‘ಪಾಪ್ ಕಾರ್ನ್ ಮಂಕಿ ಟೈಗರ್’ ಡಬ್ಬಿಂಗ್ ನಲ್ಲಿ ಡಾಲಿ.. ಶೀಘ್ರದಲ್ಲೇ ಟೀಸರ್ ರಿಲೀಸ್..

ಸಿನಿಮಾ

ಸುಕ್ಕಾ ಸೂರಿ ಹಾಗು ಡಾಲಿ ಧನಂಜಯ್ಯ ಕಾಂಬಿನೇಷನ್ ನಲ್ಲಿ ಸಿದ್ದವಾಗ್ತಿರೋ ಸಿನಿಮಾ ಈಪಾಪ್ ಕಾರ್ನ್ ಮಂಕಿ ಟೈಗರ್‘.. ಹೆಸರು ಕೇಳೋಕೆ ವಿಚಿತ್ರ ಅನ್ನಿಸುತ್ತೆ.. ಇನ್ನು ಚಿತ್ರದ ಪೋಸ್ಟರ್ ನಲ್ಲಿ ಡಾಲಿ ಕಾಣಿಸಿಕೊಂಡಿರುವ ಗೆಟಪ್ ಗಳು ಮತ್ತಷ್ಟು ವಿಚಿತ್ರ ಅನ್ನಿಸುತ್ತೆ.. ಈಗಾಗ್ಲೇ ಈ ಜೋಡಿಯ ಸಿನಿಮಾದ ಬಗ್ಗೆ ಕುತೂಹಲಗಳು ಕಾತರಗಳು ಹೆಚ್ಚಾಗಿದೆ.. ಇದನ್ನ ಮತ್ತಷ್ಟು ಏರಿಸೋಕೆ ಚಿತ್ರತಂಡದಿಂದ ಹೊಸ ವಿಷ್ಯ ಹೊರ ಬಿದ್ದಿದೆ..

ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಪ್ರಾರಂಭ..

ಹೌದು, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಡಬ್ಬಿಂಗ್ ಕಾರ್ಯ ಇಂದಿನಿಂದ ಶುರುವಾಗಿದೆ.. ಜೊತೆಗೆ ಸದ್ಯದಲ್ಲೆ ಚಿತ್ರದ ಟೀಸರ್ ಕೂಡ ಬಿಡುಗಡೆಗೊಳ್ಳಲಿದೆ.. ಪಕ್ಕಾ ಸೂರಿ ಟೈಪ್ ನ ಚಿತ್ರ ಇದಾಗಿರಲ್ಲಿದ್ದು, ಸುಧೀರ್ ಅವರು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.. ಪ್ರೊಡೆಕ್ಷನ್ ಮ್ಯಾನೇಜರ್ ಆಗಿದ್ದವರು ಈಗ ಚಿತ್ರ ನಿರ್ಮಾಣಕ್ಕೆ ಮುಂದಾಗಿರೋದು ವಿಶೇಷವಾಗಿದ್ದು, ಚಿತ್ರ ಗೆಲ್ಲುವ ಭವಸೆಯನ್ನ ಈಗಾಗ್ಲೇ ಮೂಡಿಸಿ ಬಿಟ್ಟಿದೆ..

ಚಿತ್ರದಲ್ಲಿ ನಿವೇದಿತಾ , ಅಮೃತಾ , ಸಪ್ತಮಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.. ಈ ಹಿಂದೆ ಫ್ಯಾನ್ ಮೇಡ್ ಪೋಸ್ಟರ್ ಗಳಿಂದಲು ಸುದ್ದಿಯಾಗಿತ್ತು ಈ ಚಿತ್ರ.. ಇನ್ನು ಚರಣ್ ರಾಜ್ ಮ್ಯೂಸಿಕ್ ನೀಡಿದ್ದು, ಶಂಕರ್ ಕ್ಯಾಮರಾ ವರ್ಕ್ ಸಿನಿಮಾಗಿದೆ.. ಒಟ್ಟಿನಲ್ಲಿ ಡಾಲಿ ಹಾಗು ಸೂರಿ ಜೋಡಿಯ ಈ ಸಿನಿಮಾ ಸ್ಯಾಂಡಲ್ ವುಡ್ ಅಂಗಳದ ಸೆಂಟರ್ ಅಫ್ ಅಟ್ರ್ಯಾಕ್ಷನ್ ಆಗಿರೋದಂತು ಸುಳ್ಳಲ್ಲ..