ಶಿವಣ್ಣನ ‘ದ್ರೋಣ’ ಚಿತ್ರದ ಟ್ರೇಲರ್ ಲಾಂಚ್ ಮಾಡಲ್ಲಿದ್ದಾರೆ ಪವರ್ ಸ್ಟಾರ್..

ಸಿನಿಮಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ದ್ರೋಣ ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದೇ ಸಂದರ್ಭದಲ್ಲಿ ನಟ ಶಿವರಾಜ್‌ಕುಮಾರ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು 34 ವರ್ಷಗಳು ತುಂಬುತ್ತಿರೋ ಸಮಯದಲ್ಲಿ, ದ್ರೋಣ ಚಿತ್ರದ ಟ್ರೈಲರ್ ಹಾಗೂ ಆಡಿಯೋ ರಿಲೀಸ್ ಆಗ್ತಿದೆ. ಇದೇ ಫೆಬ್ರವರಿ 23 ರಂದು ಅಂದ್ರೆ ಭಾನುವಾರ ದ್ರೋಣ ಟ್ರೈಲರ್ ಬಿಡುಗಡೆ.

ವಿಶೇಷ ಅಂದ್ರೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಆಗಮಿಸುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಂದ ದ್ರೋಣ ಚಿತ್ರದ ಆಡಿಯೋ‌ ಮತ್ತು ಟ್ರೈಲರ್ ಲಾಂಚ್ ಆಗಲಿದೆ. ಟೀಚರ್ ಪಾತ್ರದಲ್ಲಿ‌ ಅಭಿನಯಿಸಿರೋ‌ ಶಿವಣ್ಣ, ಕ್ಲಾಸ್ ಮಾಸ್ ಜೊತೆಗೆ ಸಂದೇಶ ಸಾರಲಿದೆ ದ್ರೋಣ ಚಿತ್ರ. ಈ ವರ್ಷ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರಗಳಲ್ಲಿ ದ್ರೋಣ ಕೂಡ ಒಂದು..

ದ್ರೋಣ ಚಿತ್ರಕ್ಕೆ ನಾಯಕಿಯಾಗಿ ತಮಿಳಿನ ಇನಿಯಾ ನಟಿಸಿದ್ದು, ಸ್ವಾತಿ ಶರ್ಮಾ, ರಂಗಾಯಣ ರಘು, ಬಾಬು ಹೀರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿ ಗೌಡ, ಶ್ರೀನಿವಾಸ್ ಗೌಡ .ಆನಂದ್, ನಾರಾಯಣ ಸ್ವಾಮಿ, ರವಿಕಿಶನ್, ಜಯಶ್ರೀ, ಮಾಸ್ಟರ್ ಮಹೇಂದ್ರ ಸೇರಿದಂತೆ ದೊಡ್ಡ ತಾರಾಬಳಗವಿದೆ. ಶೀಘ್ರದಲ್ಲೇ ಈ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ.