ಎಲ್ಲರ ಮನೆಯವರು ಬಂದ್ರೂ ಶೃತಿ ಮನೆಯವರು ಬರದೆ ಇರಲು ಕಾರಣವೇನು.. ಇಲ್ಲಿದೆ‌ ನೋಡಿ..

ವಾಹಿನಿ ಸುದ್ದಿ ಸಿನಿಮಾ

ಬಿಗ್ ಬಾಸ್ ಮನೆಯಲ್ಲಿರುವ ಕ್ಯೂಟೆಸ್ಟ್ ಸ್ಪರ್ಧಿಗಳಲ್ಲಿ ಶೃತಿ ಪ್ರಕಾಶ್ ಕೂಡ ಒಬ್ಬರು.. ಶೋ ಪ್ರಾರಂಭದಲ್ಲಿ ಸ್ಪರ್ಧಿಗಳನ್ನೂ ಮನೆಯೊಳಗೆ ಕಳಿಸುವ‌ ಮುನ್ನ ತಮ್ಮ ತಮ್ಮ ಮನೆಯಿಂದ ಎಲ್ಲರೂ ಬರ್ತಾರೆ ಬಟ್ ಶೃತಿ ಪ್ರಕಾಶ್ ಕೊನೆ ಘಳಿಗೆಯಲ್ಲಿ ಆಯ್ಕೆಯಾದ ಕಾರಣ ಅವರ ಮನೆಯಿಂದ ಯಾರು ಬರಲಿಲ್ಲ.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಯಾರೇ‌ ಕ್ಯಾಪ್ಟನ್ ಅದರೂ ಅವರಿಗೆ ಮನೆಯಿಂದ ವಾಯ್ಸ್ ನೋಟ್ ಬರುತ್ತೆ. ಶೃತಿ ಪ್ರಾರಂಭದಲ್ಲೇ ಕ್ಯಾಪ್ಟನ್ ಆದ ಕಾರಣ ಅವರ ಮನೆಯಿಂದ ಯಾವುದೇ ವಾಯ್ಸ್ ನೋಟ್ ಬರಲಿಲ್ಲ.‌ ಅಲ್ಲದೆ ಟಾಸ್ಕ್ ಒಂದರಲ್ಲಿ ಮನೆಯಿಂದ ಬಂದ ಪತ್ರವೂ ಕೂಡ ಬೆಂಕಿಗೆ ಆಹುತಿಯಾಯಿತು.

ನೀನು ಒಂದು ಹೆಣ್ಣೇನಾ.?.. ಥೂ ನಿನ್ನ ಜನ್ಮಕ್ಕೆ ಅಂತ ಶೃತಿಗೆ ಬೈದಿದ್ಯಾಕೆ ಕೃಷಿ…?

ಅದು ಯಾಕೋ ಏನೋ ಶೃತಿಗೆ ಅದೃಷ್ಟ ಅನ್ನೋದೇ‌ ಇಲ್ಲ ಅನ್ನಿಸುತ್ತೆ. ಈ ಬಾರಿಯೂ ಶೃತಿಗೆ ನಿರಾಸೆ ಉಂಟಾಯಿತು.. ಈ ವಾರ ಸ್ಪರ್ಧಿಗಳ ಮನೆಯಿಂದ ಅವರ ಮನೆಯವರು ಬಂದು ಸ್ಪರ್ಧಿಗಳ ಯೋಗಕ್ಷೇಮ ವಿಚಾರಿಸಿಕೊಂಡರು. ಆದರೆ ಶೃತಿ ಪ್ರಕಾಶ್ ಅವರ ಮನೆಯಿಂದ ಯಾರಾದರೂ ಬರಬಹುದು ಎಂಬ ನಿರೀಕ್ಷೆ ಇಟ್ಟಿಕೊಂಡಿದ್ದರು.

ಶೃತಿ ಚಂದನ್ ಜೊತೆಗೆ ಡೇಟಿಂಗ್ ಹೋಗದಂತೆ ತಡೆದಿದ್ಯಾರು..??

ಆದರೆ ಈ ಬಾರಿಯೂ ಕೂಡ ಶೃತಿಗೆ ಭಾರಿ ನಿರಾಸೆಯಾಗಿದೆ. ತಮ್ಮ ಮನೆಯಿಂದ ಯಾರೂ ಬರದ ಕಾರಣ, ಅವರ ಅಕ್ಕ ಮಾತನಾಡಿರುವ ವಿಡಿಯೋ ಪ್ಲೇ ಮಾಡಲಾಯಿತು. ಕಾರಣಾಂತರಗಳಿಂದ ಮನೆಯಿಂದ ಯಾರು ಬರಲು ಸಾಧ್ಯವಿಲ್ಲ. ನಿನ್ನು ತುಂಬಾ ಚೆನ್ನಾಗಿ ಆಟವಾಡುತ್ತಿದ್ದೀಯ ಹೀಗೆ ಆಡು, ನಿನ್ನ ನಿರೀಕ್ಷೆಗಾಗಿ ಕಾಯುತ್ತಿದ್ದೇವೆ ಬೇಗಾ ಬಾ ಮೂವಿಗೆ ಹೋಗೋಣ ಎಂದು ಪುಟ್ಟ ಸಂದೇಶದ ವಿಡಿಯೋ ಬಿಗ್ ಬಾಸ್ ಲಿವಿಂಗ್ ಏರಿಯಾದಲ್ಲಿ ಪ್ಲೇ ಮಾಡಿದರು.

ಇದನ್ನು ಕೇಳಿ ಶೃತಿ ದುಃಖದಲ್ಲಿ ಮುಳುಗಿದರು. ನಂತರ ಅನುಪಮಾ ಹಾಗೂ ಜೆಕೆ ಶೃತಿ ಅವರನ್ನು ಸಮಾಧಾನ ಮಾಡುವಲ್ಲಿ ಮುಂದಾದ್ರು.‌

ಜೆಕೆ ಜೊತೆಗಿನ ಲವ್ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಶೃತಿ..!!

ಬಿಗ್ ಬಾಸ್ ಆಟವೇ ಹೀಗೆ… ಈ ಆಟದಲ್ಲಿ ಕೆಲ‌ ಸ್ಪರ್ಧಿಗಳಿಗೆ ಟ್ವಿಸ್ಟ್ ನೀಡಲು ಬಿಗ್ ಬಾಸ್ ಈ ರೀತಿ ಮಾಡ್ತಾರೆ. ಆದರೆ ಇಲ್ಲಿಯವರೆಗೆ ನಡೆದ ಯಾವ ಸೀಸನ್ ನಲ್ಲಿ ಕೂಡ ಯಾವುದೇ ಕಾರಣಕ್ಕೂ ಬಿಗ್ ಬಾಸ್, ಸ್ಪರ್ಧಿಗಳ ಮನೆಯವರನ್ನು ಕಳುಹಿಸದೆ ಇರುವುದಿಲ್ಲ. ಮನೆಯವರ ಬೆಲೆ ತಿಳಿಯಲು ಇದು ಬಿಗ್ ಬಾಸ್ ಅವರ ಆಟ ಅಷ್ಟೇ..

Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.