ಪವರ್ ಸ್ಟಾರ್ ಹೀರೊ ಆಗಿ ತಾವೇ ನಿರ್ಮಾಣ ಮಾಡಲಿರುವ ಮುಂದಿನ ಸಿನಿಮಾ ಇದೇ ನೋಡಿ..

ಸಿನಿಮಾ

ದಿವಂಗತ ಪಾರ್ವತಮ್ಮ ರಾಜ್‍ಕುಮಾರ್ ಅವರು ತಮ್ಮ ನಿರ್ಮಾಣ ಸಂಸ್ಥೆಯ‌ ಮೂಲಕ ಕನ್ನಡದ ಹೆಸರಾಂತ ಕಾಂದಬರಿಗಳಿಗೆ ಸಿನಿಮಾ ರೂಪವನ್ನ ನೀಡಿ ಈ ಮೂಲಕ ಸಿನಿಮಾ ಗೆಲ್ಲಿಸಬಹುದು ಎಂದು ತೋರಿಸಿಕೊಟ್ಟವರು.. ಕಾದಂಬರಿಗಳಿಗೆ‌ ಸಿನಿಮಾ ರೂಪ ನೀಡುವುದು ಸುಲಭದ ಮಾತಲ್ಲ.. ಆದರೆ ಇದನ್ನ ಸಾಧ್ಯ ಮಾಡಿದವರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯ ಕೊಡುಗೆ ದೊಡ್ಡದಿದೆ.. ಸದ್ಯ ಇದೇ ಹಾದಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಯುತ್ತಿದ್ದಾರೆ..

ತಮ್ಮ ಪಿಆರ್ ಕೆ ನಿರ್ಮಾಣ ಸಂಸ್ಥೆಯ ಮೂಲಕ ಕಾದಂಬರಿಗೆ ಸಿನಿಮಾ ರೂಪ ನೀಡಲು ಮುಂದಾಗಿದ್ದಾರೆ.. ಮುಂದಿನ ದಿನಗಳಲ್ಲಿ ಕಾದಂಬರಿಯಾಧಾರಿತ ಚಿತ್ರದಲ್ಲಿ ಸ್ವತಃ ಪವರ್ ಸ್ಟಾರ್ ನಾಯಕನಾಗಿ ಅಭಿನಯಿಸಲ್ಲಿದ್ದಾರೆ ಎನ್ನಲಾಗಿದೆ.. ಈ ಕಾದಂಬರಿಯನ್ನ ಸ್ವತಃ ಪಾರ್ವತಮ್ಮ ರಾಜ್‍ಕುಮಾರ್ ಅವರು ಮನಸಾರೆ ಎಪ್ಪಿದ್ರಂತೆ.. ಆದರೆ ಅವರು ಕಾಲವಾದ ಬಳಿಕ ಈ ಆಸೆ ಹಾಗೆ‌ ಉಳಿದುಕೊಂಡಿತ್ತು.. ಈಗ ಇದಕ್ಕೆ‌ ಮರು ಜೀವ ಬಂದಂತಿದೆ.. ಹೀಗಾಗೆ ಇದಕ್ಕೆ ಅಪ್ಪು ನಾಯಕನಾಗಿ ಅಭಿನಯಿಸಲ್ಲಿದ್ದಾರೆ ಎನ್ನಲಾಗ್ತಿದೆ..‌

ದುನಿಯಾ ಸೂರಿ ಜೊತೆಗೆ ಅಂದು ಪಾರ್ವತಮ್ಮ ರಾಜ್ ಕುಮಾರ್ ಅವರು ಕುಂ ವೀರಭದ್ರಪ್ಪನವರ ‘ಕನಕಾಂಗಿ ಕಲ್ಯಾಣ’ ಕಾದಂಬರಿಯನ್ನ‌ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ರಂತೆ.. ಆದರೆ ಕಥೆಯ ಅಗಾಧತೆ ದುನಿಯಾ‌ ಸೂರಿ ಅವರನ್ನ ಹಿಂದೆ ಸರಿಯುವಂತೆ ಮಾಡಿತಂತೆ.. ಹೀಗಾಗೆ ಇದಕ್ಕೆ ಹೊಸ ನಿರ್ದೇಶಕರ ಆಗಮನವಾಗಿದೆ ಎನ್ನಲಾಗ್ತಿದೆ.. ಇದನ್ನ ಸ್ವತಃ ಪವರ್ ಸ್ಟಾರ್ ತಮ್ಮದೇ ಬ್ಯಾನರ್ ಅಡಿ ನಿರ್ಮಾಣ ಮಾಡಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ..

ದುನಿಯಾ ಸೂರಿ ಅವರ ಬಳಿಕ ಈಗ ಮತ್ತೆ ಇದೆ ಕಾದಂಬರಿ ಪೈಲ್ವಾನ್ ನಿರ್ದೇಶಕ ಕೃಷ್ಣ ಅವರ ಕೈ ಸೇರಿದೆ ಎನ್ನಲಾಗ್ತಿದೆ.. ಇದರ ಜೊತೆಗೆ ಯುವರತ್ನ ಸಿನಿಮಾ ಮುಗಿದ ಬಳಿಕವೇ ಪವರ್ ಸ್ಟಾರ್ ಈ ಕಾದಂಬರಿಗೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.. ಒಟ್ಟಿನಲ್ಲಿ ಕನಕಾಂಗಿ ಕಲ್ಯಾಣ ಕಾದಂಬರಿಗೆ ಮತ್ತೆ ಸಿನಿಮಾ ಮಾಡುವ ಬಗ್ಗೆ ಸುದ್ದಿಗಳು ಕೇಳಿಬಂದಿದ್ದು, ಇದು ಅಪ್ಪು ಅವರ ಬ್ಯಾನರ್ ನಲ್ಲಿಯೇ ನಿರ್ಮಾಣ ಆಗಲಿದ್ಯ ಕಾದು ನೋಡ್ಬೇಕು..