‘ದೊಡ್ಡ್ಮನೆ ಹುಡುಗ’ ಚಿತ್ರದ ರೇಟಿಂಗ್ ಅನ್ನ ಬೀಟ್ ಮಾಡಿದ್ನಾ ‘ರಾಜಕುಮಾರ’

ವಾಹಿನಿ ಸುದ್ದಿ ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ದೊಡ್ದ್ಮನೆ ಹುಡುಗ’ ಚಿತ್ರ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದಿದೆ. ಕಿರುತೆರೆ ಇತಿಹಾಸದಲ್ಲಿ ಹೆಚ್ಚು TRP ಗಳಿಸಿ,  ಕನ್ನಡ ಚಿತ್ರವೊಂದು ದಾಖಲೆ ಪುಟಗಳಲ್ಲಿ ಸೇರುವಂತೆ ಮಾಡಿತು ‘ದೊಡ್ದ್ಮನೆ ಹುಡುಗ’. ಪುನೀತ್ ರಾಜಕುಮಾರ್ ಚಿತ್ರಗಳು ಅಂದ್ರೇನೆ ಹಾಗೇ ಕ್ಲಾಸ್. ಅಪ್ಪನಂತೆ ಹೆಚ್ಚಾಗಿ ಕೌಟುಂಬಿಕ ಚಿತ್ರಗಳತ್ತ ಒಲವು .  ತೋರಿಸುವ ಅಪ್ಪುಗೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚು.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ‘ರಾಜಕುಮಾರ’ ಇತ್ತೀಚಿಗೆ ತೆರೆಕಂಡು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಡಾ.ರಾಜ್ ಕುಮಾರ್ ಅವರನ್ನು ನೆನಪಿಸುವ ಈ ಚಿತ್ರ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದ್ದಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಕೂಡ ಸೂಪರ್ ಹಿಟ್ ದಾಖಲೆ ಮಾಡಿತು.

ಬೆಳ್ಳಿತೆರೆಯಲ್ಲಿ ಭರ್ಜರಿ ಮನರಂಜನೆ ನೀಡಿದ ‘ರಾಜಕುಮಾರ’  ಚಿತ್ರ ಕಿರುತೆರೆಯಲ್ಲಿ ಪ್ರಪ್ರಥಮವಾಗಿ ಪ್ರಸಾರವಾಯಿತು. ಈ ಸಿನಿಮಾ ಕುರಿತಾಗಿ TRP ಎಷ್ಟಾಗಬಹುದು ಎಂಬ ಕುತೂಹಲ ಎಲ್ಲರಲ್ಲಿತು. ದೀಪಾವಳಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ಪ್ರಸಾರವಾದ  ‘ರಾಜಕುಮಾರ’ ಚಿತ್ರದ ರೇಟಿಂಗ್ ‘16 TRP’.

ಈ ಹಿಂದೆ ‘ದೊಡ್ದ್ಮನೆ ಹುಡುಗ’ ಕಿರುತೆರೆಯಲ್ಲಿ ಪ್ರಸಾರವಾಗಿ  ’21 TRP’ ಗಳಿಸಿ ರೇಟಿಂಗ್ ನಲ್ಲಿ ನಂಬರ್ 1 ಸ್ಥಾನವನ್ನ ಪಡೆಯಿತು.  ಆದ್ರೆ ‘ರಾಜಕುಮಾರ’ ನೀರಿಕ್ಷೆಯಷ್ಟು ರೇಟಿಂಗ್ ಪಡೆಯಲಿಲ್ಲ. ಯಾಕೆಂದರೆ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಸಿನಿಮಾ ಫೇಸ್ ಬುಕ್ ಹಾಗೂ ಮೊಬೈಲ್ ಗಳಲ್ಲಿ  ಓಡಾಡಿತ್ತು. ರೇಟಿಂಗ್ ಇಳಿಕೆಗೆ ಬಹುಶಃ ಇದು ಕೂಡ ಕಾರಣ ಇರಬಹುದು. ಒಟ್ಟಿನಲ್ಲಿ ‘ದೊಡ್ಡ್ಮನೆ ಹುಡುಗ’ ಚಿತ್ರ ನಂ.1 ಸ್ಥಾನ ಉಳಿಸಿಕೊಂಡಿದ್ದಾನೆ.

ಕೃಪೆ : ಜೀ ಕನ್ನಡ