ಸದ್ಗುರ ಅವರ ಕಾವೇರಿ ಉಳಿಸಿ ಕೂಗಿಗೆ ಕೈ ಜೋಡಿಸಿದ ಶ್ರೀಮನ್ನಾರಾಯಣ ರಕ್ಷಿತ್..

ಸಿನಿಮಾ

ಕಾವೇರಿ ಉಳಿವಿಗೆ ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ಕಾವೇರಿ ಕೂಗು ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.. ಇಂದು ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನದಿಂದ ಬೈಕ್ ರ್ಯಾಲಿ ಶುರುವಾಗಿದೆ.. ಕಾವೇರಿ ತಟದಲ್ಲಿ ಮಣ್ಣಿನ ಸವೆತವನ್ನ ತಡೆಗಟ್ಟಲು, ಬತ್ತಿ ಹೋಗುತ್ತಿರುವ ಕಾವೇರಿಯನ್ನ ಉಳಿಸುವ ನಿಟ್ಟಿನಲ್ಲಿ ರೈತಾಪಿ ವರ್ಗಕ್ಕೆ ಗಿಡಗಳನ್ನ ನೆಡುವ, ಮರಗಳನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಶುರು ಮಾಡಲಾಗಿದೆ..

ಈ ಬೈಕ್ ರ್ಯಾಲಿಗೆ ಚಂದನವನದ ನಟರಾದ ರಕ್ಷಿತ್ ಶೆಟ್ಟಿ ಹಾಗು ದಿಗಂತ್ ಸಾಥ್ ನೀಡಿದ್ದಾರೆ.. ಸದ್ಯ ಅವನೇ ಶ್ರೀಮನ್ನಾರಾಯಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿರುವ ರಕ್ಷಿತ್ ಕಾವೇರಿ ಕೂಗಿಗೆ ಜೊತೆಯಾಗುವ ಮೂಲಕ, ಕರುನಾಡಿನ ಜೀವ ಜಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.. ಸದ್ಯ ಕಾವೇರಿ ತವರೂರು ಕೊಡಗಿನಿಂದ ಶುರುವಾಗಿರುವ ಈ ಅಭಿಯಾನ ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವೆಡೆ ನಡೆದಿದೆ..