ರಾಜ್ಯಾದ್ಯಂತ ಧನಂಜಯ ಫ್ಯಾನ್ಸ್ ಗೆ ವಿಶೇಷ ಪಾಪ್ ಕಾರ್ನ್ ಮಂಕಿ‌ ಟೈಗರ್ ಶೋ…

ಸಿನಿಮಾ

ಎಲ್ಲೆಡೆ ಪಾಪ್ ಕಾರ್ನ್ ಮಂಕಿ ಟೈವರ್ ದೇ ಸೌಂಡ್… ಹೌದು, ರಾಜ್ಯಾದ್ಯಂತ ಶುರುವಾಗ್ತಿದೆ ಪಾಪ್ ಕಾರ್ನ್ ಮಂಕಿ‌ ಟೈಗರ್ ಜ್ವರ.. ಇದೇ ಶುಕ್ರವಾರ ರಿಲೀಸ್ ಆಗ್ತಿರುವ ಪಾಪ್ ಕಾರ್ನ್ ಚಿತ್ರಕ್ಕಾಗಿ ಅಭಿಮಾನಿಗಳಿಂದ ಭಾರಿ ಬೇಡಿಕೆ ಶುರುವಾಗಿದೆ.

ಡಾಲಿ ಧನಂಜಯ ಫ್ಯಾನ್ಸ್ ಒತ್ತಾಯದ ಮೇರೆಗೆ
ಜೆಪಿ ನಗರ ಸಿದ್ದೇಶ್ವರ ಥಿಯೇಟರ್ ನಲ್ಲಿ ವಿಶೇಷ ಫ್ಯಾನ್ಸ್ ಶೋ‌ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಮುಂಜಾನೆ 7 ಗಂಟೆಗೆ ಪಾಪ್ ಕಾರ್ನ್ ಮಂಕಿ‌ ಟೈಗರ್ ಚಿತ್ರದ ಪ್ರದರ್ಶನವಿದ್ದು, ಈಗಾಗಲೇ ಬುಕ್ ಮೈ ಶೋನಲ್ಲಿ ಅಭಿಮಾನಿಗಳು ಟಿಕೆಟ್ಸ್ ಬುಕ್ಕಿಂಗ್ ಆರಂಭಿಸಿದ್ದಾರೆ.

ಇದೇ ಶುಕ್ರವಾರ ಬಿಡುಗಡೆಯಾಗ್ತಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಸುಮಾರು 300ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರು, ತುಮಕೂರು, ಮೈಸೂರು, ಹಾಸನ,ಮಂಡ್ಯ , ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಕೋಲಾರ್ ಜಿಲ್ಲೆಗಳಲ್ಲಿ ಡಾಲಿ ಧನಂಜಯ ಅಭಿಮಾನಿಗಳು ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಇದೇ ಶುಕ್ರವಾರ ಡಾಲಿ ಅಭಿಮಾನಿಗಳಿಗೆ ಹಬ್ಬ ಅಂತಾನೆ ಹೇಳಬಹುದು..