ರಿಲೀಸ್ ಗೂ ಮೊದಲ್ಲೇ ಕೋಟಿ ಕೋಟಿ ಬ್ಯುಸಿನೆಸ್ ‌ಮಾಡಿದ‌ ಪಾಪ್ ಕಾರ್ನ್‌ ಮಂಕಿ ಟೈಗರ್..!!!

ಸಿನಿಮಾ

ಟಗರು ಚಿತ್ರದ ನಂತರ ಡಾಲಿ ಧನಂಜಯ ಮುಟ್ಟಿದೆಲ್ಲಾ‌ ಚಿನ್ನವಾಗ್ತಿದೆ ಅಂದ್ರೆ ತಪ್ಪಗಲಾರದು.. ಯಾಕೆಂದ್ರೆ, ನಟ ಧನಂಜಯ ಅವರ ನಸೀಬು ಬದಲಾಗಿದೆ, ಅದಕ್ಕೆ ಕಾರಣ ವೂ ಇದೆ.. ಎಲ್ಲರಿಗೂ ತಿಳಿದ ಹಾಗೆ ದುನಿಯಾ ಸೂರಿ ನಿರ್ದೇಶನದ ಪಾಪ್‌‌ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಡಾಲಿ ಧನಂಜಯ ಅಭಿ‌ನಯಿಸುತ್ತಿರುವ ವಿಷಯ ತಿಳಿದೆ ಇದೆ. ಈ ಸಿನಿಮಾದ ಟೀಸರ್ ಹಾಗೂ ಮಾದೇವಾ ಸಾಂಗ್ ಎಲ್ಲೆಡೆ ಭಾರಿ ಸದ್ದು ಮಾಡಿತ್ತು..

ಸದ್ಯಕ್ಕೆ ಗಾಂಧಿನಗರದಿಂದ ಹೊಸ ಸುದ್ದಿಯೊಂದು ಹೊರ ಬಿದಿದ್ದೆ.. ಪಾಪ್ ಕಾರ್ನ್‌ ಮಂಕಿ ಟೈಗರ್ ಚಿತ್ರ ರಿಲೀಸ್ ಗೂ ಮೊದಲೇ 10 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಮಾಡಿರೋ ಸುದ್ದಿ ಬಂದಿದೆ. ಅಲ್ಲದೆ  ಸಿನಿಮಾವನ್ನ ಬರೊಬ್ಬರಿ 4 ಕೋಟಿ ರೂಪಾಯಿ ಎನ್.ಆರ್.ಎ ರೇಟ್  ಕೊಟ್ಟು ಪುಷ್ಕರ್ ಫಿಲಂಸ್ ಮತ್ತು ಮೋಹನ್ ಫಿಲಂಸ್ ಖರೀದಿ ಮಾಡಿದೆಯಂತೆ.

ಮೂಲಗಳ ಪ್ರಕಾರ ಕನ್ನಡದ ದೊಡ್ಡ ಚಾನೆಲ್ ವೊಂದು ಭಾರಿ ಮೊತ್ತಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್  ಖರೀದಿ ಮಾಡೋದಕ್ಕೆ ನಿರ್ಧಸಿರಿಸಿದೆಯಂತೆ. ಈಗಾಗಲೇ‌ ಒಂದು‌ ಸುತ್ತಿನ ಮಾತುಕತೆ ಕೂಡ ಮುಗಿದಿದೆ‌‌ ಎನ್ನಲಾಗಿದೆ.‌ ಇಷ್ಟೆಯಲ್ಲಾ ಡಾಲಿ- ಸೂರಿ ಸಿನಿಮಾಗೆ ಡಿಜಿಟಲ್ ಮಾರ್ಕೆಟ್ ನಲ್ಲಿ ಭಾರಿ ಬೇಡಿಕೆ‌ ಬಂದಿದ್ದು, ಅಮೇಜಾನ್ ನಿಂದ ಈ ಚಿತ್ರಕ್ಕೆ ಬಂಪರ್ ಆಫರ್ ಬಂದಿದೆಯಂತೆ.

ಇದೇ ಮೊದಲ ಬಾರಿಗೆ ಡಾಲಿ ಧನಂಜಯ ನಾಯಕನಾಗಿ ಅಭಿನಯದ ಸಿನಿಮಾವೊಂದು ಇಷ್ಟು ದೊಡ್ಡ ಮೊತ್ತಕ್ಕೆ ವಿತರಣೆಯ ಹಕ್ಕು ಎನ್.ಆರ್.ಎಗೆ ಸೋಲ್ಡೌಟ್ ಆಗಿದೆ.

ರಾಜ್ಯದಾದ್ಯಂತ  ಗಲ್ಲಿಗಲ್ಲಿಯಲ್ಲೂ ಕ್ರೇಜ್  ಹುಟ್ಟಿಸಿರುವ ಪಾಪ್ ಕಾರ್ನ್‌ ಮಂಕಿ‌ ಟೈಗರ್ ಸ್ಯಾಂಡಲ್ ವುಡ್‌ ಅಂಗಳದಲ್ಲಿ ಹೊಸ ಇತಿಹಾಸ ಬರೆಯಲಿದೆಯಂತೆ‌‌‌. ಒಟ್ಟಿನಲ್ಲಿ‌ ರಾಜ್ಯದಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಶಿವರಾತ್ರಿ ಹಬ್ಬದಂದು ರಿಲೀಸ್‌‌ ಆಗಲಿದೆ ಹೊಸ ದಾಖಲೆ ಸೃಷ್ಟಿಸುವ ಎಲ್ಲಾ‌ ಸೂಚನೆ‌‌ ನೀಡ್ತಿದೆ.‌