ ಅಭಿಮಾನಿಗಳನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ.. ದಯವಿಟ್ಟು ವೀಡಿಯೋ ಮಾಡಬೇಡಿ, ದೊಡ್ಡ ಬಜೆಟ್ ಸಿನಿಮಾವಿದು. ಇದರಿಂದ ಕೋಟ್ಯಾಂತರ ರೂಪಾಯಿ ಲಾಸ್ ಆಗುತ್ತೆ.. ಜೊತೆಗೆ ಮೊಬೈಲ್ ನಲ್ಲಿ ನೋಡುವುದಕ್ಕೂ ಥಿಯೇಟರ್ ನಲ್ಲಿ ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ಥಿಯೇಟರ್ ಗೆ ಬಂದು ಸಿನಿಮಾ ನೋಡಿ, ಸ್ಟಾಪ್ ಪೈರಸಿ ಎಂದು ಮನವಿ ಮಾಡಿದರು..