ಕೋಟ್ಯಾಧಿಪತಿ ವೇದಿಕೆಯಲ್ಲಿ ತನ್ನ ನೆಚ್ಚಿನ ಗೆಳಯನ ಬಗ್ಗೆ ಹೇಳಿದ್ದೇನು ಗೊತ್ತಾ ಪವರ್ ಸ್ಟಾರ್..?

ಸಿನಿಮಾ

ವಾರಾಂತ್ಯ ಬಂದರೆ ಸಾಕು ಪವರ್ ಸ್ಟಾರ್ ಅವರನ್ನ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ನೋಡಲು ಕಿರುತೆರೆ ಅಭಿಮಾನಿಗಳು ಕಾಯುತ್ತಿರುತ್ತಾರೆ.. ಇನ್ನು ಈ ಕಾರ್ಯಕ್ರಮದ ಕಳಸದಂತಿರುವ ಅಪ್ಪು, ಕನ್ನಡದಲ್ಲಿ ದೊಡ್ಡ ಯಶಸ್ಸನ್ನ ಕೋಟ್ಯಾಧಿಪತಿಗೆ ತಂದು ಕೊಟ್ಟಿದ್ದಾರೆ.. ಇನ್ನು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತನ್ನ ಗೆಳೆಯರಾದ ಜ್ಯೂನಿಯರ್ ಎನ್ ಟಿಆರ್ ಅವರ ಬಗ್ಗೆ ಅಪ್ಪು ಮಾತನಾಡಿದ್ದಾರೆ..

ಚಕ್ರವ್ಯೂಹ ಸಿನಿಮಾದ ಗೆಳೆಯ ಗೆಳೆಯ ಹಾಡನ್ನ ಪ್ಲೇ ಮಾಡಿ ಇದನ್ನ ಹಾಡಿದ ಗಾಯಕ ಯಾರು ಎಂಬ ಪ್ರಶ್ನೆಯನ್ನ ಕೇಳಲಾಗಿತ್ತು.. ಈ ಹಾಡಿಗೆ ದನಿಯಾಗಿದ್ದು  ಜ್ಯೂನಿಯರ್ ಎನ್ ಟಿಆರ್ ಆಗಿದ್ದಾರೆ.. ಎನ್ ಟಿಆರ್ ಕುಟುಂಬಕ್ಕೂ ಹಾಗು ಡಾ.ರಾಜ್ ಕುಮಾರ್ ಅವರ ಕುಟುಂಬಕ್ಕೂ ಹಿಂದಿನಿಂದಲು ಉತ್ತಮ ಬಾಂಧವ್ಯ ಇರೋದು ನಿಮಗೆಲ್ಲ ಗೊತ್ತೆ ಇದೆ.. ಶಿವರಾಜ್ ಕುಮಾರ್ ಹಾಗು ಬಾಲಯ್ಯ ಉತ್ತಮ ಗೆಳೆಯರಿಗಿದ್ದು, ಶಿವಣ್ಣ ಇವರು ತೆಲುಗು ಸಿನಿಮಾದಲ್ಲಿ ಅಭಿನಯಿಸಿ ಬರಲು ಕಾರಣವಾಗಿದ್ದು ಕೂಡ ಬಾಲಯ್ಯ ಅವರೆ.. ಇನ್ನು ಹಲವು ಬಾರಿ ಆಡಿಯೋ ಲಾಂಚ್ ಸೇರಿದಂತೆ ಶಿವಣ್ಣನ ಚಿತ್ರಗಳಿಗೆ ಹಿರಿಯ ನಟರಾದ ಬಾಲಯ್ಯ ಆಗಮಿಸಿ ಶುಭಾಶಯ ತಿಳಿಸಿದ್ದಾರೆ…

ಇದರ ಜೊತೆಗೆ ಪವರ್ ಸ್ಟಾರ್ ಹಾಗು ಜ್ಯೂನಿಯರ್ ಎನ್ ಟಿಆರ್ ಉತ್ತಮ ಸ್ನೇಹವನ್ನ ಉಳಿಸಿಕೊಂಡು ಬಂದಿರೋದು ಎಲ್ಲರಿಗು ತಿಳಿದ ವಿಚಾರ.. ಚಕ್ರವ್ಯೂಹ ಸಿನಿಮಾ ಹಾಡನ್ನ ಹಾಡುವ ಸಂದರ್ಭದಲ್ಲಿ ತಾರಕ್ ತಾಯಿ ಉಡುಪಿಯ ಕುಂದಾಪುರದಲ್ಲಿರುವ ತಮ್ಮ ಮನೆಗೆ ಕರೆದು ಆತಿಥ್ಯ ನೀಡಿದನ್ನ ಇದೇ ಸಂದರ್ಭದಲ್ಲಿ ಅಪ್ಪು ನೆನೆದಿದ್ದು, ತಾರಕ್ ನನ್ನ ನೆಚ್ಚಿನ ಗೆಳೆಯ ಮಾತ್ರವಲ್ಲ ಙ್ನ ಸಹೋದರನಂತೆ ಎಂದಿದ್ದಾರೆ..