ಜೊತೆ ಜೊತೆಯಲಿ ಧಾರಾವಾಹಿಯ ಲೇಡಿ ವಿಲನ್ ಮೀರಾ ಮೇಡಂ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು ಇಲ್ಲಿದೆ ನೋಡಿ

ಸಿನಿಮಾ

ಟಿಆರ್ಪಿ ಯಲ್ಲಿ ಉತ್ತುಂಗ ಶಿಖರ ದಲ್ಲಿರುವ ಜೊತೆ ಜೊತೆಯಲಿ ಧಾರಾವಾಹಿಯ ಒಂದು ಮುಖ್ಯ ಕ್ಯಾರೆಕ್ಟರ್ ಲೇಡಿ ವಿಲನ್ ಮೀರಾ ಮೇಡಂ. ನಾಯಕಿ ಅನುಗೆ ಬಹಳವೇ ಕಾಟ ಕೊಡ್ತೀರೋ ಸ್ಟೈಲಿಶ್ ಕ್ಯೂಟ್ ಮೀರಾಗೆ ನಿಜ ಜೀವನದಲ್ಲಿ ಕೋಪನೇ ಬರಲ್ವಂತೆ.. ಇವರ ಬಗ್ಗೆ ಇನ್ನೊಂದಷ್ಟು ಮಾಹಿತಿಗಳನ್ನು ನಾವಿಲ್ಲಿ ನಿಮಗಾಗಿ ತಂದಿದ್ದೇವೆ.

ಮೀರಾ ಕ್ಯಾರೆಕ್ಟರ್ ಮಾಡ್ತಾ ಇರುವ ನಿಜವಾದ ಹೆಸರು ಮಾನಸ. ಮೂಲತಹ ಬೆಂಗಳೂರಿನವರಾದ ಮಾನಸ ಬೆಂಗಳೂರಿನ ಜೆಪಿನಗರದ ನಿವಾಸಿಯಾದ ಇವರಿಗೆ ಈ ಧಾರವಾಹಿಯಲ್ಲಿ ನಟಿಸಬೇಕೆಂದು ಕೇಳಿಕೊಂಡಿದ್ದು ಸ್ವತಹ ನಿರ್ದೇಶಕರಾದ ಆರೂರು ಜಗದೀಶ್. ಇಷ್ಟೊಂದು ಕ್ಯೂಟ್ ಆಗಿರೋ ಮಾನಸ ಅವರಿಗೆ ನೆಗೆಟಿವ್ ರೋಲ್ ಕೊಟ್ಟಾಗ ಅವರು ಇದು ನೆಗೆಟಿವ್ ಅನ್ನೋದಕ್ಕಿಂತ ತುಂಬಾ ರಿಯಲಿಸ್ಟಿಕ್ ಆಗಿದೆ ಅಂತ ಸೆಲೆಕ್ಟ್ ಮಾಡಿದ್ರಂತೆ.

ನಾಯಕಿ ಅನು ತನ್ನ ಜಾಗಕ್ಕೆ ಆಕ್ರಮಣ ಮಾಡ್ತಿದ್ದಾಳೆ ಅನ್ನೋ ಕಾರಣಕ್ಕೆ ಅಥವಾ ಆರ್ಯವರ್ಧನ್ ಸರ್ ಅವಳಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಅನುನ ತುಂಬಾ ದ್ವೇಷಿಸುತ್ತಿರೋ ಈ ಕ್ಯಾರೆಕ್ಟರ್ ತುಂಬಾನೇ ಚಾಲೆಂಜಿಂಗ್ ಅಂತಾರೆ ಮಾನಸ. ಅಂದಹಾಗೆ ಜೊತೆ ಜೊತೆಯಲಿ ಮಾನಸ ಅವರ ಮೊದಲ ಧಾರವಾಹಿ ಏನೂ ಅಲ್ಲ. ಈ ಮೊದಲು ಅವರು ಅಶ್ವಿನಿ ನಕ್ಷತ್ರ, ಶುಭವಿವಾಹ, ಅಮೃತವರ್ಷಿಣಿ ಹಾಗು ಶ್ರೀ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರಂತೆ. ಇದು ಅವರ ಐದನೇ ಸೀರಿಯಲ್. ಎಂಬಿಎ ಓದಿರುವ ಮಾನಸಗೆ ಧಾರಾವಾಹಿ ಒಂದು ಒಳ್ಳೆ ಕರಿಯರ್ ಆಗಿ ಕಾಣಿಸ್ತಿದೆ.

ಅಂದಹಾಗೆ ಈಕೆಗೆ ಚಾಕೊಲೇಟ್, ಪೇಸ್ಟ್ರಿ, ರಸಮಲೈ, ಜಾಮೂನ್ ಅಂದ್ರೆ ಬಹಳನೇ ಇಷ್ಟವಂತೆ. ಸೀರಿಯಲ್ ನಲ್ಲಿ ತುಂಬಾ ಪ್ರೊಫೆಷನಲ್ ಆಗಿ ತುಂಡು ಉಡುಗೆಗಳನ್ನು ಧರಿಸಿ ನಟಿಸಿರುವ ಮೀರಾ ಅವರನ್ನು ಮುಂದಿನ ದಿನಗಳಲ್ಲಿ ಸೀರೆಗಳಲ್ಲೂ ಕಾಣುವ ಅಭಿಲಾಷೆ ಅಭಿಮಾನಿಗಳದು. ಅದು ಮುಂದಿನ ಎಪಿಸೋಡ್ ಗಳಲ್ಲಿ ಇದೆ ಅಂತಾರೆ ಮಾನಸ.