‘ರಾಜೀವ’ನಾಗಿ ಮಯೂರ್ ಮತ್ತೆ ಕಮ್ ಬ್ಯಾಕ್..

ಸಿನಿಮಾ

ಮಣಿ ಸಿನಿಮಾದ ಮೂಲಕ ಹೆಸರು ಪಡೆದುಕೊಂಡ ನಟ ಮಯೂರ್.. ಡ್ರೀಮ್ ಸ್ಟಾರ್ ಆಗಿ ಕನ್ನಡ ಜನತೆಗೆ ಪರಿಚಿತರಾದವರು.. ಈಗ ಇದೇ ಚಿತ್ರರಂಗದಲ್ಲಿ ಗೆಲುವಿನ ಟ್ರ್ಯಾಕ್ ಗೆ ಮರುಳಿದ್ದಾರೆಅದರ ಪ್ರತಿರೂಪವೆ ಈರಾಜೀವಸಿನಿಮಾ.. ಸದ್ಯಕ್ಕೆ ದೇಶವ್ಯಾಪಿ ರೈತರ ಸಂಕಷ್ಟ ಗಗನ ಮುಟ್ಟುತ್ತಿದೆ.. ಹೀಗಿರುವಾಗಲೇ ರಾಜೀವನಾಗಿ ರೈತನ ಮಗನಾಗಿ ರೈತನಾಗಿ ಹೊಸ ಸಂಚಲ ಸೃಷ್ಟಿಸಿರುವ ಮಯೂರ್ ಅಭಿನಯದ ರಾಜೀವ ಚಿತ್ರಕ್ಕೆ ಪ್ರೇಕ್ಷಕರಿ.ಮದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

ಐಎಎಸ್‌ ಮುಗಿಸಿ ಕಾರಣಾಂತರದಿಂದ ತನ್ನೂರಿಗೆ ಬರುವಂತಾಗಿ, ರೈತರ ಪರವಾಗಿ ನಿಂತು ತಾನು ರೈತನಾಗಿ ಕಾಣಿಸಿಕೊಳ್ತಿರೋವ ಮಯೂರ್ ಗೆ ನಾಯಕಿಯಾಗಿ ಅಕ್ಷತಾ ಅಭಿನಯಿಸಿದ್ದಾರೆ.. ರಾಜೀವ ಸಿನಿಮಾದ ಸೂತ್ರಧಾರ ಫ್ಲೈಯಿಂಗ್ ಕಿಂಗ್ ಮಂಜು..  ಈ ಹಿಂದೆಮರ್ಮಾಂಗಎಂಬ ಕಿರುಚಿತ್ರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನ ಪಡೆದುಕೊಂಡಿದ್ದಾರೆ..

ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳನ್ನ ಒಳಗೊಂಡಿರುವ ಚಿತ್ರವೇ ಈ ರಾಜೀವ.. ತನ್ನೂರಿನ ರೈತರು ಊರು ಬಿಡುವಾಗ ನಾಯಕನ ತಂದೆ ತಾನೇ ಸಾಲ ಮಾಡಿ ಅವರನ್ನ ಊರಲ್ಲೆ ಉಳಿಯುವಂತೆ ಮಾಡ್ತಾರೆ.. ಆನಂತರ ಸಾಲ ತೀರಿಸಲಾಗಿದೆ ಸಾವಿಗೆ ಶರಣಾಗ್ತಾರೆ.. ಈ ವಿಷಯ ತಿಳಿದು ನಾಯಕ ತನ್ನ ಹಳ್ಳಿಗೆ ಬಂದು ಐ.ಎಎಸ್ ಮಾಡಿದ್ರು, ರೈತನಾಗಿ ಯುವರೈತ ಎಂಬ ಬಿರುದನ್ನು ಪಡಿತಾನೆ.. ರಾಜ್ಯದ ಸಿಎಂ ಕಣ್ಣಿಗೆ ಬೀಳುವ ರಾಜೀವ ಜೀವನದಲ್ಲಿ ನಂತರ ನಡೆಯುವ ತೀರುವುಗಳು ಪ್ರೇಕ್ಷಕರನ್ನ ಸಿನಿಮಾದ ಉದ್ದಕ್ಕೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತೆ..

ಆರ್.ಆರ್.ಕೆ.ಪ್ರೊಡೆಕ್ಷನ್ಸ್ ಲಾಂಛನದಲ್ಲಿ ಬಿ.ಎಂ.ರಮೇಶ್, ರಾಘವೇಂದ್ರ ರೆಡ್ಡಿ ಹಾಗು ಕಿರಣ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.. ವಿ.ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.. ಅನಿಕ್ ಸಂಗೀತ ನೀಡಿದ್ರೆ, ಪೂರ್ಣಚಂದ್ರ ಬೈಕಾಡಿ ಕ್ಯಾಮರಾ ವರ್ಕ್ ರಾಜೀವನಿಗಿದೆ.. ಸದ್ಯ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತಿರುವ ರಾಜೀವನಿಗೆ ಪ್ರೇಕ್ಷಕರು ಬಹುಪಾರಕ್ ಹೇಳ್ತಿರೋದು ಚಿತ್ರತಂಡಕ್ಕೆ ಖುಷಿ ನೀಡಿದ್ರೆ, ವೀಕ್ ಎಂಡ್ ಆಗಿರೋದ್ರಿಂದ ಗಳಿಕೆಯನ್ನ ಉತ್ತಮ ಪಸಲು ಕಟಣುವ ಸೂಚನೆಯನ್ನ ರಾಜೀವ ನೀಡಿದ್ದಾರೆ..