ಮಾರ್ಚ್ 15ಕ್ಕೆ ಮಾಸ್ ಹುಡುಗ ‘ ರಾಜಣ್ಣ ಮಗ’ ರಿಲೀಸ್..!!

ಸಿನಿಮಾ

ಟೈಟಲ್ ನಿಂದ ಹಾಗೆ ಹಾಡುಗಳಿಂದ ಕುತೂಹಲವನ್ನ ಹುಟ್ಟು ಹಾಕ್ತಿರುವ ಸಿನಿಮಾ ಈ ‘ರಾಜಣ್ಣ ಮಗ’.. ಚರಣ್ ರಾಜ್ ನಾಯಕ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗ್ಲೇ ತಂದೆ ಬಾಂಧವ್ಯದ ಗೀತೆ ಕನ್ನಡಿಗ ಸಂಗೀತ ಪ್ರೇಮಿಗಳಿಗೆ ಇಷ್ಟವಾಗಿದೆ.. ಇನ್ನು ಯಜಮಾನ ಸಿನಿಮಾದ ಜೊತೆಗೆ ಟೀಸರ್ ಹಾಗೆ ಹಾಡಿನ ವಿಡಿಯೋ ರಿಲೀಸ್ ಮಾಡಿ ಪ್ರೇಕ್ಷಕರಿಗೆ ಸಿನಿಮಾ ನೋಡಲು ಬರುವಂತೆ ಆಹ್ವಾನ ನೀಡುತ್ತಿದೆ…

ಇದೀಗ ಚಿತ್ರದ ಟ್ರೇಲರ್ ಲಾಂಚ್ ಮಾಡೋಕೆ ಮುಂದಾಗಿರೋ ಚಿತ್ರತಂಡ ಇದೇ ತಿಂಗಳ 15 ಕ್ಕೆ ರಾಜ್ಯಾದ್ಯಂತ ಥಿಯೇಟರ್ ಗಳನ್ನ ಆವರಿಸಿಕೊಳ್ಳಲು ಮುಂದಾಗಿದೆ.. ಕೋಲಾರ ಸೀನು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಾಯಕನಾಗಿ ಜಲಗೆರೆ ಹರೀಶ್ ಅವರ ಜೊತೆಗೆ ಅಕ್ಷತಾ ಚರಣ್ ರಾಜ್ ಕಾಣಿಸಿಕೊಂಡಿದ್ದಾರೆ.. ಕೆಜಿಎಫ್ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಸಂಗೀತದಲ್ಲಿ ರಾಜಣ್ಣನ ಮಗ ಸೌಂಡ್ ಮಾಡಲಿದ್ದು, ಈ ವರ್ಷದ ಸಕ್ಸಸ್ ಫುಲ್ ಸಿನಿಮಾ ಸಾಲಿಗೆ ಸೇರುವ ಭರವಸೆಯನ್ನ ಮೂಡಿಸುತ್ತಿದೆ..