ಎಲ್ಲರ ನಿರೀಕ್ಷೆಯಂತೆ ಇಂದು ಈ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಔಟ್…

ವಾಹಿನಿ ಸುದ್ದಿ

ಬಿಗ್ ಬಾಸ್ ಫಿನಾಲೆಗೆ ಕೇವಲ ಒಂದು ವಾರವಷ್ಟೇ ಬಾಕಿ ಉಳಿದಿದೆ. ದೊಡ್ಡ ಮನೆಯಲ್ಲಿ ಯಾರು ಉಳಿತ್ತಾರೆ, ಯಾರು ಎಲಿಮಿನೆಟ್ ಆಗ್ತಾರೆ ಎನ್ನೋ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ರಾಕೇಶ್, ಆ್ಯಂಡಿ, ಕವಿತಾ, ಧನರಾಜ್, ರಾಶ್ಮಿ, ಶಶಿ ಹಾಗೂ ನವೀನ್ ಉಳಿದುಕೊಂಡಿದ್ದಾರೆ. ಇವರಲ್ಲಿ ನವೀನ್ ಹಾಗೂ ಧನರಾಜ್ ಫಿನಾಲೆ ಟಿಕೆಟ್‌ ಪಡೆದುಕೊಂಡಿದ್ದಾರೆ.

ಉಳಿದಂತೆ ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಆದರೆ ಎಲ್ಲರ ನಿರೀಕ್ಷೆಯಂತೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋದ ಸ್ಪರ್ಧಿ ಬೇರೆ ಯಾರು ಅಲ್ಲ ರಾಕೇಶ್. ಹೌದು, ಕಳೆದ ವಾರವಷ್ಟೇ ಆಕ್ಷತಾ ಪಾಂಡವಪುರ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆದರು. ಆಕ್ಷತಾ ಹೊರ ಹೋದ ಬೆನ್ನೆಲ್ಲ ರಾಕೇಶ್ ಅವರು ಕೂಡ ಎಲಿಮಿನೆಟ್ ಆಗಿದ್ದಾರೆ. ಉಳಿದ್ದಂತೆ ಯಾರ್ ಯಾರು ಫಿನಾಲೆಗೆ ಪ್ರವೇಶಿಸಲಿದ್ದಾರೆ ಎನ್ನುವುದು ಇಂದು ತಿಳಿಯಲಿದೆ.