ನಾಳೆನೆ ಬರ್ತಿದೆ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್..!!

ಸಿನಿಮಾ

ನಿರ್ದೇಶಕರಾದ ದುನಿಯಾ ಸೂರಿ‌ ಹಾಗು ಧನಂಜಯ್ಯ ಒಂದಾಗೋಗಿ ಬಿಟ್ಟು ತುಂಬಾ ಟೈಮ್ ಆಯ್ತು.. ಅದ್ಯಾವಾಗ ಟಗರು ಬಂತೊ ಆಮೇಲೆ ಮತ್ತೆ ಸೂರಿ ಹಾಗು ಧನಂಜಯ್ಯ ಹೊಸ ಸಿನಿಮಾನ ಅನೌಸ್ ಮಾಡಿ ಬಿಟ್ರು.. ಸದ್ಯ ಟೈಟಲ್ ಹಾಗು ಧನಂಜಯ್ಯ ಲುಕ್ ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಟೀಸರ್ ನಾಳೆ ಬಿಡುಗಡೆಯಾಗ್ತಿದೆ..

ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಆಡಿಯೋ ಸಂಸ್ಥೆಯ ಮೂಲಕ ಈ ಟೀಸರ್ ಬಿಡುಗಡೆ ಮಾಡ್ತಿದ್ದು, ಸುಕ್ಕಾ ಸೂರಿ ಹಾಗೆ ಡಾಲಿ ಧನಂಜಯ್ಯ ಕಾಂಬಿನೇಷನ ಒಂದು ಸಣ್ಣ ಝಲಕ್ ನಿಮಗೆ ಸಿಗಲಿದೆ.. ಸದ್ಯಕ್ಕೆ ಮೇಕಿಂಗ್ ಸ್ಟಿಲ್ಸ್ ಚಿತ್ರದ ಫ್ಲೇವರ್ ಬೇರೆಯದ್ದೆ ಮನರಂಜನೆಯ ಔತಣವನ್ನ ನೀಡುವಂತಿದೆ.. ರೆಡಿಯಾಗಿರಿ ನಾಳೆ ಸಿನಿಮಾ ಅಸಲಿಯತ್ತು ನಿಮಗೆ ನೋಡೋಕೆ ಸಿಗಲಿದೆ..  ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ, ಶೇಖರ್ ಕ್ಯಾಮರಾ ವರ್ಕ್, ಸುಧೀರ್ ಕೆ.ಎಮ್.ಬಂಡವಾಳ ಹೂಡಿದ್ದಾರೆ..