ಮತ್ತೆ ಟ್ರೆಂಡ್ ಸೆಟ್ ಮಾಡಿದ ಸೂರಿ- ಚರಣ್.. ಮಾದೇವ ಸಾಂಗ್ ಗೆ ಸಿನಿಪ್ರಿಯರು ಫಿದಾ..

ಸಿನಿಮಾ

ಡಾಲಿ ಧನಂಜಯ್ ಅಭಿನಯದ ಸುಕ್ಕಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮಾದೇವ ಮಾದೇವ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ… ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ.. ರಿಲೀಸ್ ಆಗಿ ಕೆಲವೇ ಸಮಯದಲ್ಲಿ ಟ್ರೆಂಡಿಯಾಗಿದೆ ಪಾಪ್ ಕಾರ್ನ್ ಮಂಕಿ ಟೈಗರ್ ಮಾದೇವ ಸಾಂಗ್..
ಹೊಸ ತನಕ ಹೆಸರು ಮಾಡಿರುವ ಸುಕ್ಕಾ ಸೂರಿ, ಇದೀಗ ಮತ್ತೊಂದು ವಿಭಿನ್ನತೆಯಿಂದ ಹೆಸರು ಮಾಡ್ತಿದ್ದಾರೆ‌… ಪಾಪ್ ಕಾರ್ನ್ ಮಂಕಿ‌ ಟೈಗರ್ ಎನ್ನುವ ಡಿಫರೆಂಟ್ ಟೈಟಲ್ ಇಟ್ಟು ಜನರ ಮನಸ್ಸು ಗೆದ್ದಿರುವ ಸುಕ್ಕಾ ಸೂರಿ, ಈಗ ಯುವಕರಿಗೆ ಇಷ್ಟವಾಗುವ ವಿಭಿನ್ನವಾದ ಹಾಡವೊಂದನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್ ಮೂಲಕ‌ ಹೊಸ‌ ಸೆನ್ಸೇಷನ್ ಕ್ರಿಯೆಟ್‌‌ ಮಾಡಿದ ಚಿತ್ರತಂಡ, ಇದೀಗ ಹೊಸ ಹಾಡು ಮಾದೇವ ಸಾಂಗ್ ಕಂಗ್ಲಿಷ್ ಲಿರಿಕ್ಸ್​ನಿಂದ ಕೂಡಿದ್ದ​ದು ತುಂಬಾನೇ ಭಿನ್ನವಾಗಿದೆ.

ಸಂಗೀತ ನಿರ್ದೇಶಕ‌ ಚರಣ್‌ ರಾಜ್ ಹಾಗೂ ಸೂರಿ ಮತ್ತೊಮ್ಮೆ ದೊಡ್ಡ ಟ್ರೆಂಡಿ ಹಿಟ್ ಕೊಡೋ ಸೂಚನೆ ಕೊಟ್ಟಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರವನ್ನು ಸುಧೀರ್ ಕೆ.ಎಂ ನಿರ್ಮಿಸುತ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್​ ಸಂಕಲನ ಚಿತ್ರಕ್ಕಿದೆ. ಡಾಲಿ ಧನಂಜಯ, ನಿವೇದಿತಾ, ಕಾಕ್ರೋಚ್, ನವೀನ್, ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.