ಸುದೀಪ್ ಮಾತಿಗೆ ಮರ್ಯಾದೆ ಕೊಡದೆ ಮೊಂಡತನ ತೋರಿದ ಸ್ಪರ್ಧಿ ಯಾರು ಗೊತ್ತಾ..?

ವಾಹಿನಿ ಸುದ್ದಿ

ಎಂದಿನಂತಿರಲಿಲ್ಲ ಇಂದು ಮನೆಯಲ್ಲಿದ ಒಬ್ಬ ಗುರುಜೀ ಆಟ.. ತನ್ನ‌ ಆಟದಿಂದ ಎಲ್ಲರ‌ ನಿಂದನೆಗೆ ಗುರಿಯಾದವರು ಇವರೇ ನೋಡಿ

ಕಳೆದ ವಾರದ ಸಂಚಿಕೆಯಲ್ಲಿ ಜೈ ಶ್ರೀನಿವಾಸನ್ ಗುರುಜೀ ಹಾಗೆ ಸಮೀರ್ ಆಚಾರ್ಯ ನಡುವೆ ಜಗಳವಾಗಿತ್ತು.. ಇದು ಕಿಚ್ಚನ ಮುಂದೆಯೂ ನಡೆದ ವಾದವಾಗಿತ್ತು.. ಆಗಾ ಜೈ ಶ್ರೀನಿವಾಸನ್ ಗುರುಜೀ, ಆಚಾರ್ಯ ಅವರು ಗೆಟಪ್ ಹಾಕಿಕೊಂಡಿರುವ ಗುರುಜೀ, ನಾನು ಗೆಟಪ್ ಇಲ್ಲದೆ ಇರುವ ಗುರುಜೀ ಅಂದ್ರು..

ಈ ಮೂಲಕ ಆಚಾರ್ಯ ಗೆಟಪ್ ನಲ್ಲಿರೋ ಸತ್ವವಿಲ್ಲದ ಗುರುಜೀ ಅಂದ್ರು ಶ್ರೀನಿವಾಸನ್ ಅವರು… ಇದಕ್ಕೆ ಕಾರಣ ಈ ಹಿಂದೆಯ ಒಂದು ಎಪಿಸೋಡ್ ನಲ್ಲಿ‌ ಜ್ಯೋತಿಷ್ಯದ ಬಗ್ಗೆ ಶ್ರೀನಿವಾಸನ್ ಅವರು ಕೇಳಿದ ಪ್ರಶ್ನೆಗೆ ಆಚಾರ್ಯ ಸರಿಯಾಗಿ ಉತ್ತರ ನೀಡಿರಲಿಲ್ಲ..

ಇದರೊಂದಿಗೆ ಆಟದ ಸಮಯದಲ್ಲಿ ಈ ಇಬ್ಬರ ನಡುವೆ ವಾದ ವಿವಾದಗಳಾಗಿ ಒಬ್ಬರಿಗೆ ಒಬ್ಬರು ಆಗದ ಹಾಗೆ ಆದ್ರು.. ಈ ಬಗ್ಗೆ ಮಾತಾನಾಡಿದ ಕಿಚ್ಚ ಸುದೀಪ್ ಅದನ್ನೆಲ್ಲ ಅಲ್ಲಿಗೆ ಬಿಟ್ಟು ಆಟದ ಕಡೆ ಗಮನ ಕೊಡಿ ಅಂತ ಹೇಳಿದ್ರು.. ಜೊತೆಗೆ ಈ ಇಬ್ಬರಿಗೂ ಬುದ್ದಿವಾದ ಹೇಳಿ ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಅಂದ್ರು..

ಬಟ್ ಸೋಮವಾರ ಎಪಿಸೋಡ್ ನ ಆರಂಭದಲ್ಲಿ ಆಚಾರ್ಯರಿಗೆ ಅದೇನು ಆಯಿತೋ ಏನು ಗೊತ್ತಿಲ್ಲ.. ಮನೆಯಲ್ಲಿದ್ದ ಟ್ರೇ ಒಂದನ್ನ ತಂದು ಅದರ ಮೇಲೆ ಚಂದನ ಕೈಯಲ್ಲಿ “ನಾನು ಫೇಕ್ ಸ್ಟಾರ್, ಕರ್ನಾಟಕ ಜನತೆ ರಿಯಲ್ ಸ್ಟಾರ್, ರೈತರು ಪವರ್ ಸ್ಟಾರ್, ಸೈನಿಕರು ರೆಬಲ್ ಸ್ಟಾರ್, ಗೆಟಪ್ ಗುರುಜೀ” ಅಂತ ಬರೆದ ಅದನ್ನ ನೇತು ಹಾಕಿಕೊಂಡು ಓಡಾಡಿದ್ರು..

ಇದಕ್ಕೆ ಮನೆಯ ಸದಸ್ಯರೆಲ್ಲ ವಿರೋಧ ವ್ಯಕ್ತ ಪಡೆಸಿದ್ರು.. ದಿವಾಕರ್ ಹಾಗೆ ನಿವೇದಿತಾ ಹೀಗೆ ಮಾಡದಂತೆ ಬುದ್ದಿವಾದ ಹೇಳಿದ್ರು ಕೇಳಲಿಲ್ಲ.. ನಂತರ ಆ ಟ್ರೇಯನ್ನ ಬಿಗ್ ಬಾಸ್ ವಾಪಾಸ್ ತರೆಸಿಕೊಂಡ್ರು..

ಬಟ್ ಪಟ್ಟು ಬಿಡದ ಆಚಾರ್ಯ ಅವರು ಮತ್ತೆ ತಮ್ಮ ಬಟ್ಟೆಯಲ್ಲೆ ಅದನ್ನೆ ಬರೆಯೋಕೆ ಶುರು ಮಾಡಿದ್ರು.. ಈ ಹಿಂದೆ ಸುದೀಪ್ ಅದನ್ನ ಅಲ್ಲಿಗೆ ಬಿಟ್ಟು ಆಟ ಆಡಿ ಅಂತ ಹೇಳಿದ್ರು, ಆದರೆ ಇಂದು ಕಾರಣವೆ ಇಲ್ಲದೆ ಆಚಾರ್ಯ ಅವರು ನಡೆದುಕೊಂಡ ರೀತಿ ಮನೆಯ ಸದಸ್ಯರಿಗೆ ಕೋಪ ತರೆಸಿತ್ತು..

ಇದೇ ಸಂದರ್ಭದಲ್ಲಿ ಶ್ರೀನಿವಾಸನ್ ಗುರುಜೀ ಜೊತೆ ಮಾತನಾಡಿದ ಅನುಪಾಮ ಸುದೀಪ್ ಅವರು ಅಂದು ಅಷ್ಟು ಹೇಳಿದ್ರು ಈಗ್ಯಾಕೆ ಹೀಗೆ ಮಾಡ್ತಿದ್ದಾರೆ ಅಂತ ಮಾತನಾಡಿದ್ರು..

Pic Courtesy: Colors Kannada HD