ಅ.18 ಕ್ಕೆ ಕನ್ನಡ ವ್ಯಾಕರಣ ಪಾಠದ ಜೊತೆಗೆ ಮನರಂಜನೆಯನ್ನ ಹೊತ್ತು ಬರ್ತಿದೆ ಸವರ್ಣದೀರ್ಘ ಸಂಧಿ

ಸಿನಿಮಾ

ಶ್ರೇಯಾ ಘೋಷಾಲ್ ಹಾಗು ಮನೋಮೂರ್ತಿ ಅವರ ಜುಗಲ್ ಬಂದಿ ಎಂದು ಸೂಪರ್ ಡೂಪರ್ ಹಿಟ್.. ಮನೋಮೂರ್ತಿ ಅವರ ಸಂಗೀತ, ಶ್ರೇಯಾ ಘೋಷಾಲ್ ಇಂಪಾದ ಧ್ವನಿ ಸೇರಿದ್ರೆ ಹಾಡುಗಳು ಹಿಟ್ ಆಗೋದು ಸಾಮಾನ್ಯ.. ಹೀಗೆ ಸದ್ಯಕ್ಕೆ ಬಿಡುಗಡೆಗೆ ರೆಡಿಯಾಗಿರೋ ಚಿತ್ರವಾದ ಸವರ್ಣದೀರ್ಘ ಸಂಧಿ ಸಿನಿಮಾದಲ್ಲಿ ಕೊಳಲಾದೆನಾ ಅನ್ನೋ ಹಾಡು ಸಂಗೀತ ಪ್ರೇಮಿಗಳನ್ನ ರಂಜಿಸಿದೆ.. ಈಗ ಸಿನಿಮಾವನ್ನ ರಿಲೀಸ್ ಮಾಡೋಕೆ ಚಿತ್ರತಂಡ ಪಕ್ಕ ಪ್ಲಾನ್ ಮಾಡಿದಂತ್ತಿದೆ..

ಈ ಹಿಂದೆ ಅಕ್ಟೋಬರ್ ಮೊದಲ ವಾರವೆ ಸಿನಿಮಾ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಅನ್ನ ಮುಂದೆ ಹಾಕಿದ್ದು, ಆಕ್ಟೋಬರ್ 18ಕ್ಕೆ ಥಿಯೇಟರ್ ಗೆ ಬರಲಿದೆ.. ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಈ ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಕ್ರಿಯೇಟ್ ಆಗಿರೋದು ಚಿತ್ರತಂಡಕ್ಕೆ ದೊಡ್ಡ ಬಹುಮಾನ ಸಿಕ್ಕಂತಾಗಿದೆ..

ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜರಾವ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.. ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ಮನೋಮೂರ್ತಿ ಅವರು ಸಂಗೀತ ನೀಡಿರೋದು ಮಾತ್ರವಲ್ಲ, ನಿರ್ಮಾಣದಲ್ಲು ಕೈ ಜೋಡಿಸಿದ್ದಾರೆ.. ವೀರು ಟಾಕೀಸ್, ಲೈಲಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್ ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..