ಕಟೌಟ್ ಗೆ ಬಿಯರ್ ಅಭಿಷೇಕ ಮಾಡಿದ ಡಾಲಿ ಧನಂಜಯ ಅಭಿಮಾನಿಗಳು..

ಸಿನಿಮಾ

ಇಂದು ರಾಜ್ಯಾದ್ಯಂತ ಪಾಪ್ ಕಾರ್ನ್‌ ಮಂಕಿ‌ ಟೈಗರ್ ಚಿತ್ರ ರಿಲೀಸ್‌ ಆಗಿದೆ.‌ ಶಿವರಾತ್ರಿ ಹಬ್ಬದಂದು ಅಬ್ಬರಿಸಿದ ಪಾಪ್ ಕಾರ್ನ್‌ ಮಂಕಿ ಟೈಗರ್ ಗೆ ಎಲ್ಲೆಡೆ‌ ಅಭಿಮಾನಿಗಳಿಂದ ಸೆಲೆಬ್ರೇಷನ್‌ ಜೋರು. ಇನ್ನು ಮುಂಜಾನೆ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಅಭಿಮಾನಿಗಳು ಬಿಯರ್ ನಿಂದ ಅಭಿಷೇಕ ಮಾಡಿದ್ರು.

ಡಾಲಿ ಧನಂಜಯ ಮಂಕಿ ಸೀನನ‌ ಕಟೌಟ್ ಗೆ ಬಿಯರ್ ನಿಂದ ಅಭಿಷೇಕ ಮಾಡಿದ್ರು ಡಾಲಿ ಅಭಿಮಾನಿಗಳು.
ಜೆ.ಪಿ ನಗರ ಸಿದ್ದೇಶ್ವರ ಚಿತ್ರಮಂದಿರದಲ್ಲಿ‌ ಬೆಳಿಗ್ಗೆಯಿಂದಲೇ ಸೆಲೆಬ್ರೇಷನ್ಸ್‌ ಶುರುವಾಗಿದೆ. ಚಿತ್ರ‌ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರಕ್ರಿಯೆ ಸಿಕ್ಕಿದ್ದು, ಡಾಲಿ ಅಭಿನಯಕ್ಕೆ ಅಭಿಮಾನಿಗಳು ಫಿದಾ‌ ಆಗಿದ್ದಾರೆ.
ಎಲ್ಲೆಡೆ‌ ಮೊದಲ ದಿನವೇ ಮುಂಜಾನೆಯಿಂದ ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ವಿಶ್ವದಾದ್ಯಂತ ಏಕಕಾಲಕ್ಕೆ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಾಪ್‌‌ ಕಾರ್ನ್‌ ಮಂಕಿ‌ ಟೈಗರ್ ರಿಲೀಸ್ ಆಗಿದೆ. ಅಲ್ಲದೆ ಬೆಂಗಳೂರು, ಮೈಸೂರು, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ,ಹುಬ್ಬಳ್ಳಿ, ಗುಲ್ಬರ್ಗಾ ಸೇರಿದಂತೆ ಹಲವಾರು ಥಿಯೇಟರ್ ಗಳಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಹೌಸ್ ಫುಲ್ ಪ್ರದರ್ಶನ…