ರೇಮೊ ಮೋಷನ್ ಪೋಸ್ಟರ್ ಬಿಡುಗಡೆ, ಸ್ಯಾಂಡಲ್ ವುಡ್ನ ಹೊಸ ರಾಕ್ ಸ್ಟಾರ್ ಇಶಾನ್..!

ಸಿನಿಮಾ

ಹೊಸ ರಾಕ್ ಸ್ಟಾರ್ ನ ಸ್ಯಾಂಡಲ್ ವುಡ್ ಗೆ ಪರಿಚಯಿಸಿದ ಪವನ್ ಒಡೆಯರ್. ಇಂದು ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದ ಮೋಷನ್ ಪೋಸ್ಟರ್ ಹೊರ ಬಂದಿದೆ. ಈ ಹೊಸ ಪೋಸ್ಟರ್ ನಲ್ಲಿ ಯುವ ನಟ ಇಶಾನ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೇಮೊ ಮೋಷನ್ ಪೋಸ್ಟರ್ ನಲ್ಲಿ ರಾಕ್ ಸ್ಟಾರ್ ಲುಕ್ ನಲ್ಲಿ ಕನ್ನಡದ ಪ್ರಿನ್ಸ್ ಮಹೇಶ್ ರಂತೆ ಕಾಣುತ್ತಾರೆ ಇಶಾನ್..

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ರೇಮೊ ಪೋಸ್ಟರ್ ಸ್ಯಾಂಡಲ್ವುಡ್ ನಲ್ಲಿ ಹೊಸ ಅಲೆಯನ್ನ ಸೃಷ್ಟಿಸುವ ಸೂಚನೆ ನೀಡ್ತಿದೆ. ಮೋಷನ್ ಪೋಸ್ಟರ್ ನೋಡಿ ಫಿದಾ ಆಗಿರುವ ಅಭಿಮಾನಿಗಳು, ಗಾಂಧಿನಗರಕ್ಕೆ ಮಾಸ್ ಅಂಡ್ ಕ್ಲಾಸ್ ವರ್ಗವನ್ನು ಸೆಳೆಯೋ ಪ್ರತಿಭೆ ಇಶಾನ್ ನಲ್ಲಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ವಿಲನ್ ನಂತಹ ದೊಡ್ಡ ಸಿನಿಮಾ ನೀಡಿದ ನಿರ್ಮಾಪಕ, ಮೋಸ್ಟ್ ಸ್ಟೈಲಿಶ್ ನಿರ್ದೇಶಕ, ಹ್ಯಾಡ್ಸಂ ಹಾಂಕ್ ಇಶಾನ್ ಹಾಗೂ ಅಶಿಕಾ ರಂಗನಾಥ್ ಈ ಎಲ್ಲಾ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಹೊಸ ಕಮಾಲ್ ಮಾಡಲಿದೆ.

ಚಿತ್ರ ಸೇಟ್ಟೇರಿದ ದಿನದಿಂದಲೂ ಒಂದಲ್ಲಾ‌ ಒಂದು ರೀತಿ ಸದ್ದು ಮಾಡುತ್ತಿರುವ ರೇಮೊ ಚಿತ್ರದ ಮೋಷನ್ ಪೋಸ್ಟರ್ ಮೂಲಕ ನಿರ್ದೇಶಕ ಪವನ್ ಒಡೆಯರ್ ಮತ್ತೊಮ್ಮೆ ದೊಡ್ಡ ಸಕ್ಸಸ್ ಕೊಡೋ ಭರವಸೆ ಹುಟ್ಟಿಸಿದ್ದಾರೆ. ಸದ್ಯ ಮೋಷನ್ ಪೋಸ್ಟರ್ ರಿಲೀಸ್ ಮಾಡಿರುವ ರೇಮೊ‌ ಚಿತ್ರಕ್ಕೆ ಅದ್ಧೂರಿ ಚಿತ್ರಗಳ ಸರದಾರ ಸಿ.ಆರ್ ಮನೋಹರ್ ಜೊತೆಗೆ ಸಿ.ಆರ್ ಗೋಪಿ, ಜೈಯಾದಿತ್ಯ ಫಿಲಂಸ್ ಬ್ಯಾನರ್ ನಲ್ಲಿ ದುಬಾರಿ ವೆಚ್ಚದಲ್ಲಿ ಚಿತ್ರ ತಯಾರಾಗ್ತಿದೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕೆ ಪ್ಲಾಸ್ ಪಾಯಿಂಟ್. ಸದ್ಯಕ್ಕೆ ರೇಮೊ ಮೋಷನ್ ಪೋಸ್ಟರ್ ಎಲ್ಲೆಡೆ ಸಖತ್ ಟ್ರೆಂಡಿಯಾಗಿದೆ..