ಅಪಘಾತದಲ್ಲಿ ಪಾರಾದ ಗೆಳೆಯ ಧ್ರುವ ಸರ್ಜಾನಿಗೆ ಕಿಚ್ಚನಿಂದ ಬಂದ ಸಂದೇಶ ಏನು ಗೊತ್ತಾ?

ಸಿನಿಮಾ

ನಿನ್ನೆ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಕನ್ನಡದ ನಟ ಧ್ರುವಾ ಸರ್ಜಾ ಅಪಘಾತ ಸಂದರ್ಭದಲ್ಲಿ ಆದ ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಗರು ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ಧ್ರುವ ಒಂದು ವಾರದ ಹಿಂದೆ ಹೈದೆರಾಬಾದ್ ನ ರಾಮೋಜಿ ಫಿಲಂ ಸಿಟಿ ಯಲ್ಲಿ ಶೂಟಿಂಗ್ ಮಾಡುತ್ತಿರುವಾಗ ಬೆಂಕಿ ಅವಘಡದಿಂದ ಇದೆ ಮಾದರಿಯಲ್ಲಿ ಪಾರಾಗಿದ್ದರು. ನಿನ್ನೆ ಬಳ್ಳಾರಿಯಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿನ ಹೋಟೆಲ್ ಗೆ ತೆರಳುವ ವೇಳೆ ಅವರ ಕಾರ್ ಮತ್ತೊಂದು ಕಾರಿಗೆ ಗುದ್ದಿ ಅಪಘಾತವಾಯ್ತು! ಆಗ ಅವರು ತಮ್ಮ ಮೆಚ್ಚಿನ ಕಾರ್ ನಲ್ಲಿ ತಮ್ಮ ಇತರ ಇಬ್ಬರು ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಇದಕ್ಕೆ ಸಾಂತ್ವನ ಧ್ರುವ ಸರ್ಜಾರ ಗೆಳೆಯ ಕಿಚ್ಚ ಸುದೀಪ್, “ನೀವು ಅಪಾಯದಿಂದ ಪಾರಾಗಿದ್ದೀರಿ ಎಂದು ಕೇಳಿ ಸಮಾಧಾನವಾಯ್ತು ಗೆಳೆಯಾ. ನಿಮ್ಮ ಮೆಚ್ಚಿನ ಕಾರ್ ನಿಮ್ಮನ್ನು ರಕ್ಷಿಸಿದೆ. ಆದಷ್ಟು ಜಾಗ್ರತೆಯಾಗಿರಿ” ಎಂದು ಸಂದೇಶ ನೀಡಿದ್ದಾರೆ! ಮೇಲ್ನೋಟಕ್ಕೆ ಅಪಘಾತ ವಿಪರೀತವಾಗಿ ಆಗಿದೆಯಾದರೂ ಕಾರ್ ನಲ್ಲಿದ್ದ ಯಾರಿಗೂ ತೊಂದರೆಯಾಗಿಲ್ಲ ಎನ್ನಲಾಗಿದೆ.

ಈ ಘಟನೆಯ ನಂತರ ಪೊಗರು ಚಿತ್ರ ನಿರ್ದೇಶಕ ಧ್ರುವಾರ ಎನರ್ಜಿ ಲೆವೆಲ್ ಅನ್ನು ಹೊಗಳಿದರು. ಅಂದಹಾಗೆ ತನ್ನ ಬಾಲ್ಯದ ಗೆಳತಿ ಪ್ರೇರಣಾರೊಂದಿಗೆ ಈಗಾಗಲೇ ನಿಶ್ಚಿತಾರ್ಥವಾಗಿದ್ದು, ಮದುವೆ ಇದೆ ನವೆಂಬರ್ ನಲ್ಲಿ ನಡೆಯುತ್ತದೆ ಎನ್ನಲಾಗಿದೆ.