ದಾಖಲೆಯ ಕಲೆಕ್ಷನ್ಸ್ ಮಾಡಿದ ಪಾಪ್ ಕಾರ್ನ್ ಮಂಕಿ‌ ಟೈಗರ್..

ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸೂರಿ ಮ್ಯಾಜಿಕ್ ಕಮಾಲ್‌ ಮಾಡಿದೆ. ಹೌದು, ಡಾಲಿ ಹಾಗೂ ಸೂರಿ ಕಾಂಬಿನೇಷನ್ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ.

ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದ ಮಂಕಿ ಸೀನ. ಎರಡನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರ ಮುಂದುವರೆಸಿದೆ.

ಫಸ್ಟ್ ಡೇ ಬಾಕ್ಸ್ ಆಫೀಸ್ ಬರೋಬ್ಬರಿ 2.53ಕೋಟಿ ಗಳಿಸಿದೆ ಪಾಪ್ ಕಾರ್ನ್ ಮಂಕಿ ಟೈಗರ್. ಎರಡನೇ ದಿನವೂ ಡಾಲಿ -ಸೂರಿ ಕಾಂಬಿನೇಷನ್ ಅಬ್ಬರ ಮುಂದುವರೆದಿದೆ. ಹಾಗಿದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಮೂರೇ ದಿನಕ್ಕೆ ಗಳಿಸಿದ್ದು ಎಷ್ಟು ಗೊತ್ತಾ.?
ಮೊದಲ ಮೂರು ದಿನ ಪಾಪ್ ಕಾರ್ನ್ ಮಂಕಿ ಟೈಗರ್ ಗಳಿಸಿದ್ದು ಬರೋಬ್ಬರಿ 7.19ಕೋಟಿ.

ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಡಾಲಿ ಧನಂಜಯ ಪಾಪ್‌ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ. ಈ ಸಂದರ್ಭದಲ್ಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಧನಂಜಯ ಅಭಿನಯಕ್ಕೆ‌ ಹಾಗೂ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನೂರು ದಿನ ಪೂರೈಸಲಿ ಎನ್ನುವುದೇ ಡಾಲಿ ಅಭಿಮಾನಿಗಳ ಆಶಯವಾಗಿದೆ.