ಯುವರತ್ನ’ ಸಿನಿಮಾದಲ್ಲಿ ಪವರ್ ಸ್ಟಾರ್ ಅವರದ್ದು ಪವರ್ ಫುಲ್ ರೋಲ್.! ಇಲ್ಲಿದೆ ಡಿಟೇಲ್ಸ್.!!

ಸಿನಿಮಾ

ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳು ಅಂದ್ರೆ ಅದಕ್ಕೆ ಯುವ ಜನತೆ ಮಾತ್ರವಲ್ಲ ಫ್ಯಾಮಿಲಿ ಆಡಿಯನ್ಸ್ ಕೂಡ ಹೆಚ್ಚಿದ್ದಾರೆ.. ಕಳೆದ ಬಾರಿ ಸಂತೋಷ್ ಆನಂದ್ ರಾಮ್ ಹಾಗು ಅಪ್ಪು ಅವರು ಒಂದಾದಾಗ ರಾಜಕುಮಾರ ಸಿನಿಮಾ ಇಡೀ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ದಾಖಲೆಯನ್ನ ಬರೆದಿತ್ತು.. ಮತ್ತೆ ಇದೆ ಜೋಡಿ ಒಂದಾಗಿರೋದು ಯುವರತ್ನ ಮೇಲೆ‌ ಮತ್ತಷ್ಟು ನಿರೀಕ್ಷೆಯನ್ನ ಹೆಚ್ಚಾಗಿರೋದು ಸುಳ್ಳಲ್ಲ..

ಇನ್ನು ಅಪ್ಪು ಸಿನಿಮಾಗಳು ಅಂದ್ರೆ ಒಂದಕ್ಕಿಂದ ಒಂದು ಭಿನ್ನವಾಗಿರುತ್ತೆ.. ಹೀಗಾಗೆ ಯುವರತ್ನ ಕೂಡ ಇದೇ ಸಾಲಿನಲ್ಲಿ ನಿಲ್ಲುವ ಚಿತ್ರವಾಗಿದೆ.. ಕಾಲೇಜ್ ಹುಡುಗನಾಗಿ ಕಾಣಿಸಿಕೊಳ್ತಿದ್ದಾರೆ ಪವರ್ ಸ್ಟಾರ್ ಅಂದ ತಕ್ಷಣ ಎಲ್ಲರು ಯೋಚಿಸಿದ್ದು ಇದೊಂದು ಲವ್ ಸ್ಟೋರಿ ಸಬ್ಜೆಕ್ಟ್ ಇರೋ ಕಥೆ ಅಂತ.. ಆದರೆ ಇದು ಬರೀ ಲವ್ ಸ್ಟೋರಿಯೊಂದಿಗೆ ಮುಗಿಯೋದಿಲ್ಲ.. ಕಥೆ ಗಟ್ಟಿತನ ಯುವರತ್ನ ಟೈಟಲ್ ಗೆ ಹೇಳಿ ಮಾಡಿಸಿದ ಹಾಗಿದೆ..

ಶಿಕ್ಷಣ ಅನ್ನೋದು ಈಗ ವ್ಯಾಪಾರವಾಗಿ ಬದಲಾಗಿದೆ.. ಇಲ್ಲಿ ನಡೆಯುವ ಭ್ರಷ್ಟಾಚಾರ, ಮಾಫಿಯಾಗಳಿಂದ ಪೋಷಕರು ಎದುರಿಸುವ ಸಮಸ್ಯೆ ಎಲ್ಲವು ಯುವರತ್ನ ಸಿನಿಮಾದಲ್ಲಿನ ಹೈಲೆಟ್ ಆಗಿದೆ.. ಈ ವ್ಯವಸ್ಥೆಯ ವಿರುದ್ದ ನಾಯಕ ಹೇಗೆ ಸಿಡಿದು ಬೀಳ್ತಾನೆ, ಶಿಕ್ಷಕರ ನೆಚ್ಚಿನ ಶಿಷ್ಯನಾಗಿಯೇ ವ್ಯವಸ್ಥೆಯ ಜೊತೆಗೆ ಹೋರಾಡ್ತಾನೆ ಎಂಬೆಲ್ಲ ಅಂಶಗಳು ಯುವರತ್ನದಲ್ಲಿ ಇರಲಿದೆಯಂತೆ..

ಇನ್ನು ಅಪ್ಪು ಅವರು ಚಿತ್ರದಲ್ಲಿ ಡಬಲ್ ಶೇಡ್ ನಲ್ಲಿ ಮಿಂಚಲ್ಲಿದ್ದಾರೆ.. ಸಾಯೇಷಾ ಸೈಗಲ್ ನಾಯಕಿಯಾಗಿದ್ರೆ, ಡಾಲಿ ಧನಂಜಯ್, ದಿಗಂತ್ ಸೇರಿದಂತೆ ದೊಡ್ಡ ತಾರಾಬಳಗವನ್ನ ಯುವರತ್ನ ಚಿತ್ರ ಹೊಂದಿದ್ದು, ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಹೊಂಬಾಳೆ ಬ್ಯಾನರ್ ಅಡಿ ಈ ಸಿನಿಮಾ ಸಿದ್ದವಾಗ್ತಿದೆ..