ಬಿಗ್ ಬಾಸ್ ಮನೆಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ ನಿವೇದಿತಾ ಗೌಡ…!!?

ವಾಹಿನಿ ಸುದ್ದಿ

ಬಿಗ್ ಬಾಸ್ ಮನೆಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ ನಿವೇದಿತಾ ಗೌಡ…!!?

ಕಳೆದ ಸೀಸಿನ್ ನ ಹೈಲೈಟ್ ಅಂದ್ರೆ ನಿವೇದಿತಾ ಗೌಡ. ತಮ್ಮ ವಿಭಿನ್ನ ಶೈಲಿಯ ಆಟ ಹಾಗೂ ತನ್ನ ಮಾತಿನಿಂದ ಸಾಕಷ್ಟು ಜನರ ಮನ ಗೆದ್ದ ಚೆಲುವೆ ಈಕೆ. ಸಾಕಷ್ಟು ಅಭಿಮಾನಿಗಳ ದಂಡೆ ಇರುವ ಈಕೆಯನ್ನು ಬಿಗ್ ಬಾಸ್ ನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ಯಸ್, ನಿವೇದಿತಾ ಅವರನ್ನು ಮತ್ತೆ ಬಿಗ್ ಬಾಸ್ ಮನೆಯಲ್ಲಿ ನೋಡುವ ಅವಕಾಶ ಸಿಕ್ತಿದೆ.  ಒಂದು ಮೂಲದ ಪ್ರಕಾರ ನಿವೇದಿತಾ ಗೌಡ ಇಂದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದು ಖಚಿತವಾಗಿದೆ. ಆದರೆ ಎಷ್ಟು ದಿನ ಇರ್ತಾರೆ ಅನ್ನೋದು ತಿಳಿದು ಬಂದಿಲ್ಲ. ಸದ್ಯಕ್ಕೆ ಇಂದಿನ ಸಂಚಿಕೆಯಲ್ಲಿ ಕಾಣಿಸಿಕೊಳುವುದು ಪಕ್ಕಾ.

ಇವರ ಜೊತೆ ನಟಿ ಮೇಘ ಶ್ರೀ ಹಾಗೂ ಮತ್ತೋರ್ವ ನಟಿ ಜೀವಿತಾ ಕೂಡ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಟ್ವಿಸ್ಟ್ ಕೂಡುವ ಸಾಧ್ಯತೆ ಇದೆ ಎನ್ನಬಹುದು. ಯಾಕಂದರೆ ಬಿಗ್ ಬಾಸ್ ಆಟ ಅಂದ್ರೆ ಹೀಗೆ ತಾನೆ. ಒಟ್ಟಿನಲ್ಲಿ ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಹೊಸ ಸ್ಪರ್ಧಿಗಳ ಆಟ ಶುರುವಾಗಲಿದೆ.