ಬಂದೇ ಬಿಡ್ತು ಕಿಲ್ಲರ್ ಲುಕ್ ಡಾಲಿಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಟೀಸರ್.. 

ಸಿನಿಮಾ

ದುನಿಯಾ ಸೂರಿ ತಾನೇಕೆ ಕನ್ನಡ ಚಿತ್ರರಂಗದಲ್ಲಿ ಸುಕ್ಕಾ ಸೂರಿ ಅಂತ ಕರೆಸಿಕೊಳ್ತಿನಿ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.. ಪಾಪ್ ಕಾರ್ನ್ ಮಂಕಿ ಟೀಸರ್ ಇಂದು ಬಿಡುಗಡೆಯಾಗಿದ್ದು, ಪಕ್ಕಾ ರೌಡಿಸಂ ಎಲಿಮೆಂಟ್ ಗಳ ಜೊತೆಗೆ ರಾ ಸ್ಟೋರಿಯ ಸಣ್ಣದೊಂದು ಝಲಕ್ ಬಿಟ್ಟುಕೊಟ್ಟಿರೋದೆ ಇದಕ್ಕೆ ಕಾರಣ.. ಧನಂಜಯ್ಯ ಟಗರು ಸಿನಿಮಾಗಿಂತಲು ಮತ್ತಷ್ಟು ಕಿಲ್ಲರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಲಾಂಗ್ ಮಚ್ಚುಗಳ ನಡುವೆ ರಿವೆಂಜ್ ತೀರಿಸಿಕೊಳ್ತಿರೋದು ಎದ್ದು ಕಾಣ್ತಿದೆ

ಟೀಸರ್ ಮಾಸ್ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವ ಎಲ್ಲ ಮುನ್ಸೂಚನೆಯನ್ನ ನೀಡಿದ್ದು, ಆದಷ್ಟು ಬೇಗ ತೆರೆಗೆ ಬರಲಿದೆ.. ಸೂರಿ ಹಾಗು ಸುರೇಂದ್ರನಾಥ್ ಕಥೆ ಸಿದ್ದ ಮಾಡಿದ್ದು, ಸೂರಿ ನಿರ್ದೇಶನದ ಚಿತ್ರವಾಗಿದೆ.. ಸುಧೀರ್ ಕೆಎಂ ಪಾಪ್ ಕಾರ್ನ್ ಮಂಕಿಗೆ ಬಂಡವಾಳ ಹೂಡಿದ್ದು, ಧನಂಜಯ್ಯ ಸೇರಿದಂತೆ ನಿವೇದಿತಾ, ಅಮೃತ ಐಯ್ಯಂಗಾರ್, ಸಪ್ತಮಿ, ನವೀನ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.. ಚರಣ್ ರಾಜ್ ಮ್ಯೂಸಿಕ್ ನೀಡಿದ್ದು ಶೇಖರ್ ಎಸ್ ಕ್ಯಾಮರವರ್ಕ್ ಈ ಸಿನಿಮಾಗಿದೆ..