ಐತಿಹಾಸಿಕ ವಿಶ್ವದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!! ಈ ಹೊಸ ದಾಖಲೆಗಳೇನು ಗೊತ್ತಾ?

ಸ್ಪೋರ್ಟ್ಸ್

ರಾಜ್‌ಕೋಟ್‌ನಲ್ಲಿ ಶುಕ್ರವಾರ ಇಂದು ನಡೆದ ಎರಡನೇ ಟಿ 20 ಯಲ್ಲಿ, ಆಫ್ ಸ್ಪಿನ್ನರ್ ಮೊಸದ್ದೇಕ್ ಹೊಸೈನ್ ರ ಎಸೆತದ ಚೆಂಡಿಗೆ ರೋಹಿತ್ ಶರ್ಮಾ ಆರು ಸಿಕ್ಸರ್‌ಗಳು, ಒಮ್ಮೆ ಸತತ ಮೂರು ಸಿಕ್ಸರ್‌ಗಳು ಮತ್ತು ಆರು ಬೌಂಡರಿಗಳನ್ನು ಹೊಡೆದು ಈಗ ಒಂದು ಇತಿಹಾಸಿಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶ ವಿರುದ್ಧ ಭಾರತವನ್ನು 8 ವಿಕೆಟ್‌ಗಳ ಗೆಲುವಿನತ್ತ ಕೊಂಡೊಯ್ದರು. ಹಿಟ್ ಮ್ಯಾನ್ ಎಂದೇ ಪ್ರಸಿದ್ಧರಾದ ರೋಹಿತ್ ಶರ್ಮಾ ಈಗ 100 ಟಿ 20 ಐ ಪಂದ್ಯಗಳನ್ನಾಡಿದ ಆಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಜೊತೆಗೆ ರೋಹಿತ್ ಶರ್ಮಾ ಹೆಚ್ಚಿನ ಸಿಕ್ಸರ್‌ಗಳ ಹ್ಯಾಟ್ರಿಕ್ ದಾಖಲಿಸುವಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ!

ರೋಹಿತ್ ಸತತ ಮೂರನೇ ಬಾರಿಗೆ ಈ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ರಿಯಲ್ ಹಿಟ್ ಮ್ಯಾನ್ ಆಗಿದ್ದಾರೆ. ಅದೂ ಅಲ್ಲದೆ, ಈ ವರ್ಷದಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್ ಸಿಕ್ಸ್ ದಾಖಲಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ! ರೋಹಿತ್ ಇದುವರೆಗೆ 2019 ರಲ್ಲಿ ಕ್ರಿಕೆಟ್ ನ ಎಲ್ಲಾ ಸ್ವರೂಪಗಳಲ್ಲಿ ಒಟ್ಟು 66 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಟಿ 20 ಐ ಮತ್ತು ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಕೂಡ ಸೇರಿದೆ. 2018 ರಲ್ಲಿ ಅವರು 74 ಸಿಕ್ಸ್ ಗಳಿಸಿದ್ದರೆ 2017 ರಲ್ಲಿ 65 ರನ್ ಗಳಿಸಿದ್ದರು.

“ದೊಡ್ಡ ಸಿಕ್ಸರ್‌ಗಳನ್ನು ಹೊಡೆಯಲು ನಿಮಗೆ ದೊಡ್ಡ ದೇಹ ಹಾಗು ಬಲದ ಅಗತ್ಯವಿಲ್ಲ. ನಾನು(ಚಹಲ್) ಕೂಡ ಸಿಕ್ಸರ್‌ಗಳನ್ನು ಹೊಡೆಯಬಹುದು. ನೀವು ಸಿಕ್ಸರ್‌ಗಳನ್ನು ಹೊಡೆಯಲು ಬೇಕಾದದ್ದು ಪವರ್ ಮಾತ್ರವಲ್ಲ, ಸಮಯ ಕೂಡ ಬೇಕು ಹಾಗು ಸಿಕ್ಸರ್ ಹೊಡೆಯಲು ಹಲವಾರು ವಿಷಯಗಳನ್ನು ಗಮನಿಸಬೇಕು”ಎಂದು ರೋಹಿತ್ ಶರ್ಮಾ ತಂಡದ ಸಹ ಆಟಗಾರ ಯುಜ್ವೇಂದ್ರ ಚಾಹಲ್ ತಿಳಿಸಿದ್ದಾರೆ.