ಕನ್ನಡ ಚಿತ್ರರಂಗದಲ್ಲಿ ಶ್ರೀದೇವಿ ಮುಖ್ಯ ಪಾತ್ರದಲ್ಲಿ ಯಾಕೆ‌ ಕಾಣಿಸಿಕೊಳ್ಳಲಿಲ್ಲ ಗೊತ್ತಾ..

ವಾಹಿನಿ ಸುದ್ದಿ ವಿಡಿಯೋ ಸಿನಿಮಾ

ಹವಾ ಹವಾಯಿ.. ಅಂತ ಬಾಲಿವುಡ್ ನಲ್ಲಿ ಟ್ರೆಂಡ್ ಸೆಟ್ ಮಾಡಿ ಚಿತ್ರ ರಸಿಕರ ಮನದಲ್ಲಿ ತಲ್ಲಣ ಉಂಟುಮಾಡಿದ್ದ ಶ್ರೀದೇವಿ ಬಾಲಿವುಡ್ ಅಲ್ಲದೆ ಎಲ್ಲಾ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು!!

ಆದರೆ ವಿಶೇಷವೆಂದರೆ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಇವರು ಕೇವಲ ಅತೀ ಕಡಿಮೆ ಚಿತ್ರಗಳಲ್ಲಿ ನಟಿಸಿರುವುದು! ಬಾಲನಟಿಯಾಗಿ ಕನ್ನಡದಲ್ಲಿ ಕನ್ನಡದ ‘ಭಕ್ತ ಕುಂಬಾರ’ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಆನಂತರ ಕನ್ನಡದಲ್ಲಿ ಸಿನಿಮಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಕುಟುಂಬದ ಮುಂದೆಯೇ ಪ್ರಾಣ ಬಿಟ್ಟ ನಟಿ ಶ್ರೀದೇವಿ.. ಸಾವಿಗೆ ಕಾರಣವಾಯ್ತು ಈ ಖಾಯಿಲೆ

ಕನ್ನಡ ಚಿತ್ರರಂಗದಲ್ಲಿ ಶ್ರೀದೇವಿ ಮುಖ್ಯ ಪಾತ್ರದಲ್ಲಿ ಯಾಕೆ‌ ಎಂದು ಅಭಿನಯಿಸಲಿಲ್ಲ ಎಂದು ಕೇಳಿದಾಗ, ಶ್ರೀದೇವಿಯವರ ಉತ್ತರ ಇದು,  ಶ್ರೀದೇವಿಯವರಿಗೆ ಕನ್ನಡ ಭಾಷೆ ಇತರ ದಕ್ಷಿಣ ಭಾರತದ ಭಾಷೆಗಳಿಗಿಂತ ಕಷ್ಟವಂತೆ!! ಹಾಗಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದಿದ್ದರು..

ಶ್ರೀದೇವಿ ಮತ್ತು ಬೆಂಗಳೂರು..

ಬೆಂಗಳೂರಿನ ಬಗ್ಗೆ ವಿಶೇಷವಾದ ಅಭಿಮಾನವನ್ನು ಹೊಂದಿದ್ದರು ಶ್ರೀದೇವಿ. ಅವರೇ ಹೇಳಿರುವ ಪ್ರಕಾರ, ಬೆಂಗಳೂರು ಅವರ ನೆನಪಿನಲ್ಲಿ ಉಳಿಯಲು ಒಂದು ಮುಖ್ಯ ಕಾರಣ ಅವರ ಹಲವಾರು ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿತಂತ್ತೆ.

ಏನಿದು ಹೊಸ ಕಿಡಿ… ಯಶ್ ಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ಟಗರು ಶಿವ!? ಏನದು ಡೈಲಾಗ್..?

ಅದರಲ್ಲಿ ಮುಖ್ಯವಾಗಿ ಇತ್ತೀಚಿನ ಬಾಲು ಮಹೇಂದ್ರ ಅವರ “ಸದ್ಮಾ” ಮತ್ತು ಅದರ ತಮಿಳು ಅವತರಣಿಕೆ “ಮೂನ್ದ್ರಂ ಪಿರೈ” ಚಿತ್ರಕ್ಕಾಗಿ 1 ತಿಂಗಳು ಬೆಂಗಳೂರಿನಲ್ಲಿ ತಂಗಿದ್ದರು. ಅವರು ಇಲ್ಲಿದ್ದಾಗ ಅವರ ಹಲವು ಅಭಿಮಾನಿಗಳು ಅವರನ್ನು ಭೇಟಿಯಾಗಿದ್ದರಂತೆ.

ಅವರ ಕೊನೆಯ ಹಿಂದಿ ಸಿನೆಮಾ “ಮಾಮ್”ಗೆ ಅತ್ಯುತ್ತಮ ಪ್ರತಿಕ್ರಿಯೆಬಂದಿತ್ತಂತೆ. ಇದರಲ್ಲಿ ಅಕ್ಷಯ್ ಖನ್ನಾ ಮತ್ತು ನವಾಜುದ್ದಿನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲಿ ಅವರ ಕೊನೆಯ ಸಿನೆಮಾ “ಪುಲಿ” ಆಗಿತ್ತು.

ಶಿವಣ್ಣನ ಟಗರು ಸಿನಿಮಾದ ಖದರನ್ನು ಬಿಚ್ಚಿಟ್ಟ ಕಿರಿಕ್ ಕೀರ್ತಿ…

ಆದರೆ ಎವರ್ ಗ್ರೀನ್ ಬ್ಯೂಟಿ ಶ್ರೀದೇವಿ ರವರು ಇಂದು ನಮ್ಮನ್ನಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಹೀಗಾಗಿ ಶ್ರೀದೇವಿ ಕನ್ನಡದಲ್ಲಿ ಕೊನೆಗೂ ನಟಿಸಲೇ ಇಲ್ಲ..!

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.