ಸೈರಾ-ವಾರ್ ಗೆ ಟಕ್ಕರ್ ಕೊಡೋಕೆ ಬರ್ತಿದೆ ಸವರ್ಣ ದೀರ್ಘ ಸಂಧಿ…!!

ಸಿನಿಮಾ

ಹಬ್ಬಗಳು ಶುರುವಾಗ್ತಿದ್ದ ಹಾಗೆ ಹಲವು ಸಿನಿಮಾಗಳು ತೆರೆಗೆ ಬರೋಕೆ ಡೇಟ್ ಫಿಕ್ಸ್ ಮಾಡಿಕೊಂಡು ಬಿಡುತ್ತೆ.. ಆಕ್ಟೋಬರ್ 2 ರಂದು ಗಾಂಧಿ ಜಯಂತಿಯಿಂದ ಹಿಡಿದು ವಿಜಯದಶಮಿಯ ವರೆಗು ಸಾಲು ಸಾಲು ಚಿತ್ರಗಳು ತೆರೆಗೆ ಬರುತ್ತೆ.. ಅದರಲ್ಲು ಇದನ್ನ ಬಳಸಿಕೊಳ್ಳಲು ಮುಂದಾಗಿರೋ ದೊಡ್ಡ ಸಿನಿಮಾಗಳ ಪೈಕಿ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಹಾಗು ಹೃತಿಕ್ ರೋಶನ್ ಅಭಿನಯದ ವಾರ್ ಬಿಡುಗಡೆಯಾಗ್ತಿವೆ. ಈ ಎರಡು ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆಯನ್ನ ಹುಟ್ಟು ಹಾಕಿವೆ..

ಈಗ ಈ ಎರಡು ಚಿತ್ರಗಳ ಜೊತೆಗೆ ಕನ್ನಡ ತನದ ಸಿನಿಮಾ ಸವರ್ಣದೀರ್ಘ ಸಂಧಿ ಬಿಡುಗಡೆಯಾಗುತ್ತಿದೆ.. ದೊಡ್ಡ ಸ್ಟಾರ್ಕಾಸ್ಟ್ ಇಲ್ಲದಿದ್ರು, ಹೊರಬರೆ ಸೇರಿ ಸಿನಿಮಾ ಮಾಡಿದ್ರು ದೊಡ್ಡ ಚಿತ್ರಗಳ ಜೊತೆಗೆ ಪೈಪೋಟಿಗೆ ಇಳಿದಿದೆ.. ಇದಕ್ಕೆ ಕಾರಣ ಕನ್ನಡ ಸಿನಿ ಪ್ರೇಮಿಗಳು.. ಒಳ್ಳೆ ಸಿನಿಮಾ ಕೈ ಬಿಡೋದಿಲ್ಲ ಎಂಬ ನಿರೀಕ್ಷೆ ಚಿತ್ರತಂಡದಲ್ಲಿದ್ದು, ಅಕ್ಟೋಬರ್ 2ಕ್ಕೆ ತೆರೆ ಕಾಣ್ತಿದೆ..

ಈ ಸಿನಿಮಾ ಬಗ್ಗೆ ಈಗಾಗಲೇ ಒಳ್ಳೆ ಮಾತುಗಳು ಕೇಳಿ ಬರ್ತಿದ್ದು, ಮನೋಮೂರ್ತಿ ಅವರ ಮ್ಯೂಸಿಕ್ ಮೋಡಿಗೆ ಕೇಳುಗರು ತಲೆದೂಗಿದ್ದು, ತುಳು ಭಾಷೆಯಲ್ಲಿ ಚಿತ್ರ ಮಾಡಿ ಸಕ್ಸಸ್ ಆಗಿರೋ ಡೈರೆಕ್ಟರ್ ಹಾಗು ನಟ ವೀರೇಂದ್ರ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ನಲ್ಲು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.. ಕನ್ನಡಿಗರ ಈ ಹೊಸ ಪ್ರಯತ್ನಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದ್ದು, ಅಕ್ಟೋಬರ್ 2 ರಂದು ಥಿಯೇಟರ್ ತೆರಳಿ ಸಿನಿಮಾ ನೋಡಿ ಪ್ರೋತ್ಸಾಹ ನೀಡಬೇಕಾದ ಜವಾಬ್ದಾರಿ ಸಿನಿ ಪ್ರೇಮಿಗಳ ಕೈಲಿದೆ..