ರಾಮಾಯಣದ ರಾವಣ ಪಂಜಾಬ್ ನಲ್ಲಿ ಅರೆಸ್ಟ್!! ಅನಾಮತ್ತಾಗಿ ರಾವಣನನ್ನ ಎತ್ಕೊಂಡು ಹೋದ್ರು ಪೊಲೀಸರು!!

ಲೈಫ್‍ಸ್ಟೈಲ್

ಇದೇನಪ್ಪಾ ನಾವು ಕಲಿಗಾಲದಲ್ಲಿ ಇದ್ದೀವಿ. ತ್ರೇತಾಯುಗದ ರಾವಣ ರಾಮನಿಂದಲೇ ಸತ್ತು ಯುಗಗಳೇ ಕಳೆದುಹೋಗಿವೆ. ಈಗ ಅರೆಸ್ಟ್ ಮಾಡೋಕೆ ಅವನೆಲ್ಲಿಂದ ಸಿಕ್ದಾ? ಅಂತ ಏನೇನೋ ಯೋಚನೆ ಮಾಡ್ತಿದ್ದೀರಾ?. ಇವನು ಅದೇ ರಾಮಾಯಣದ ಹತ್ತು ತಲೆ ಇದ್ದ ರಾವಣನೇ!.
ಸರಿ ವಿಷಯಕ್ಕೆ ಬರೋಣ. ಅಸಲಿ ಕಥೆ ಏನಪ್ಪಾ ಅಂದ್ರೆ, ಈಗ ತಾನೇ ವಿಜಯದಶಮಿ ಮುಗೀತು. ವಿಜಯದಶಮಿಗೆ ದಕ್ಷಿಣ ಭಾರತದಲ್ಲಿ, ನವರಾತ್ರಿ ಪೂಜೆ ಮಾಡಿ ದಸರಾ ಆಚರಿಸಿದರೆ, ಪೂರ್ವ ಭಾರತದಲ್ಲಿ ದುರ್ಗಾ ಪೂಜೆ ಮಾಡಿ ದೇವಿಯನ್ನು ಆರಾಧಿಸುತ್ತಾರೆ. ಹಾಗೆಯೇ, ಉತ್ತರ ಭಾರತದಲ್ಲಿ, ರಾಮ್ ಲೀಲಾ ಆಚರಿಸೋದು ಈಗಾಗಲೇ ಪ್ರಸಿದ್ದಿ.

ಹೀಗೆಯೇ ರಾಮಲೀಲಾ ಆಚರಣೆಗಾಗಿ ಪಂಜಾಬಿನ ಲುಧಿಯಾನದಲ್ಲಿ ರಾವಣನನ್ನ ಸುಡಲು ರಾವಣನ ಒಂದು ದೊಡ್ಡ ಪ್ರತಿಕೃತಿ ಸಿದ್ದ ಮಾಡಲಾಗಿತ್ತು. ಇದನ್ನು ಅಲ್ಲಿನ ರೈಲ್ವೆ ಕಂಬಿಗಳ ಮೇಲೆ ಸುಡಲು ಸಿದ್ದ ಮಾಡಿಕೊಂಡಿದ್ದರು. ಆದರೆ ಇದಕ್ಕೆ ನಗರ ಪಾಲಿಕೆಯಿಂದ ಯಾವುದೇ ಅನುಮತಿಯನ್ನು ಪಡೆಯಲಾಗಿರಲಿಲ್ಲ. ಈ ವಿಷಯ ತಿಳಿದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆ ಸ್ಥಳಕ್ಕೆ ಹೋಗಿ ಸೀದಾ ರಾವಣನನ್ನೇ ಅನಾಮತ್ತಾಗಿ ಎತ್ತುಕೊಂಡು ಪೊಲೀಸ್ ಸ್ಟೇಷನ್ ಗೆ ಹೊರಟುಹೋದರು.


ಇದನ್ನು ವೀಡಿಯೊ ಮಾಡಿ ಟ್ವಿಟ್ಟರ್ ನಲ್ಲಿ ಸ್ಥಳೀಯರೊಬ್ಬರು ಪೋಸ್ಟ್ ಮಾಡಿದರು. ಅದೀಗ ವೈರಲ್ ಆಗಿ ಅನೇಕ ವಿಧವಿಧವಾದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. “ಹನುಮಂತನ ಸಹಾಯವಿಲ್ಲದೆ ರಾಮನಿಗೂ ಹಿಡಿಯಲು ಅಸಾಧ್ಯವಾದ ರಾವಣನನ್ನ ಈಗ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ!!” ಎಂದು ಕಾಮೆಂಟ್ ಮಾಡಿದ್ದಾರೆ.