ಪಾಪ ಅದ್ಯಾಕೆ ಹಿಂಗಾಯ್ತು ಗಣಿಗೆ..!! ‘ಆರೆಂಜ್’ ಕೊಟ್ಟ ಹುಡುಗಿನೂ ಎಂಗೇಜ್ ಆಗಿದ್ದಾಳಾ..?

ಸಿನಿಮಾ

ಪಾಪ ಅದ್ಯಾಕೆ ಹಿಂಗಾಯ್ತು ಗಣಿಗೆ..!! ‘ಆರೆಂಜ್ಕೊಟ್ಟ ಹುಡುಗಿನೂ ಎಂಗೇಜ್ ಆಗಿದ್ದಾಳಾ..?

ಗಣೇಶ್​​ ಅವ್ರೇ ಈ ಥರಾ ಸ್ಟೋರಿಗಳನ್ನ ಹುಡುಕಿಕೊಂಡು ಹೋಗ್ತಾರೋ, ಅಥವ ಅವ್ರನ್ನೇ ಇಂಥಾ ಕಥೆಗಳು ಹುಡುಕಿಕೊಂಡು ಬರ್ತಾವೋ ಗೊತ್ತಿಲ್ಲ, ಆದ್ರೆ ಗಣೇಶ್ಅಭಿನಯದ ಸಾಕಷ್ಟು ಸಿನಿಮಾಗಳಲ್ಲಿ ಗಣೇಶ್ಗೆ ಸಿಗೋ ಹುಡುಗೀರೆಲ್ಲಾ ಎಂಗೇಜ್ಮೆಂಟ್ಆಗಿರೋರೆ.. ಮುಂಗಾರುಮಳೆಯಿಂದ‌‌ ಹಿಡಿದು ರಿಲೀಸ್ ಗೆ ಸಿದ್ದವಾಗಿರೋ‌ ಆರೆಂಜ್ ಸಿನಿಮಾದ ವರೆಗೂ ಇದು ಮುಂದುವರೆದಿದೆ..

ಈ ಸಿನಿಮಾದಲ್ಲೂ ಗಣಿ ಇಷ್ಟ ಪಡೋ ಹುಡುಗಿ ಎಂಗೇಜ್ಮೆಂಟ್ ಮುಗಿಸಿಕೊಂಡಿದ್ದಾಳೆ.. ಹಂಗಂತ ಈ ಚಿತ್ರದಲ್ಲು ಅದೇ ಥರ ಕಥೆನಾ ಅಂತ ಯೋಚಿಸಿಬೇಡಿ, ಇದು ಪಕ್ಕ ಪ್ರಶಾಂತ್ ರಾಜ್ ಸ್ಟೈಲ್ ನ ಕಾಮಿಡಿ ಕಮ್ ರೊಮ್ಯಾಟಿಂಕ್ ಸಿನಿಮಾ.. ಈಗಾಗ್ಲೇ ಬಿಡುಗಡೆಗೊಂಡಿರುವ ಟ್ರೇಲರ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.. ಇದೇ ಡಿಸಂಬರ್ 7ಕ್ಕೆ ತೆರೆಗೆ ಬರೋಕೆ ರೆಡಿಯಾಗಿರೋ ಆರೆಂಜ್, ಗಣಿ ಪಾಲಿಗೆ ಗೋಲ್ಡ್ ಚಿತ್ರವಾಗಲಿದೆ ಅನ್ನೋ ಮಾತುಗಳು ಈಗಾಗ್ಲೇ ಶುರುವಾಗಿದೆ..