ಮತ್ತೆ ರಮ್ಯಾ ವಾಪಸ್ ಇನ್ ಸ್ಯಾಂಡಲ್ವುಡ್..!?

ಸಿನಿಮಾ

ಟ್ವಿಟ್ಟರ್ ನಿಂದಲೂ ದೂರಾಗಿದ್ದ.. ರಾಜಕೀಯಕ್ಕೆ ಗುಡ್ ಬೈ ಹೇಳಿದ್ದ ದಿವ್ಯ ಸ್ಪಂದನ ಆಗೀಗ ಸುದ್ದಿ ಯಾಗ್ತಿರೋದು ನಿಮಗೆಲ್ಲ ಗೊತ್ತೆ ಇದೆ. ರಫೇಲ್ ಅನ್ನೋ ಫಾರೀನ್ ಹುಡುಗನ ಜೊತೆ ಕಾಣಿಸಿಕೊಂಡು ಗಾಸಿಪ್ ಕಾಲಂ ನಲ್ಲಿ ಮೊದಲಲ್ಲಿದ್ದರು. ಮೊಟ್ಟಮೊದಲ ಬಾರಿಗೆ ಎಲೆಕ್ಷನ್ ನಲ್ಲಿ ಪಾದಾರ್ಪಣೆ ಮಾಡಿ ಗೆದ್ದು ಎಂಪಿಯಾಗಿ ಎಲ್ಲರ ಬಾಯಲ್ಲೂ ಸೈ ಎನಿಸಿಕೊಂಡಿದ್ದ ಈ ಪದ್ಮಾವತಿ ನಂತರ ಅದೇ ಮಂಡ್ಯದ ಜನರ ಬಾಯಿಗೆ ತುತ್ತಾಗಿ ರಾತ್ರೋರಾತ್ರಿ ಮನೆ ಖಾಲಿ ಮಾಡಿ ಬೆಂಗಳೂರಿಗೆ ಶಿಫ್ಟ್ ಆಗಿದ್ದರು.

ಪೋರ್ಚುಗಲ್ ನ ಹುಡುಗ ರಫೆಲ್ ಜೊತೆ ಮದುವೆಯಾಗಿದೆ ಎನ್ನುವ ವಾದಕ್ಕೆ ಅವರ ತಾಯಿ ರಂಜಿತಾ ಇದೆಲ್ಲ ಸುಳ್ಳು ಎಂದು ಸಾರಾಸಗಟಾಗಿ ತಳ್ಳಿಹಾಕಿದ್ದರು. ಕಲಿಯುಗ ಕರ್ಣ, ರೇಬಲ್ ಸ್ಟಾರ್ ಅಂಬರೀಷ್ ರವರು ನಮ್ಮನಗಲಿದಾಗ ಅಂಬಿಯ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಕುಂಟುನೆಪ ಹೇಳಿದ್ದ ಗೌರಮ್ಮ ಅಂಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ರಮ್ಯಾ ದೆಹಲಿಯಲ್ಲಿ ಉಳಿದು ಯಾರಿಗೂ ಸಿಗದಂತೆ ಅಕ್ಷರಶಹ ಮಾಯವಾಗಿದ್ದರು.

ಇದ್ದಕ್ಕಿದ್ದಂತೆ ಏಕೆ ದೂರವಾದರೂ ಎನ್ನುವ ಪ್ರಶ್ನೆಗೆ ಉತ್ತರಿಸದೆ ಸುಮ್ಮನಿದ್ದ ರಮ್ಯಾ ಮತ್ತೆ ರಾಜಕೀಯ ಅಥವಾ ಸಿನಿಮಾದಲ್ಲಿ ರೀ ಎಂಟ್ರಿ ದೊಡ್ಡಮಟ್ಟದಲ್ಲೇ ಆಗಬೇಕು ಅನ್ನೋದು ರಮ್ಯಾ ಅವರ ಅಭಿಪ್ರಾಯ. ಒಂದು ಬಿಗ್ ಸ್ಕ್ರೀನ್ ಗೆ ರಮ್ಯಾ ಬರ್ತಾರೆ ಅಂತ ಅಂದ್ರೆ ಆ ಕ್ಯಾರೆಕ್ಟರ್ ಗೆ ಒಂದು ಘನತೆ ಇರಲೇಬೇಕು ಅದಕ್ಕಾಗಿ ನಾನು ಕಾಯಲು ಸಿದ್ಧ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೊನೆಯದಾಗಿ ನಾಗರಹಾವು ಚಿತ್ರದಲ್ಲಿ ಅಭಿನಯ ಮಾಡಿದ ರಮ್ಯಾ ಸ್ಯಾಂಡಲ್ ವುಡ್ ಎಲ್ಲಾ ಸ್ಟಾರ್ ನಟರ ಜೊತೆಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಕೀರ್ತಿಯ ಶಿಖರದಲ್ಲಿ ಮೆರೆಯುತ್ತಿದ್ದ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಅಲ್ಲಿಯೂ ಕೂಡ ಘಟಾನುಘಟಿ ರಾಜಕೀಯ ಧುರೀಣರಿಂದಲೂ ಸೈ ಎನಿಸಿಕೊಂಡಿದ್ದರು.

ರಾಜಕೀಯ ಎಂಟ್ರಿಯದೇ ಆಗಿದ್ದೇ ಆಗಿದ್ದು ಇಲ್ಲಿಂದಾಚೆಗೆ ವಿವಾದಕ್ಕೆ ಗುರಿಯಾಗಿ ಕೊಂಚ ಕೊಂಚವೇ ಮಾಯವಾಗಿ ದೂರವಾಗಿದ್ದರು ಈ ಸ್ಯಾಂಡಲ್ ವುಡ್ ನ ಪದ್ಮಾವತಿ ಮತ್ತೆ ರಾಜಕೀಯ ದಲ್ಲಾದರೂ ಅಥವಾ ಸಿನಿಮಾದಲ್ಲಿ ಆದರೂ ಎಂಟ್ರಿ ಕೊಡುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ ಈ ಎಲ್ಲಾ ಊಹಾಪೋಹಗಳಿಗೆ ರಮ್ಯ ಮಾತ್ರ ದಿವ್ಯ ಮೌನ ವಹಿಸಿದ್ದಾರೆ.