ರೇಮೊ ಅಂಗಳದಲ್ಲಿ ಶರತ್ ಕುಮಾರ್ ಹವಾ..!!

ಸಿನಿಮಾ

ನಿರ್ದೇಶಕ ಪವನ್ ಒಡೆಯರ್ ನಟಸಾರ್ವಭೌಮ ಚಿತ್ರದ ಬಳಿಕ ಮತ್ತೆ ನಿರ್ದೇಶಕ್ಕೆ ಇಳಿದಿರೋ ಸಿನಿಮಾವೇ ಈ ರೇಮೊ.. ಶೀರ್ಷಿಕೆಯೆ ಹೇಳ್ತಿರೋ ಹಾಗೆ ಲವ್ ಸಬ್ಜೆಕ್ಟ್ ನ ಹೊಂದಿರುವ ಕಥೆ ಇದು.. ಇಂತಹ ಸ್ಟೋರಿಗಳನ್ನ ನೋಡುಗರಿಗೆ ಇಷ್ಟವಾಗುವಂತೆ ಕಟ್ಟಿಕೊಡುವಲ್ಲಿ ಪವನ್ ಒಡೆಯರ್ ಗೆದ್ದಿದ್ದಾರೆ.. ಈಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ರೇಮೊ ಚಿತ್ರವನ್ನ ಸಿದ್ದ ಮಾಡ್ತಿದ್ದಾರೆ.. ಸದ್ಯಕ್ಕೆ ಇದೇ ಚಿತ್ರತಂಡದಿಂದ ಇಂಟ್ರೆಸ್ಟಿಂಗ್ ಮಾಹಿತಿ ಹೊರ ಬಂದಿದೆ..

ಅದೇನೆಂದರೆ ಸೌತ್ ನ ಸೂಪರ್ ಸ್ಟಾರ್ ನಟ ಶರತ್ ಕುಮಾರ್ ಮತ್ತೆ ಕನ್ನಡದ ಚಿತ್ರಕ್ಕೆ ವಾಪಸ್ಸಾಗಿದ್ದಾರೆ.. ದರ್ಶನ್, ಪುನೀತ್ ಸೇರಿದಂತೆ ಹಲವರಿಗೆ ತಂದೆಯಾಗಿ ಕಾಣಿಸಿಕೊಂಡು ಸೈ ಎನ್ನಿಸಿಕೊಂಡಿರುವ ಶರತ್ ಕುಮಾರ್ ರೇಮೊ ಚಿತ್ರದಲ್ಲಿ ಡಿಫರೆಂಟ್ ಗೆಟಪ್ ನಲ್ಲಿ ಕಾಣಸಿಕೊಂಡಿರುವ ಮೇಕಿಂಗ್ ಸ್ಟಿಲ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ… ಶರತ್ ಕುಮಾರ್ ಇಂತಹದೊಂದು ಪಾತ್ರವನ್ನ ನಿರ್ವಹಿಸುತ್ತಿದ್ದಾರೆ ಅಂದ್ರೆನೇ ಸಿನಿಮಾದ ಮೇಲೆ ತಾನಾಗೆ ನಿರೀಕ್ಷೆ ಕೂಡ ಹೆಚ್ಚಾಗೋದು ಗ್ಯಾರಂಟಿ ಅಲ್ವ…

ಇನ್ನು ನಾಯಕನಾಗಿ ರೋಗ್ ಸಿನಿಮಾ ಖ್ಯಾತಿಯ ಇಶಾನ್ ಇದ್ರೆ, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.. ಪಕ್ಕ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಸಿ.ಆರ್.ಮನೋಹರ್ ಹಾಗು ಸಿ.ಆರ್.ಗೋಪಿ ಅವರು ದೊಡ್ಡ ಬಜೆಟ್ ನಲ್ಲಿ ಸಿನಿಮಾವನ್ನ ತೆರೆಗೆ ತರ್ತಿದ್ದಾರೆ… ಸದ್ಯ ಶರತ್ ಕುಮಾರ್ ಅವರು ತಮ್ಮ ತಂಡವನ್ನ ಸೇರಿಕೊಂಡಿರೋ ಖುಷಿಯನ್ನ ಹಂಚಿಕೊಂಡಿರೋ ಪವನ್ ಒಡೆಯರ್ ಟೀಮ್, ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಲಿದೆ..